Followers

Monday, July 22, 2019

ಮೆಟ್ರಿಕ್-ಪೂರ್ವ ವಿದ್ಯಾರ್ಥಿವೇತನ
(ಲೆಕ್ಕಶೀರ್ಷಿಕೆ ರಾಜ್ಯವಲಯ ಯೋಜನೆ 2225-03-277-2-52 ಮತ್ತು ಜಿಲ್ಲಾವಲಯ ಯೋಜನೆ ಮತ್ತು ಯೋಜನೇತರ 2225-00-103-0-66) (2019-20ನೇ ಸಾಲಿನ ಆಯವ್ಯಯ ರೂ.9000.00 ಲಕ್ಷಗಳು)
ಮೆಟ್ರಿಕ್-ಪೂರ್ವ ವಿದ್ಯಾರ್ಥಿವೇತನದ ದರಗಳು
(ಸರ್ಕಾರದ ಆದೇಶ ಸಂ.ಬಿಸಿಡಬ್ಲ್ಯೂ 620 ಬಿಎಂಎಸ್ 2014, ದಿನಾಂಕ 7.1.2015ರಂತೆ)
ತರಗತಿಬಾಲಕ/ಬಾಲಕಿAdhoc Grantಒಟ್ಟು
1 ರಿಂದ 5250/-500/-750/-
6 ರಿಂದ 8400/-500/-900/-
9 ರಿಂದ 10500/-500/-1000/-
ವಿಶೇಷ ಸೂಚನೆ: ವಿದ್ಯಾರ್ಥಿಗಳು ಖಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆ ಗೆ ಆಧಾರ್ ಸಂಖ್ಯೆಯನ್ನು ಜೋಡಣೆ (link) ಮಾಡಿಸತಕ್ಕದ್ದು.

ಅರ್ಹತೆಗಳು:
1.ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು.
2.ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ.44,500/-ರ ಒಳಗೆ ಇರಬೇಕು.
3.ಸರ್ಕಾರದ / ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ /ಅನುದಾನರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುವ
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಅರ್ಹರು.
4.ಸರ್ಕಾರದ / ಸರ್ಕಾರದ ಅನುದಾನಿತ ವಿದ್ಯಾರ್ಥಿನಿಲಯಗಳಲ್ಲಿ/ವಸತಿಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ
ಗಳು ವಿದ್ಯಾರ್ಥಿವೇತನ ಪಡೆಯಲು ಅರ್ಹರಿರುವುದಿಲ್ಲ.
5.ಹಿಂದಿನ ತರಗತಿಯಲ್ಲಿ ಶೇ.75 ಕ್ಕಿಂತ ಹೆಚ್ಚು ಹಾಜರಾತಿ ಹೊಂದಿದವರು ಮಾತ್ರ ಅರ್ಹರು.
6.ಹಿಂದಿನ ತರಗತಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು, ವಿದ್ಯಾರ್ಥಿವೇತನ ಪಡೆಯಲು ಅರ್ಹರಿರುವುದಿಲ್ಲ.
ಆಯ್ಕೆ ವಿಧಾನ:
1.ಮೊದಲನೇ ಆದ್ಯತೆ: ಎಲ್ಲಾ ಅರ್ಹ ನವೀಕರಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮಂಜೂರು ಮಾಡುವುದು.
2.ಎರಡನೇ ಆದ್ಯತೆ: ಹಿಂದುಳಿದ ವರ್ಗಗಳ ಪ್ರವರ್ಗ-1ರ ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಮಂಜೂರು ಮಾಡುವುದು.
3.ಮೂರನೇ ಆದ್ಯತೆ: ಉಳಿದ ಮೊತ್ತವನ್ನು ಅರ್ಹವಿರುವ ಪ್ರವರ್ಗ-2ಎ, 3ಎ, 3ಬಿ ಮತ್ತು ಇತರೆ ಹಿಂದುಳಿದ ವರ್ಗಗಳ(ಕೇಂದ್ರ
ಸರ್ಕಾರದ ಹಿಂದುಳಿದ ವರ್ಗದ ಪಟ್ಟಿಯಲ್ಲಿ ಇರುವ ಜಾತಿಗಳು ಮಾತ್ರ) ವಿದ್ಯಾರ್ಥಿಗಳಿಗೆ ಆದಾಯ ಮತ್ತು ಅರ್ಹತೆಯ ಆಧಾರದ
ಮೇಲೆ ಈ ಕೆಳಕಂಡ ಪ್ರಮಾಣದಂತೆ ಮಂಜೂರು ಮಾಡಲಾಗುವುದು.
1ಪ್ರವರ್ಗ - 2ಎಶೇಕಡ 61
2ಪ್ರವರ್ಗ – 3ಎಶೇಕಡ 17
3ಪ್ರವರ್ಗ – 3ಬಿಶೇಕಡ 21
4ಇತರೆ ಹಿಂದುಳಿದ ವರ್ಗಶೇಕಡ 01
ಒಟ್ಟುಶೇಕಡ 100
ಮಂಜೂರಾತಿ ವಿಧಾನ:
1.ಮೆಟ್ರಿಕ್-ಪೂರ್ವ ವಿದ್ಯಾರ್ಥಿವೇತನ ಸೌಲಭ್ಯವನ್ನು ಪಡೆಯಲು ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಿ ಸಾರ್ವಜನಿಕ ಪ್ರಕಟಣೆ ಹೊರಡಿಸುವುದು.
2.ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಗಳನ್ನು ಆನ್ ಲೈನ್ ಮೂಲಕ ಪರಿಶೀಲಿಸಿ, ಅರ್ಹ ಅರ್ಜಿಗಳನ್ನು ದೃಢೀಕರಿಸುವುದು.
3.ಇಲಾಖೆಯ ಮೆಟ್ರಿಕ್-ಪೂರ್ವ ವಿದ್ಯಾರ್ಥಿವೇತನ ಇ-ಪಾಸ್ ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಮಾಹಿತಿಯನ್ನು ಭರ್ತಿ ಮಾಡುವುದು.
4.ಭರ್ತಿ ಮಾಡಿರುವ ಮಾಹಿತಿಯನ್ನು ಪರಿಶೀಲಿಸಿ, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ದೃಢೀಕರಿಸುವುದು.
5.ಆಯ್ಕೆಯಾದ ಅರ್ಹ ಅರ್ಜಿಗಳಿಗೆ ಆಯಾ ವರ್ಷದ ಆಯವ್ಯಯಕ್ಕೆ ಅನುಗುಣವಾಗಿ, ಮೀಸಲಾತಿ ನೀತಿಯನ್ವಯ ವಿದ್ಯಾರ್ಥಿವೇತನವನ್ನು
ಮಂಜೂರು ಮಾಡಿ ಆಧಾರ್ ಪಾವತಿ ವ್ಯವಸ್ಥೆ (Aadhar Bridge Payment System) ಮೂಲಕ ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾಮಾಡುವುದು.
ಮಂಜೂರಾತಿ ಪ್ರಕ್ರಿಯೆಯ ವೇಳಾಪಟ್ಟಿ
1ಅವಶ್ಯಕ ದಾಖಲಾತಿಗಳನ್ನು ವಿದ್ಯಾರ್ಥಿಗಳು ಸಂಬಂಧಪಟ್ಟ ಶಾಲೆಗಳಿಗೆ ಸಲ್ಲಿಸುವಂತೆ ಸಾರ್ವಜನಿಕ ಪ್ರಕಟಣೆ ಹೊರಡಿಸುವುದುಜೂನ್ 15
2ಶಾಲೆಗಳ ಮುಖ್ಯೋಪಾಧ್ಯಾಯರುಗಳಿಗೆ ಸೂಕ್ತ ಸೂಚನೆಗಳನ್ನು ಸಂಬಂಧಪಟ್ಟ ಶಿಕ್ಷಣಾಧಿಕಾರಿಗಳ ಮೂಲಕ ನೀಡುವುದುಜೂನ್ 15
3ನಿಗದಿತ ನಮೂನೆಗಳನ್ನು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಸ್ತಾಂತರಿಸುವುದುಜೂನ್ 20
4ಸಂಬಂಧಪಟ್ಟ ಶಾಲೆಗಳಿಂದ ಭರ್ತಿ ಮಾಡಿದ ನಮೂನೆಗಳನ್ನು ಮತ್ತು ದಾಖಲತಿಗಳನ್ನು ಕ್ಷೇತ್ರ ಶಿಕ್ಷಣಾದಿಕಾರಿಗಳ ಮೂಲಕ
ವಾಪಸ್ಸು ಪಡೆಯುವುದು
ಜುಲೈ 10
5ಇಲಾಖೆಯ ಸಾಫ್ಟ್‍ವೇರ್‍ನಲ್ಲಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಯ ಸಂಖ್ಯೆ ಐ.ಎಫ್.ಎಸ್.ಸಿ. ಕೋಡ್, ಆಧಾರ್ ಕಾರ್ಡ್
ಸಂಖ್ಯೆ ಹಾಗೂ ಜಾತಿ ಮತ್ತು ಆದಾಯದ ವಿವರಗಳನ್ನು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ
ಯಲ್ಲಿ ಎಂಟ್ರಿ ಮಾಡುವುದು.
ಆಗಸ್ಟ್-10
6ಆನ್‍ಲೈನ್ ಮಂಜೂರಾತಿ ನೀಡುವುದುಅನುದಾನ ಲಭ್ಯತೆ ಹಾಗೂ ಬಿಡುಗಡೆ
ಆಧಾರದಲ್ಲಿ ಕ್ರಮ ಕೈಗೊಳ್ಳುವುದು.
7ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವಿದ್ಯಾರ್ಥಿವೇತನ ಮೊತ್ತವನ್ನು ಜಮಾ ಮಾಡುವುದು

No comments: