Followers

Monday, July 22, 2019

ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಸ್ವರ್ಧಾತ್ಮಕ ಪರೀಕ್ಷೆಗಳ ಪರೀಕ್ಷಾ ಪೂರ್ವ ತರಬೇತಿ
(ಲೆಕ್ಕಶೀರ್ಷಿಕೆ ರಾಜ್ಯವಲಯ ಯೋಜನೆ 2225-03-277-2-37) (2016-17ನೇ ಸಾಲಿನ ತರಬೇತಿ, ಅರಿವು ಮತ್ತು ಪ್ರೋತ್ಸಾಹ, ಹಿಂದುಳಿದ
ವರ್ಗಗಳ ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮದಡಿ ಒದಗಿಸಿರುವ ಆಯವ್ಯಯ ರೂ.3466.00 ಲಕ್ಷಗಳಲ್ಲಿ ಹಂಚಿಕೆ ಮಾಡಲಾಗುವುದು)
ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಐ.ಎ.ಎಸ್, ಕೆ.ಎ.ಎಸ್ ಹಾಗೂ ಬ್ಯಾಂಕ್ ಪ್ರೊಬೇಷನರ್ ಆಫೀಸರ್ಸ್ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ
ತರಬೇತಿಯನ್ನು ಪ್ರತಿಷ್ಟಿತ ಖಾಸಗಿ ತರಬೇತಿ ಸಂಸ್ಥೆಗಳ ಮೂಲಕ ನೀಡಲಾಗುತ್ತಿದೆ.
ಅರ್ಹತೆಗಳು:
1.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಿಂದುಳಿದ ವರ್ಗಗಳ ಅಭ್ಯರ್ಥಿಯು ಐ.ಎ.ಎಸ್, ಕೆ.ಎ.ಎಸ್ ಅಥವಾ ಬ್ಯಾಂಕ್
ಪ್ರೊಬೇಷನರ್ ಆಫೀಸರ್ಸ್ ಪರೀಕ್ಷೆಗಳ ಪರೀಕ್ಷಾ ಪೂರ್ವ ತರಬೇತಿಗಳಲ್ಲಿ ಯಾವುದಾರೊಂದಕ್ಕೆ ಒಂದು ಬಾರಿ ಮಾತ್ರ ಉಚಿತ
ಪರೀಕ್ಷಾ ಪೂರ್ವ ತರಬೇತಿಯನ್ನು ಪಡೆಯಬಹುದು.
2.ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು, ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಅಥವಾ 3(ಬಿ) ಗೆ ಸೇರಿದ ಅರ್ಹ
ಅಭ್ಯರ್ಥಿಗಳು oಟಿಟiಟಿe ಮೂಲಕ ಅರ್ಜಿಗಳನ್ನು ಸಲ್ಲಿಸುವುದು.
3.ಅಭ್ಯರ್ಥಿಯ ಮತ್ತು ಕುಟುಂಬದ ವಾರ್ಷಿಕ ಆದಾಯ ಮಿತಿ ಪ್ರವರ್ಗ 1 ರ ಅಭ್ಯರ್ಥಿಗಳಿಗೆ ರೂ.4.50 ಲಕ್ಷ ಹಾಗೂ ಪ್ರವರ್ಗ 2(ಎ),
3(ಎ) ಮತ್ತು 3(ಬಿ) ಅಭ್ಯರ್ಥಿಗಳಿಗೆ ರೂ.3.50 ಲಕ್ಷಗಳು.
4.ಅಭ್ಯರ್ಥಿಯು ಸಕ್ಷಮ ಪ್ರಾಧಿಕಾರದಿಂದ ಪಡೆದಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಹೊಂದಿರಬೇಕು.
5.ಅಭ್ಯರ್ಥಿಯು ಯಾವುದಾದರೊಂದು ಅಂಗೀಕೃತ ವಿಶ್ವವಿದ್ಯಾಲಯದ ಪದವೀಧರನಾಗಿರಬೇಕು ಅಥವಾ ಕೇಂದ್ರ ಲೋಕಸೇವಾ ಆಯೋಗ/ಕರ್ನಾಟಕ
ಲೋಕಸೇವಾ ಆಯೋಗ/ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು (ಬ್ಯಾಂಕ್) ಕೋರುವ ಷರತ್ತಿಗೊಳಪಟ್ಟಿರಬೇಕು.
6.ಅಭ್ಯರ್ಥಿಯ ವಯೋಮಿತಿ ಕನಿಷ್ಠ 21 ವರ್ಷ ವಯಸ್ಸಿನವರಾಗಿರಬೇಕು.
7.ಕೇಂದ್ರ/ರಾಜ್ಯ ಸರ್ಕಾರದ/ಅನುದಾನಿತ ಸಂಸ್ಥೆಗಳ/ಸಾರ್ವಜನಿಕ ಸ್ವಾಮ್ಯತೆಗೆ ಒಳಪಟ್ಟ ಸಂಸ್ಥೆಗಳಲ್ಲಿನ ನೌಕರರು ಅರ್ಜಿ ಸಲ್ಲಿಸಲು ಮತ್ತು ತರಬೇತಿ
ಪಡೆಯಲು ಅರ್ಹರಲ್ಲ.
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ:
1.ದಿನಪತ್ರಿಕೆಗಳು/ವೆಬ್‍ಸೈಟ್ ಮುಖಾಂತರ ವ್ಯಾಪಕ ಪ್ರಚಾರವನ್ನು ನೀಡಿ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ
ಅರ್ಜಿಗಳನ್ನು ಅಹ್ವಾನಿಸಲಾಗುವುದು.
2.ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ಏರ್ಪಡಿಸಲಾಗುವುದು ಹಾಗೂ ಲಿಖಿತ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳು,
ಪ್ರವರ್ಗವಾರು ಮೀಸಲಾತಿ,ವಿವಿಧ ಸಂಸ್ಥೆಗಳಲ್ಲಿ ಲಭ್ಯವಿರುವ ಹಾಗೂ ಈ ಸಂಸ್ಥೆಗಳಿಗೆ ಸರ್ಕಾರ ನಿಗದಿಪಡಿಸುವ ಸಂಖ್ಯೆ
ಗಳಿಗೆ ಅನುಗುಣವಾಗಿ ಅಭ್ಯರ್ಥಿಗಳನ್ನು ಅವರ ಮೂಲ ದಾಖಲೆಗಳ ಪರಿಶೀಲನೆ ಮಾಡಿದ ನಂತರ ತರಬೇತಿಗಾಗಿ ಕೌನ್ಸಿ
-ಲಿಂಗ್ ಮೂಲಕ ವಿವಿಧ ತರಬೇತಿ ಸಂಸ್ಥೆಗಳಿಗೆ ನಿಯೋಜಿಸಲಾಗುವುದು.
3.ಲಿಖಿತ ಪರೀಕ್ಷೆಯು ಇಂಗ್ಲೀಷ್, ಸಾಮಾನ್ಯ ಜ್ಞಾನ ಮತ್ತು ಗಣಿತ ಇತ್ಯಾದಿ ವಿಷಯಗಳನ್ನು ಒಳಗೊಂಡಿರುತ್ತದೆ.
ತರಬೇತಿಗೆ ಆಯ್ಕೆಯಾಗಿ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಸರ್ಕಾರದ ವತಿಯಿಂದ ನೀಡುವ ಸೌಲಭ್ಯಗಳು:
1.ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ತರಬೇತಿ ಅವಧಿಗೆ ಮಾಸಿಕ ತರಬೇತಿ ಭತ್ಯೆಯನ್ನು ಕೆಳಕಂಡಂತೆ ನೀಡಲಾಗುವುದು.
ಕ್ರ. ಸಂ.ಪರೀಕ್ಷಾ ಪೂರ್ವ ತರಬೇತಿತರಬೇತಿ ಸಂಸ್ಥೆಯ ಸ್ಥಳತರಬೇತಿ ಭತ್ಯೆ (ಪ್ರತಿ ಅಭ್ಯರ್ಥಿಗೆ)
1ಐ.ಎ.ಎಸ್.
ದೆಹಲಿ
ಹೈದರಾಬಾದ್
ಬೆಂಗಳೂರು
6000 + ತರಬೇತಿ ವೆಚ್ಚ
10000 + ತರಬೇತಿ ವೆಚ್ಚ
ತರಬೇತಿ ಸಂಸ್ಥೆ ಇರುವ ಸ್ಥಳಕ್ಕೆ ಸಂಬಂಧಿಸಿದಂತೆ ಸ್ಥಳೀಯ ಜಿಲ್ಲೆಯ ಅಭ್ಯರ್ಥಿಗಳಿಗೆ
2000 ಮತ್ತು ಹೊರ ಜಿಲ್ಲೆಗಳ ಅಭ್ಯರ್ಥಿಗಳಿಗೆ 4000 ಹಾಗೂ ತರಬೇತಿ ವೆಚ್ಚ
2ಕೆ.ಎ.ಎಸ್.ಕರ್ನಾಟಕತರಬೇತಿ ಸಂಸ್ಥೆ ಇರುವ ಸ್ಥಳಕ್ಕೆ ಸಂಬಂಧಿಸಿದಂತೆ ಸ್ಥಳೀಯ ಜಿಲ್ಲೆಯ ಅಭ್ಯರ್ಥಿಗಳಿಗೆ 2000
ಮತ್ತು ಹೊರ ಜಿಲ್ಲೆಗಳ ಅಭ್ಯರ್ಥಿಗಳಿಗೆ 4000 ಹಾಗೂ ತರಬೇತಿ ವೆಚ್ಚ
3ಬ್ಯಾಂಕಿಂಗ್ಕರ್ನಾಟಕತರಬೇತಿ ಸಂಸ್ಥೆ ಇರುವ ಸ್ಥಳಕ್ಕೆ ಸಂಬಂಧಿಸಿದಂತೆ ಸ್ಥಳೀಯ ಜಿಲ್ಲೆಯ ಅಭ್ಯರ್ಥಿಗಳಿಗೆ 2000
ಮತ್ತು ಹೊರ ಜಿಲ್ಲೆಗಳ ಅಭ್ಯರ್ಥಿಗಳಿಗೆ 4000 ಹಾಗೂ ತರಬೇತಿ ವೆಚ್ಚ
2.ತರಬೇತಿ ಶುಲ್ಕವನ್ನು ಇಲಾಖೆಯಿಂದಲೇ ತರಬೇತಿ ಸಂಸ್ಥೆಗೆ ಪಾವತಿಸಲಾಗುವುದು.
3.ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಸಂಸ್ಥೆಯಿಂದ ಒಂದು ಸೆಟ್ ಕೋರ್ಸ್ ಮೆಟೀರಿಯಲ್ ಅನ್ನು
ನೀಡಲಾಗುವುದು.
4. ಐ.ಎ.ಎಸ್ ಪರೀಕ್ಷಾ ಪೂರ್ವ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಸ್ವಂತ ಸ್ಥಳದಿಂದ ತರಬೇತಿ ಸಂಸ್ಥೆ ಇರುವ ಸ್ಥಳಕ್ಕೆ
ಒಂದು ಬಾರಿ ಹೋಗಿ ಬರಲು ದ್ವಿತೀಯ ದರ್ಜೆ ರೈಲ್ವೆ (ಸ್ಲೀಪರ್) ಪ್ರಯಾಣ ಭತ್ಯೆ ನೀಡಲಾಗುವುದು.
ಐ.ಎ.ಎಸ್ ಪರೀಕ್ಷೆಗೆ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು

No comments: