ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ.
1. ಹಿಂದುಳಿದ ವರ್ಗಗಳ ಜನರು ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಚಟುವಟಿಕೆಗಳಿಗನುಸಾರ ಈ ಕೆಳಕಂಡಂತೆ ಸಾಲ ಮತ್ತು ಸಹಾಯಧನ ಸೌಲಭ್ಯವನ್ನು ಒದಗಿಸಲಾಗುವುದು.
1. ಘಟಕ ವೆಚ್ಚ ರೂ.50,000/-ಗಳಿಗೆ ಶೇ.30 ರಷ್ಟು ಗರಿಷ್ಟ ರೂ.10,000/-ಗಳ ಸಹಾಯಧನ ಉಳಿಕೆ ಶೇ.70ರಷ್ಟು ರೂ.40,000/-ಗಳನ್ನು ಶೇ.4ರ ಬಡ್ಡಿ ದರದಲ್ಲಿ ಸಾಲ.
2. ಘಟಕ ವೆಚ್ಚ ರೂ.50.001/-ರಿಂದ ರೂ.1,00,000/-ಗಳವರೆಗೆ ಶೇ.20 ರಷ್ಟು ಗರಿಷ್ಟ ರೂ.20,000/-ಗಳ ಸಹಾಯಧನ ಉಳಿಕೆ ಶೇ.80ರಷ್ಟು ರೂ.80,000/-ಗಳನ್ನು ಶೇ.4ರ ಬಡ್ಡಿ ದರದಲ್ಲಿ ಸಾಲ.
3. ಘಟಕ ವೆಚ್ಚ ರೂ.1,00,001/-ರಿಂದ ರೂ.2,00,000/-ಗಳವರೆಗೆ ಶೇ.15 ರಷ್ಟು ಕನಿಷ್ಟ ರೂ.20,000/-ಗಳ ಗರಿಷ್ಟ ರೂ.30,000/-ಗಳ ಸಹಾಯಧನ ಉಳಿಕೆ ಶೇ.85ರಷ್ಟು ರೂ.1,70,000/-ಗಳನ್ನು ಶೇ.4ರ ಬಡ್ಡಿ ದರದಲ್ಲಿ ಸಾಲ.
2. ಅರ್ಹತೆ:
ಅ) ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಸೇರಿದವರಾಗಿರಬೇಕು. (ವಿಶ್ವಕರ್ಮ ಅದರ ಉಪ ಸಮುದಾಯಗಳು, ಉಪ್ಪಾರ ಅದರ ಉಪ ಸಮುದಾಯಗಳು, ಅಂಬಿಗ ಅದರ ಉಪ ಸಮುದಾಯಗಳು ಮತ್ತು ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ)
ಆ) ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.40,000/-ಗಳು ಪಟ್ಟಣ ಪ್ರದೇಶದವರಿಗೆ ರೂ.55,000/-ಗಳ ಒಳಗಿರಬೇಕು.
ಇ) ಅರ್ಜಿದಾರರ ವಯಸ್ಸು 18 ರಿಂದ 55 ವರ್ಷದೊಳಗಿರಬೇಕು.
ಈ) ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
ಉ) ಈ ಹಿಂದೆ ಈಗಾಗಲೇ ನಿಗಮದ ಯೋಜನೆಗಳಲ್ಲಿ ಸೌಲಭ್ಯ ಪಡೆದಿರಬಾರದು.
3. ಸಾಲದ ಮರುಪಾವತಿ ಅವಧಿ: 3 ವರ್ಷಗಳು(ಮಾಸಿಕ ಕಂತುಗಳಲ್ಲಿ).
4. ಸಾಲದ ಉದ್ದೇಶಗಳು: ಈ ಯೋಜನೆಯಲ್ಲಿ ಕೃಷಿ ಅವಲಂಭಿತ ಚಟುವಟಿಕೆಗಳು, ವ್ಯಾಪಾರ ಚಟುವಟಿಕೆಗಳು ಹಾಗೂ ಸೇವಾ ವಲಯ ಚಟುವಟಿಕೆಗಳಿಗೆ ಸಾಲ ಸೌಲಭ್ಯ ಒದಗಿಸುವುದು.
No comments:
Post a Comment