Followers

Monday, July 22, 2019

ರ್ನಾಟಕ ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ಮಂಡಳಿ ಒದಗಿಸಿದ ಮೊತ್ತದಿಂದ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳು: 

1. ಅಲೆಮಾರಿ/ಅರೆ ಅಲೆಮಾರಿ ಜನಾಂಗದ ಸ್ವಯಂ ಉದ್ಯೋಗ ಸಾಲ ಯೋಜನೆ:

ಸರ್ಕಾರದ ಆದೇಶ ಸಂಖ್ಯೆ: ಪಿ.ಹೆಚ್.ಎಸ್ 262 ಎಸ್.ಇ.ಡಬ್ಲ್ಯೂ 65, ದಿನಾಂಕ: 01/02/1966ರನ್ವಯ ಅಲೆಮಾರಿ/ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ 1) ಬೈರಾಗಿ (ಬಾವ), 2) ಬಾಲ ಸಂತೋಷಿ-ಜೋಷಿ, 3) ಬಾಜಿಗರ್, 4)ಭರಡಿ, 5)ಬುಡಬುಡಕಿ-ಜೋಶಿ-ಗೋಂಧಳಿ, 6)ಚಾರ, 7)ಚಿತ್ರಕಥಿ-ಜೋಷಿ, 8)ಧೋಲಿ, 9)ಢವೇರಿ, 10)ದೊಂಬರಿ, 11)ಘಿಸಾಡಿ, 12)ಗರುಡಿ, 13)ಗೋಪಾಲ್, 14)ಗೊಂದÀಳಿ, 15)ಹೆಳವ, 16)ಜೋಗಿ, 17)ಕೇಲ್ಕರಿ, 18)ಕೋಲ್ಹಟಿ, 19)ನಂದಿವಾಲ-ಜೋಷಿ-ಗೊಂದಳಿ, ಪುಲ್‍ಮಾಲ್ಲಿ, 20)ನಾಥಪಂಥಿ-ಡೌರಿ-ಗೋಸಾವಿ 21)ನಿರ್ಶಿಕಾರಿ, 22)ಪಾಂಗ್ಯುಯಲ್, 23)ಜೋಷಿ (ಸಾದ ಜೋಷಿ), 24)ಸಾನ್ಸಿಯ, 25)ಸರಾನಿಯ, 26)ತಿರುಮಲಿ, 27)ವಾಯ್ಡು 28)ವಾಸುದೇವ್, 29)ವಾಡಿ, 30)ವಾಗ್ರಿ, 31)ವಿರ್, 32)ಬಜನಿಯ, 33)ಶಿಕ್ಕಲಿಗರ್, 34)ಗೊಲ್ಲ, 35)ಕಿಲ್ಲಿಕ್ಯಾತಸ್, 36)ಸರೋಡಿ, 37)ದುರ್ಗ-ಮುರ್ಗ (ಬುರ್‍ಬುರ್‍ಚ), 38)ಹಾವಗಾರ್ (ಹಾವಾಡಿಗಾರ್), 39)ಪಿಚಗುಂಟಲ, 40)ಮಸಣಿಯ ಯೋಗಿ, 40)(ಬೆಸ್ತರ್)ಬುಂಡಬೆಸ್ತ, 42)ಕಟಬು,  43)ದರ್ವೆಶ್, 44)ಕಾಶಿ ಕಪಾಡಿ, 45)ದೊಂಬಿದಾಸ ಮತ್ತು 46)ಬೈಲ್‍ಪತರ್ ಜನಾಂಗಕ್ಕೆ ಸೇರಿದವರಿಗೆ ಸ್ವಯಂ ಉದ್ಯೋಗಕ್ಕೆ ಅವರು ಕೈಗೊಳ್ಳುವ ಆರ್ಥಿಕ ಚಟುವಟಿಕೆ ಅನುಸಾರ   ರೂ.2,00,000/-ಗಳವರೆಗೆ ಈ ಕೆಳಕಂಡಂತೆ ಸೌಲಭ್ಯ ಒದಗಿಸಲಾಗುವುದು.
ಘಟಕ ವೆಚ್ಚ ರೂ.50,000/-ಗಳಿಗೆ  ಶೇ.30ರಷ್ಟು ಗರಿಷ್ಟ ರೂ.10,000/-ಗಳ ಸಹಾಯಧನ ಉಳಿಕೆ ಶೇ.70ರಷ್ಟು ರೂ.40,000/-ಗಳನ್ನು ಶೇ.4ರ ಬಡ್ಡಿ ದರದಲ್ಲಿ ಸಾಲ.
ಘಟಕ ವೆಚ್ಚ ರೂ.50,001/-ರಿಂದ ರೂ.1,00,000/-ಗಳವರೆಗೆ ಶೇ.20ರಷ್ಟು ಗರಿಷ್ಟ ರೂ.20.000/-ಗಳ ಸಹಾಯಧನ ಉಳಿಕೆ ಶೇ.80ರಷ್ಟು ರೂ.80,000/-ಗಳನ್ನು ಶೇ.4ರ ಬಡ್ಡಿ ದರದಲ್ಲಿ ಸಾಲ.
ಘಟಕ ವೆಚ್ಚ ರೂ.1,00,001/-ರಿಂದ ರೂ.2,00,000/-ಗಳವರೆಗೆ ಶೇ.15ರಷ್ಟು ಕನಿಷ್ಟ  ರೂ.20,000/-ಗಳ ಗರಿಷ್ಟ ರೂ.30,000/-ಗಳ ಸಹಾಯಧನ ಉಳಿಕೆ ಶೇ.85ರಷ್ಟು ರೂ.1.70.000/-ಗಳನ್ನು ಶೇ.4ರ ಬಡ್ಡಿ ದರದಲ್ಲಿ ಸಾಲ.​

2. ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಆರ್ಥಿಕ ನೆರವು ಯೋಜನೆ: ಅಲೆಮಾರಿ/ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ ಮಹಿಳೆಯರು ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳಿಗೆ ತಲಾ ರೂ.35000/-ಗಳ ವರೆಗಿನ ಶೇ.30ರಷ್ಟು ಗರಿಷ್ಠ ರೂ.10000/-ಗಳ ಸಹಾಯಧನ ಉಳಿಕೆ ಶೇ.70ರಷ್ಟು ರೂ.25000/-ಗಳು ವಾರ್ಷಿಕ 4ರ ಬಡ್ಡಿದರದಲ್ಲಿ ಸಾಲ. ಪ್ರತಿ ಮಹಿಳಾ ಸ್ವ ಸಹಾಯ ಗುಂಪಿಗೆ ಗರಿಷ್ಠ ರೂ.3.50ಲಕ್ಷಗಳ ಸೌಲಭ್ಯ ಒದಗಿಸಲಾಗುವುದು.

3. ಅಲೆಮಾರಿ/ಅರೆ ಅಲೆಮಾರಿ ಅರಿವು-ಶೈಕ್ಷಣಿಕ ಸಾಲ ಯೋಜನೆ ಸಾಲ ಯೋಜನೆ: ಅಲೆಮಾರಿ/ಅರೆ ಅಲೆಮಾರಿ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡಲು ವಾರ್ಷಿಕ ಶೇ.2ರ ಬಡ್ಡಿದರದಲ್ಲಿ ವಾರ್ಷಿಕ ಗರಿಷ್ಠ ರೂ.1.00ಲಕ್ಷಗಳ ವರೆಗೆ ಆರ್ಥಿಕ ನೆರವು ಒದಗಿಸಲಾಗುವುದು. ಅರಿವು-ಶೈಕ್ಷಣಿಕ ಸಾಲ ಯೋಜನೆಯಲ್ಲಿ ಗುರುತಿಸಿರುವ 28 ಕೋರ್ಸ್‍ಗಳು ಹಾಗೂ (1) ಡಿಪ್ಲೊಮೊ, (2) ಐ.ಟಿ.ಐ., (3) ನರ್ಸಿಂಗ್, (4) ಬಿ.ಎ., (5) ಬಿ.ಎಸ್.ಸಿ., (6) ಎಂ.ಎ., (7) ಎಂ.ಎಸ್.ಸಿ., (8) ಡಿ.ಇ.ಡಿ., (9) ಬಿ.ಎಡ್., ಹಾಗೂ ಸಾಮಾನ್ಯ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸಲಾಗುವುದು. ಈ ಯೋಜನೆಯಲ್ಲಿ ಸೌಲಭ್ಯ ಪಡೆಯಲು ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ಮಿತಿ ರೂ.6.00ಲಕ್ಷಗಳು.

4. ಅಲೆಮಾರಿ/ಅರೆ ಅಲೆಮಾರಿ ಜನಾಂಗದ ಯುವಕರಿಗೆ ಟೂರಿಸ್ಟ್ ಟ್ಯಾಕ್ಸಿ/ಸರಕು ಸಾಗಾಣಿಕೆ ವಾಹನ ಕೊಳ್ಳಲು ಸಹಾಯಧನ: ವಾಹನ ಚಾಲನಾ ಪರವಾನಗಿಯನ್ನು ಹೊಂದಿರುವ  ಅಲೆಮಾರಿ/ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ 62 ನಿರುದ್ಯೋಗಿ ಯುವಕರಿಗೆ ಟೂರಿಸ್ಟ್ ಟ್ಯಾಕ್ಸಿ/ಸರಕು ಸಾಗಾಣಿಕೆ ವಾಹನಗಳನ್ನು ಖರೀದಿಸಲು ರೂ.3.00ಲಕ್ಷಗಳ ವರೆಗೆ ಅಥವಾ ವಾಹನದ ಶೇ.50ರಷ್ಟು ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಸಹಾಯಧನ ನೀಡಲಾಗುವುದು. ಉಳಿದ ಮೊತ್ತವನ್ನು ಬ್ಯಾಂಕ್‍ಗಳಿಂದ ಸಾಲದ ರೂಪದಲ್ಲಿ ಪಡೆಯವುದು.

5. ಅಲೆಮಾರಿ/ಅರೆ ಅಲೆಮಾರಿ ಗಂಗಾ ಕಲ್ಯಾಣ ನೀರಾವರಿ ಸೌಲಭ್ಯ: ಅಲೆಮಾರಿ/ಅರೆ ಅಲೆಮಾರಿ ಸಮುದಾಯಗಳಿಗೆ ಸೇರಿದ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ವೈಯಕ್ತಿಕ/ಸಾಮೂಹಿಕ ನೀರಾವರಿ ಯೋಜನೆಯ ಘಟಕ ವೆಚ್ಚಗಳಲ್ಲಿ ನೀರಾವರಿ ಸೌಲಭ್ಯ ಒದಗಿಸಲಾಗುವುದು.


6. ಅಲೆಮಾರಿ/ಅರೆ ಅಲೆಮಾರಿ ಭೂ ಖರೀದಿ ಯೋಜನೆ: ಅಲೆಮಾರಿ/ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ ಕನಿಷ್ಠ 1 ಎಕರೆ ತರಿ ಭೂಮಿ ಅಥವಾ 2 ಎಕರೆ ಖುಷ್ಕಿ ಜಮೀನನ್ನು ಕೊಂಡುಕೊಳ್ಳಲು ಸಾಲ ಮತ್ತು ಸಹಾಯಧನ ಒದಗಿಸಲಾಗುವುದು. ಘಟಕ ವೆಚ್ಚ ರೂ.10.00ಲಕ್ಷಗಳನ್ನು ನಿಗದಿಪಡಿಸಿದೆ. ಈ ಮೊತ್ತದಲ್ಲಿ ಶೇ.50ರಷ್ಟು ಸಹಾಯಧನ ಹಾಗೂ ಉಳಿಕೆ ಶೇ.50ರಷ್ಟು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುವುದು.


No comments: