Followers

Monday, July 22, 2019

​​​​​​ಅತ್ಯಂತ/ಅತಿ ಹಿಂದುಳಿದ ತಾಲ್ಲೂಕುಗಳಲ್ಲಿ ಯುವಜನರ ಆರ್ಥಿಕ ಸಶಕ್ತಿಕರಣಕ್ಕಾಗಿ ಆರ್ಥಿಕ ನೆರವು ಯೋಜನೆ: ​
     2016-17ನೇ ಸಾಲಿನ ಆಯವ್ಯಯ ಭಾಷಣದಲ್ಲಿ “ಅತಿ ಹಿಂದುಳಿದ ತಾಲ್ಲೂಕುಗಳಲ್ಲಿ ಯುವಜನರ ಆರ್ಥಿಕ ಸಶಕ್ತೀಕರಣಕ್ಕಾಗಿ ರೂ.10.00ಕೋಟಿಗಳನ್ನು ಒದಗಿಸಲಾಗುವುದು” ಎಂದು ಘೋಷಿಸಲಾಗಿರುತ್ತದೆ. ಆದ್ದರಿಂದ, ಡಾ|| ಡಿ.ಎಂ.ನಂಜುಂಡಪ್ಪ ವರದಿಯಲ್ಲಿ ಗುರುತಿಸಿರುವ ಅತ್ಯಂತ ಹಿಂದುಳಿದ 39 ತಾಲ್ಲೂಕುಗಳು ಹಾಗೂ ಅತಿ ಹಿಂದುಳಿದ 40 ತಾಲ್ಲೂಕುಗಳು ಹೀಗೆ ಒಟ್ಟು 79 ತಾಲ್ಲೂಕುಗಳಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುವ 10 ಸದಸ್ಯರನ್ನು ಒಳಗೊಂಡ ಸ್ವ ಸಹಾಯ ಗುಂಪುಗಳಿಗೆ ಆರ್ಥಿಕ ನೆರವನ್ನು ಒದಗಿಸುವುದು.
         ಈ ಸ್ವ ಸಹಾಯ ಗುಂಪುಗಳ ಮೂಲಕ ಗ್ರಾಮ ಮಟ್ಟದಲ್ಲಿ ಜನರಿಗೆ ಅವಶ್ಯವಿರುವ ಸೇವೆಗಳನ್ನು/ಕಾಮಗಾರಿಗಳನ್ನು ನಿರ್ವಹಿಸಲು ಚಟುವಟಿಕೆ ಅನುಸಾರ ಪ್ರತಿ ಸದಸ್ಯರಿಗೆ ಗರಿಷ್ಠ ರೂ.35000/-ಗಳಂತೆ ಆರ್ಥಿಕ ನೆರವು. ಇದರಲ್ಲಿ, ಶೇ.30ರಷ್ಟು ಗರಿಷ್ಠ ರೂ.10000/-ಗಳ ಸಹಾಯಧನ, ಉಳಿಕೆ ಮೊತ್ತ ಶೇ.70ರಷ್ಟು ಗರಿಷ್ಠ ರೂ.25000/-ಗಳು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಒದಗಿಸಲಾಗುವುದು. ಹೀಗೆ ಪ್ರತಿ ಗುಂಪಿಗೆ ಗರಿಷ್ಠ ರೂ.3.50ಲಕ್ಷಗಳ ಆರ್ಥಿಕ ನೆರವನ್ನು ಒದಗಿಸುವುದು. ​


​​​​

No comments: