Followers

Monday, July 22, 2019

ಚೈತನ್ಯ ಸಹಾಯಧನ ಯೋಜನೆ:

1.    ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಸೇರಿದವರಾಗಿರಬೇಕು (ವಿಶ್ವಕರ್ಮ ಮತ್ತು ಇದರ ಉಪ ಸಮುದಾಯಗಳು, ಉಪ್ಪಾರ ಮತ್ತು ಇದರ ಉಪ ಸಮುದಾಯಗಳು, ಅಂಬಿಗ ಮತ್ತು ಇದರ ಉಪ ಸಮುದಾಯಗಳು ಮತ್ತು ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ) ಹಾಗೂ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.40,000/- ಪಟ್ಟಣ ಪ್ರದೇಶದವರಿಗೆ ರೂ.55,000/-ಗಳ ಒಳಗಿರಬೇಕು.
2.    ಬ್ಯಾಂಕ್‍ಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತದೆ.
3.    ಉದ್ದೇಶ: ಕೃಷಿ ಅವಲಂಬಿತ ಚಟುವಟಿಕೆಗಳು, ವ್ಯಾಪಾರ, ಸೇವಾವಲಯ ಮತ್ತು ಸಾರಿಗೆ ವಲಯದ ಉದ್ದೇಶಗಳು.
4.    ಸರ್ಕಾರದ ಆದೇಶ ಸಂಖ್ಯೆ: ಬಿಸಿಡಬ್ಲ್ಯೂ 739 ಬಿಎಂಎಸ್ 2018, ಬೆಂಗಳೂರು ದಿನಾಂಕ:23/10/2018ರನ್ವಯ ಈ ಯೋಜನೆಯಲ್ಲಿ ಘಟಕ ವೆಚ್ಚ ರೂ.25,000/-ಗಳಿಂದ ರೂ.5.00ಲಕ್ಷಗಳ ಘಟಕಗಳಿಗೆ ಶೇ.20ರಷ್ಟು ಗರಿಷ್ಟ ರೂ.25,000/-ಗಳ ಸಹಾಯಧನ ಮಾತ್ರ ನಿಗಮದಿಂದ ಮಂಜೂರು ಮಾಡಲಾಗುವುದು.  ಉಳಿಕೆ ಮೊತ್ತ ಬ್ಯಾಂಕ್ ಪಾಲಿನ ಸಾಲವಾಗಿರುತ್ತದೆ.
5.    ಬ್ಯಾಂಕ್ ಪಾಲಿನ ಸಾಲಕ್ಕೆ ಬ್ಯಾಂಕ್‍ಗಳಲ್ಲಿ ವಿಧಿಸುವ ಚಾಲ್ತಿಯಲ್ಲಿರುವ ಬಡ್ಡಿದರ.
6.    ಆಯಾ ಬ್ಯಾಂಕ್ ಶಾಖೆಗೆ ನಿಗದಿಪಡಿಸಿದ ಗುರಿಗೆ 1:1.25 ಅನುಪಾತದಲ್ಲಿ ಅರ್ಜಿ ಶಿಫಾರಸ್ಸು ಮಾಡುವುದು.
7.    ಸರ್ಕಾರದ ಆದೇಶ ಸಂಖ್ಯೆ: ಹಿಂವಕ 31 ಸಮನ್ವಯ 2013, ಬೆಂಗಳೂರು ದಿನಾಂಕ:25/02/2013ರನ್ವಯ ಈ ಯೋಜನೆಯಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಇವರ ಅಧ್ಯಕ್ಷತೆಯಲ್ಲಿ ರಚಿಸಿರುವ ಆಯ್ಕೆ ಸಮಿತಿಯ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.
8.    ಸಹಾಯಧನ ಮಂಜೂರಾತಿಗೆ ಸಲ್ಲಿಸುವ ಪ್ರಸ್ತಾವನೆಯೊಂದಿಗೆ ಬ್ಯಾಂಕ್ ಶಾಖೆಯಿಂದ ನೀಡಿರುವ ಮಂಜೂರಾತಿ ಪತ್ರ/ಸಹಾಯಧನ ಕ್ಲೈಂ ಪತ್ರದ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸುವುದು.

No comments: