Followers

Monday, July 22, 2019

ಮೆರಿಟ್ ಹೊಂದಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ
"ಪೂರ್ಣ ಶುಲ್ಕಗಳ ಪಾವತಿಯೊಂದಿಗೆ, ಹಿಂದುಳಿದ ವರ್ಗಗಳ ಮೆಟ್ರಿಕ್-ನಂತರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ: (ಲೆಕ್ಕಶೀರ್ಷಿಕೆ ರಾಜ್ಯವಲಯ ಯೋಜನೆ
2225-03-277-2-51 ಮತ್ತು ಜಿಲ್ಲಾವಲಯ ಯೋಜನೇತರ 2225-00-103-0-28)
ವಿವಿಧ ಕೋರ್ಸುಗಳಲ್ಲಿ ಅತ್ಯಂತ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಮುಂದುವರೆಸಲು ಸರ್ಕಾರವು ಸರ್ಕಾರಿ ಸಂಸ್ಥೆಗಳಿಗೆ ನಿಗದಿಪಡಿಸಿರುವ
ದರಗಳಲ್ಲಿ 5 ಶುಲ್ಕಗಳ ಜೊತೆಗೆ ಪೂರ್ಣ ಶುಲ್ಕಗಳನ್ನು ಪಾವತಿಸಲಾಗುತ್ತದೆ. ನಿಗದಿಪಡಿಸಿರುವ ಕನಿಷ್ಠ ಶೇಕಡಾವಾರು ಅಂಕಗಳ ವಿವರ ಕೆಳಕಂಡಂತಿವೆ.
ಪ್ರವರ್ಗನಿಗದಿಪಡಿಸಿದ ಕನಿಷ್ಠ ಶೇಕಡಾ ಅಂಕಗಳು
ಪ್ರವರ್ಗ-1 ಮತ್ತು ಎಲ್ಲಾ ಪ್ರವರ್ಗಗಳ ಅಂಧ ವಿದ್ಯಾರ್ಥಿಗಳು65%
ಹಿಂದುಳಿದ ವರ್ಗಗಳ ಇತರೆ ಪ್ರವರ್ಗಗಳು ಮತ್ತು ಇತರೆಯವರು70%
ಅನುದಾನ ಹಂಚಿಕೆ:
ಈ ಎರಡೂ ಕಾರ್ಯಕ್ರಮಗಳಿಗೆ ಒಂದೇ ಲೆಕ್ಕಶೀರ್ಷಿಕೆಯಡಿಯಲ್ಲಿ ಒಟ್ಟಿಗೆ ಅನುದಾನವನ್ನು ನೀಡುವುದರಿಂದ, ಈ ಎರಡೂ ಕಾರ್ಯಕ್ರಮಗಳಿಗೆ ಅನುದಾನ
ಹಂಚಿಕೆಯನ್ನು ಈ ಕೆಳಗಿನಂತೆ ಮಾಡಿಕೊಳ್ಳುವುದು.
ಅ)"ಶುಲ್ಕ ವಿನಾಯಿತಿ" ಕಾರ್ಯಕ್ರಮಕ್ಕೆ ಶೇ.60ರಷ್ಟು ಆಯವ್ಯಯವನ್ನು "ಪೂರ್ಣ ಶುಲ್ಕಗಳ ಪಾವತಿಯೊಂದಿಗೆ ಹಿಂದುಳಿದ ವರ್ಗಗಳ ಮೆಟ್ರಿಕ್-ನಂತರದ
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ" ಕಾರ್ಯಕ್ರಮಕ್ಕೆ ಶೇ.40ರಷ್ಟು ಆಯವ್ಯಯವನ್ನು ಹಂಚಿಕೆ ಮಾಡಿಕೊಳ್ಳುವುದು.
ಆ)ಮೇಲೆ ನಿಗದಿಪಡಿಸಿದ ಶೇಕಡಾ ಅಂಕಗಳ ಮಿತಿಯೊಳಗೆ ಬರುವ ಪ್ರವರ್ಗ-1ರ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಮತ್ತು ಎಲ್ಲಾ ಪ್ರವರ್ಗಗಳ ಅಂಧ ವಿದ್ಯಾರ್ಥಿಗಳಿಗೆ,
ನಿಗದಿತ ಪೂರ್ಣ ಶುಲ್ಕಗಳನ್ನು ಮೊದಲನೇ ಆದ್ಯತೆಯಲ್ಲಿ ಮಂಜೂರು ಮಾಡುವುದು.
ಇ)ನಂತರ ಶೇ.60 ರಷ್ಟು ಆಯವ್ಯಯ ಮತ್ತು ಶೇ.40ರಷ್ಟು ಆಯವ್ಯಯಗಳಿಗೆ ಪ್ರತ್ಯೇಕವಾಗಿ ಈ ಕೆಳಗಿನಂತೆ ಪ್ರವರ್ಗವಾರು, ಶೇಕಡಾವಾರು
ಹಂಚಿಕೆ ಮಾಡಲಾಗುವುದು.
1ಪ್ರವರ್ಗ - 2ಎಶೇಕಡ 58
2ಪ್ರವರ್ಗ - 3ಎಶೇಕಡ 16
33 ಪ್ರವರ್ಗ - 3ಬಿಶೇಕಡ 20
4ಇತರೆ ಸಮುದಾಯಗಳುಶೇಕಡ 05
5ಇತರೆ ಹಿಂದುಳಿದ ವರ್ಗಶೇಕಡ 01
ಒಟ್ಟುಶೇಕಡ 100
ಮಂಜೂರಾತಿ ಪ್ರಾಧಿಕಾರ:
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಅನುದಾನದಿಂದ ಪಾವತಿಸುವ ಗುಂಪು-ಎ, ಗುಂಪು-ಬಿ, ಗುಂಪು-ಸಿ, ಮತ್ತು ಗುಂಪು-ಡಿ
ಕೋರ್ಸುಗಳಿಗೆ ಸಂಬಂಧಿಸಿದಂತೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯು, ಆಯಾ ಜಿಲ್ಲೆಯಲ್ಲಿ, ನಿಗದಿತ ಶುಲ್ಕ ವಿನಾಯಿತಿ
ಮಂಜೂರು ಮಾಡುವ ಪ್ರಾಧಿಕಾರ ಆಗಿರುತ್ತಾರೆ.
ಮಂಜೂರಾತಿ ವಿಧಾನ:
1.ಆನ್‍ಲೈನ್ ಮೂಲಕ ಇ-ಪಾಸ್ ತಂತ್ರಾಂಶದಲ್ಲಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗುವುದು.ಮಂಜೂರು ಮಾಡುವ
ಪ್ರಾಧಿಕಾರ ಆಗಿರುತ್ತಾರೆ.
2.ವಿದ್ಯಾರ್ಥಿಗಳು ನಿಗದಿತ ದಾಖಲೆಗಳು ಹಾಗೂ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಐ.ಎಫ್.ಸಿ.ಕೋಡ್, ಜಾತಿ ಮತ್ತು ಆದಾಯ ಪ್ರಮಾಣ
ಪತ್ರ, ಹಿಂದಿನ ತರಗತಿಯ ಅಂಕಪಟ್ಟಿ ಇತ್ಯಾದಿ ಮಾಹಿತಿಯೊಂದಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹಾಗೂ ಹಾರ್ಡ್ ಕಾಫಿಯನ್ನು
ಸಂಬಂಧಪಟ್ಟ ಕಾಲೇಜುಗಳಿಗೆ ಸಲ್ಲಿಸುವುದು.
3.ಕಾಲೇಜು ಪ್ರಾಂಶುಪಾಲರು ಮತ್ತು ಪರಿಶೀಲನಾ ಅಧಿಕಾರಿಗಳು ಆಯಾ ಹಂತದಲ್ಲಿ ಅರ್ಜಿ ಹಾಗೂ ದಾಖಲೆಗಳನ್ನು ಪರಿಶೀಲಿಸಿ, ಆನ್‍ಲೈನ್‍ನಲ್ಲಿ
ದೃಢೀಕರಿಸಿ ಸದರಿ ದಾಖಲೆಗಳನ್ನು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಸಲ್ಲಿಸಬೇಕು.
4.ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಪರಿಶೀಲಿಸಿ, ಆನ್‍ಲೈನ್‍ನಲ್ಲಿ ದೃಢೀಕರಿಸುವುದು.
5.ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಸದರಿ ಮಾಹಿತಿಯ ಪರಿಶೀಲನೆಯನ್ನು ಮಾಡುವುದು.
6.ಅರ್ಹ ವಿದ್ಯಾರ್ಥಿಗಳಿಗೆ ಆಯಾ ವರ್ಷ ಲಭ್ಯವಾಗುವ ಅನುದಾನಕ್ಕೆ ಅನುಗುಣವಾಗಿ ಅರ್ಹತೆ ಮತ್ತು
ಅಂಕಗಳ ಆಧಾರದ ಮೇಲೆ ಜಿಲ್ಲಾ ಹಂತದಲ್ಲಿ ಶುಲ್ಕ ವಿನಾಯಿತಿ ಮಂಜೂರು ಮಾಡುವುದು.
7.ಮಂಜೂರಾದ ಮೊತ್ತವನ್ನು ಸಂಬಂಧಿತ ಕಾಲೇಜುಗಳ ಬ್ಯಾಂಕ್ ಖಾತೆಗೆ ನೇರವಾಗಿ ಖಜಾನೆ-2 ತಂತ್ರಾಂಶದ ಮೂಲಕ ಪಾವತಿಸುವುದು.

No comments: