Followers

Monday, July 22, 2019

ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳು
(ಲೆಕ್ಕಶೀರ್ಷಿಕೆ ರಾಜ್ಯವಲಯ ಯೋಜನೆ 2225-03-277-2-53 ಮತ್ತು ಜಿಲ್ಲಾವಲಯ ಯೋಜನೆ ಹಾಗೂ ಯೋಜನೇತರ 2225-00-103-0-26)
(2016-17ನೇ ಸಾಲಿನ ಒಟ್ಟು ಆಯವ್ಯಯ ರಾಜ್ಯವಲಯ ರೂ.63871.96 ಲಕ್ಷಗಳು)

ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಅವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಂದುವರೆಸಲು ಪ್ರೋತ್ಸಾಹಿಸುವ ಸಲುವಾಗಿ
ಮೆಟ್ರಿಕ್ ಪೂರ್ವ ಬಾಲಕರ/ ಬಾಲಕಿಯರ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಿ, ನಿರ್ವಹಿಸಲಾಗುತ್ತಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾ
-ಖೆಯಡಿ 1340 ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳಿದ್ದು, (1055 ಬಾಲಕರು ಹಾಗೂ 285 ಬಾಲಕಿಯರು) ಇವುಗಳಲ್ಲಿ ಕ್ರಮವಾಗಿ 54731
ಹಾಗೂ 15111 ಹೀಗೆ ಒಟ್ಟು 69842 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ.

ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯದ ಉದ್ಯಾನವನ

ಪ್ರಾರ್ಥನಾನಿರತ ಮೆಟ್ರಿಕ್-ಪೂರ್ವ ವಿದ್ಯಾರ್ಥಿಗಳು

ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳಲ್ಲಿ ಈ ಕೆಳಕಂಡ ಸೌಲಭ್ಯಗಳನ್ನು ನೀಡಲಾಗುತ್ತಿದೆ.
1.ಪ್ರತಿ ವಿದ್ಯಾರ್ಥಿಗೆ ಮಾಹೆಯಾನ ರೂ.1300/- ವೆಚ್ಚದಲ್ಲಿ 10 ತಿಂಗಳ ಅವಧಿಗೆ ಆಹಾರ ನೀಡಿಕೆ.
2.ಉಚಿತ ವಸತಿ ಸೌಕರ್ಯ.
3.ಪ್ರತಿ ವಿದ್ಯಾರ್ಥಿಗೆ ವರ್ಷಕ್ಕೆ 2 ಜೊತೆ ಸಮವಸ್ತ್ರ ಪೂರೈಕೆ.
4.ಪ್ರತಿ ವಿದ್ಯಾರ್ಥಿಗೆ ಮಾಹೆಯಾನ ರೂ.50/-ರಂತೆ 10 ತಿಂಗಳ ಅವಧಿಗೆ ಇತರೆ ವೆಚ್ಚ .
5.ಪ್ರತಿ ಬಾಲಕ ವಿದ್ಯಾರ್ಥಿಗೆ ರೂ.50/-ರಂತೆ 10 ತಿಂಗಳಿಗೆ ಕ್ಷೌರದ ವೆಚ್ಚ ನೀಡಿಕೆ.
6.ಪ್ರತಿ ವಿದ್ಯಾರ್ಥಿಗೆ ರೂ.200/-ರ ವೆಚ್ಚದಲ್ಲಿ ವರ್ಷಕ್ಕೆ ಪಠ್ಯ ಪುಸ್ತಕ ಮತ್ತು ಲೇಖನ ಸಾಮಗ್ರಿ ನೀಡಿಕೆ.
7.ಪ್ರತಿ ವಿದ್ಯಾರ್ಥಿನಿಲಯಕ್ಕೆ ಮಾಹೆಯಾನ ರೂ.500/- ರಂತೆ 10 ತಿಂಗಳ ಅವಧಿಗೆ ವೈದ್ಯಕೀಯ ವೆಚ್ಚ ನೀಡಿಕೆ.
8.ಪ್ರತಿ ವಿದ್ಯಾರ್ಥಿಗೆ 3 ವರ್ಷಕ್ಕೊಮ್ಮೆ ಹಾಸಿಗೆ ಹೊದಿಕೆ ಸರಬರಾಜು.
9.ಮಂಜೂರಾತಿ ಸಂಖ್ಯೆ 50 ಇರುವ ನಿಲಯಕ್ಕೆ ವರ್ಷಕ್ಕೆ ರೂ.600/-ರಂತೆ ಹಾಗೂ ಮಂಜೂರಾತಿ ಸಂಖ್ಯೆ
50ಕ್ಕಿಂತ ಹೆಚ್ಚಾಗಿ ಇರುವ ನಿಲಯಕ್ಕೆ ರೂ.1000/-ರಂತೆ ಪಾತ್ರೆಗಳಿಗೆ ಕಲಾಯಿ ವೆಚ್ಚ ಭರಿಸಲಾಗುತ್ತದೆ.
10.ಮೂವರು ಅಲ್ಪಕಾಲಿಕ ಬೋಧಕರನ್ನು ಮಾಹೆಯಾನ ರೂ.2000/-ರಂತೆ ಗೌರವಧನ ಕೊಡುವುದರೊಂದಿಗೆ
ಕಠಿಣ ವಿಷಯಗಳಲ್ಲಿ ಪಾಠ ಹೇಳಿಸುವುದು.
11.ಪ್ರತಿ ವಿದ್ಯಾರ್ಥಿನಿಲಯಕ್ಕೆ ವಾರ್ತಾ ಪತ್ರಿಕೆ ಮತ್ತು ನಿಯತಕಾಲಿಕೆ ಖರೀದಿಗಾಗಿ ವಾರ್ಷಿಕವಾಗಿ ರೂ.3000/-
12.ಶೌಚಾಲಯಗಳ ಸ್ವಚ್ಛತೆಗಾಗಿ ಪ್ರತಿ ವಿದ್ಯಾರ್ಥಿನಿಲಯಕ್ಕೆ ಮಾಹೆಯಾನ ರೂ.1000/- ರಂತೆ 10 ತಿಂಗಳಿಗೆ.
ವಿದ್ಯಾರ್ಥಿನಿಲಯದಲ್ಲಿ ಮಾಸಿಕ ಆರೋಗ್ಯ ತಪಾಸಣೆ

ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಅನುಸರಿಸುವ ಮಾನದಂಡಗಳು
1.ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಸರ್ಕಾರಿ / ಸರ್ಕಾರಿ ಅಂಗೀಕೃತ
ಶಿಕ್ಷಣ ಸಂಸ್ಥೆಗಳಲ್ಲಿ 5ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು..
2.ಶೈಕ್ಷಣಿಕ ಸಂಸ್ಥೆಯಂದ 5 ಕಿ.ಮೀ ದೂರದಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಶೇಕಡಾ 90ರಷ್ಟು ಸ್ಥಾನಗಳನ್ನು
ಹಾಗೂ ಉಳಿದ 10ರಷ್ಟು ಸ್ಥಾನಗಳನ್ನು 5 ಕಿ.ಮೀ.ಗಳಿಗಿಂತ ಕಡಿಮೆ ದೂರದ ಸ್ಥಳಗಳ ವಿದ್ಯಾರ್ಥಿಗಳಿಗೆ
ನೀಡಲಾಗುವುದು.
3.ಪ್ರವರ್ಗ-1ರ ವಿದ್ಯಾರ್ಥಿಗಳಿಗೆ ರೂ.1.00 ಲಕ್ಷ ಹಾಗೂ ಪ್ರವರ್ಗ 2ಎ, 2ಬಿ, 3ಎ, 3ಬಿಯ ವಿದ್ಯಾರ್ಥಿಗಳ
ಕುಟುಂಬದ ವಾರ್ಷಿಕ ವರಮಾನ ಮಿತಿ ರೂ.44,500/-ಕ್ಕೆ ನಿಗದಿಪಡಿಸಿದೆ.
4.ಬೇಸಿಗೆ ರಜಾ ನಂತರ ಎಲ್ಲಾ ನಿಲಯಗಳನ್ನು ಜೂನ್ 1ರಂದು ತೆರೆಯಲಾಗುತ್ತದೆ.ಹಿಂದಿನ ವಾರ್ಷಿಕ ಪರೀಕ್ಷೆಯಲ್ಲಿ
ಎಲ್ಲಾ ವಿಷಯಗಳಲ್ಲಿ ಉತ್ತೀರ್ಣರಾದ ನಿಲಯಾರ್ಥಿಗಳನ್ನು ಮಾತ್ರ ನವೀಕರಣ ವಿದ್ಯಾರ್ಥಿಗಳೆಂದು ಪರಿಗಣಿಸಿ ಆಯ್ಕೆ
ಸಮಿತಿಯ ಅನುಮೋದನೆಗೆ ಒಳಪಟ್ಟು ವಿದ್ಯಾರ್ಥಿಗಳನ್ನು ನವೀಕರಿಸಲಾಗುವುದು.
5.ನವೀಕರಣ ವಿದ್ಯಾರ್ಥಿಗಳ ಪ್ರವೇಶಾತಿಯ ಬಳಿಕ ಉಳಿದ ಸ್ಥಾನಗಳಿಗೆ ಆಯ್ಕೆ ಸಮಿತಿಯು ಆಯ್ಕೆ
ಮಾಡಿದ ಹೊಸ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವುದು.
6.ವಿದ್ಯಾರ್ಥಿಗಳನ್ನು ಈ ಕೆಳಕಂಡ ಮೀಸಲಾತಿ ಅನುಪಾತದಂತೆ ಪ್ರವೇಶಕ್ಕೆ ಆಯ್ಕೆ ಮಾಡಲಾಗುವುದು.
1ಪ್ರವರ್ಗ - 1ಶೇಕಡ 10
2ಪ್ರವರ್ಗ - 2ಎಶೇಕಡ 35
3ಪ್ರವರ್ಗ - 2ಬಿಶೇಕಡ 09
4ಪ್ರವರ್ಗ - 3ಎಶೇಕಡ 09
5ಪ್ರವರ್ಗ - 3ಬಿಶೇಕಡ 12
6ಪರಿಶಿಷ್ಟ ಜಾತಿಶೇಕಡ 21
7ಪರಿಶಿಷ್ಟ ಪಂಗಡಶೇಕಡ 04
ಒಟ್ಟುಶೇಕಡ 100

ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಸರ್ಕಾರಿ ಆದೇಶ ಸಂಖ್ಯೆ ಸಕಇ 221 ಬಿಎಂಎಸ್ 2009
ದಿನಾಂಕ:24.7.2009 ರಲ್ಲಿ ಕೆಳಕಂಡಂತೆ ತಾಲ್ಲೂಕು ಮಟ್ಟದ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ.
1ತಾಲ್ಲೂಕಿನ ಹೆಚ್ಚಿನ ಭಾಗ ಪ್ರತಿನಿಧಿಸುವ ವಿಧಾನಸಭಾ ಸದಸ್ಯರುಅಧ್ಯಕ್ಷರು
2ತಾಲ್ಲೂಕಿನ ಉಳಿದ ಭಾಗ ಪ್ರತಿನಿಧಿಸುವ ವಿಧಾನಸಭಾ ಸದಸ್ಯರುಸದಸ್ಯರು
3ಆಯಾ ಕ್ಷೇತ್ರದ ವಿಧಾನ ಪರಿಷತ್ತಿನ ಸದಸ್ಯರುಸದಸ್ಯರು
4ಸಂಬಂಧಪಟ್ಟ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳುಸದಸ್ಯರು
5ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿ.ಇ.ಓ)ಸದಸ್ಯರು
6ಆಯಾ ತಾಲ್ಲೂಕಿನ ತಹಶೀಲ್ದಾರರುಸದಸ್ಯರು
7ಆಯಾ ತಾಲ್ಲೂಕಿನ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳುಸದಸ್ಯರು
8ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯಾ ತಾಲ್ಲೂಕಿನ ವಿಸ್ತರಣಾಧಿಕಾರಿಗಳುಸದಸ್ಯ ಕಾರ್ಯದರ್ಶಿ

ರಾಜ್ಯದಲ್ಲಿರುವ ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳ ಜಿಲ್ಲಾವಾರು ಮಾಹಿತಿ
ಕ್ರ.ಸಂ.ಜಿಲ್ಲೆಯ ಹೆಸರುವಿದ್ಯಾರ್ಥಿನಿಲಯಗಳ ಸಂಖ್ಯೆವಿದ್ಯಾರ್ಥಿಗಳ ಮಂಜೂರಾತಿ ಸಂಖ್ಯೆ
ಬಾಲಕಬಾಲಕಿಒಟ್ಟುಬಾಲಕಬಾಲಕಿಒಟ್ಟು
1ಬಾಗಲಕೋಟೆ3674324203952815
2ಬೆಂಗಳೂರು (ಗ್ರಾ)17421760150910
3ಬೆಂಗಳೂರು (ನ)437196120316
4ಬೆಳಗಾಂ881210046406005240
5ಬಳ್ಳಾರಿ38135127058203525
6ಬೀದರ್4385123174152732
7ಚಾಮರಾಜನಗರ1121348595580
8ಚಿಕ್ಕಬಳ್ಳಾಪುರ2963515153001815
9ಚಿಕ್ಕಮಗಳೂರು421961188012503130
10ಚಿತ್ರದುರ್ಗ4385120455052550
11ದಕ್ಷಿಣ ಕನ್ನಡ1511266705951265
12ದಾವಣಗೆರೆ30104015005902090
13ಧಾರವಾಡ2272910802901370
14ಗದಗ್2983716234602083
15ಹಾಸನ61117229855753560
16ಹಾವೇರಿ3894719954452440
17ಕಲಬುರಗಿ62157733157604075
18ಕೊಡಗು15520560245805
19ಕೋಲಾರ2483212713551626
20ಕೊಪ್ಪಳ3484221354702605
21ಮಂಡ್ಯ49166524257403165
22ಮೈಸೂರು4164717502602010
23ರಾಯಚೂರು3263818203202140
24ರಾಮನಗರ226289582351193
25ಶಿವಮೊಗ್ಗ421860215010363186
26ತುಮಕೂರು48115921554952650
27ಉಡುಪಿ11617470280750
28ಉತ್ತರ ಕನ್ನಡ442064209611703266
29ವಿಜಯಪುರ51126329356253560
30ಯಾದಗಿರಿ34104418755152390
ಒಟ್ಟು10552851340547311511169842

ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳಿಗೆ ಪ್ರವೇಶ ನೀಡುವ ವೇಳಾಪಟ್ಟಿ
1ನವೀಕರಣ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ದಿನಾಂಕಜೂನ್ 1
2ಹೊಸ ವಿದ್ಯಾರ್ಥಿಗಳ ಪ್ರವೇಶಕ್ಕೆ ಪ್ರಕಟಣೆ ನೀಡುವ ದಿನಾಂಕಮೇ 25
3ಹೊಸ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಜೂನ್ 15
4ಹೊಸ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಕಡೆಯ ದಿನಾಂಕಜೂನ್ 20 ರಿಂದ 25
5ಪ್ರವೇಶಕ್ಕೆ ನಿಗದಿಪಡಿಸಿದ ಕೊನೆಯ ದಿನಾಂಕಜೂನ್ 30

No comments: