Followers

Monday, July 22, 2019

ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳು
(ಲೆಕ್ಕಶೀರ್ಷಿಕೆ ರಾಜ್ಯವಲಯ ಯೋಜನೆ 2225-03-277-2-53 ಮತ್ತು ಜಿಲ್ಲಾವಲಯ ಯೋಜನೆ ಹಾಗೂ ಯೋಜನೇತರ 2225-00-103-0-26)
(2016-17ನೇ ಸಾಲಿನ ಒಟ್ಟು ಆಯವ್ಯಯ ರಾಜ್ಯವಲಯ ರೂ.63871.96 ಲಕ್ಷಗಳು)

ಸರ್ಕಾರಿ / ಸರ್ಕಾರಿ ಅಂಗೀಕೃತ ಶಿಕ್ಷಣ ಸಂಸ್ಥೆಗಳಲ್ಲಿ ಮೆಟ್ರಿಕ್ ನಂತರದ ಕೋರ್ಸುಗಳಾದ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ,ಬಿ.ಇ,
ಎಂಬಿಬಿಎಸ್, ಡಿಪ್ಲೋಮ, ವೃತ್ತಿಶಿಕ್ಷಣ ಇತ್ಯಾದಿ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ 1068
ಮೆಟ್ರಿಕ್-ನಂತರದ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಲಾಗಿದ್ದು, (442 ಬಾಲಕರು ಹಾಗೂ 626 ಬಾಲಕಿಯರು) ಇವುಗಳಲ್ಲಿ ಕ್ರಮವಾಗಿ
45763 ಹಾಗೂ 64852 ಹೀಗೆ ಒಟ್ಟು 110615 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ.

ಮೆಟ್ರಿಕ್-ನಂತರದ ವಿದ್ಯಾರ್ಥಿನಿಲಯಗಳಲ್ಲಿ ಈ ಕೆಳಕಂಡ ಸೌಲಭ್ಯಗಳನ್ನು ನೀಡಲಾಗುತ್ತಿದೆ.
1.ಪ್ರತಿ ವಿದ್ಯಾರ್ಥಿಗೆ ಮಾಹೆಯಾನ ರೂ.1400/-ರ ವೆಚ್ಚದಲ್ಲಿ 10 ತಿಂಗಳ ಅವಧಿಗೆ ಆಹಾರದ ವೆಚ್ಚ ನೀಡಿಕೆ.
2.ಉಚಿತ ವಸತಿ ಸೌಕರ್ಯ.
3.ಪ್ರತಿ ವಿದ್ಯಾರ್ಥಿನಿಲಯಕ್ಕೆ ಮಾಹೆಯಾನ ರೂ.1000ರ ವೆಚ್ಚದಲ್ಲಿ 10 ತಿಂಗಳ ಅವಧಿಗೆ ಸಾದಿಲ್ವಾರು ವೆಚ್ಚ ಭರಿಸುವುದು.
4.ಮಂಜೂರಾತಿ ಸಂಖ್ಯೆ 50 ಇರುವ ನಿಲಯಕ್ಕೆ ವರ್ಷಕ್ಕೆ ರೂ. 600 ಹಾಗೂ ಮಂಜೂರಾತಿ ಸಂಖ್ಯೆ 50ಕ್ಕಿಂತ ಹೆಚ್ಚು
ಇರುವ ನಿಲಯಕ್ಕೆ ರೂ. 1000ರಂತೆ ಪಾತ್ರೆಗಳಿಗೆ ಕಲಾಯಿ ವೆಚ್ಚ ಭರಿಸುವುದು.
5.ಶೌಚಾಲಯಗಳ ಸ್ವಚ್ಚತೆಗಾಗಿ ಪ್ರತಿ ನಿಲಯಕ್ಕೆ ವಾರ್ಷಿಕ ರೂ. 1250/- ವೆಚ್ಚ ಮಾಡಲಾಗುವುದು.
6.ಪ್ರತಿ ನಿಲಯಕ್ಕೆ 2 ದಿನ ಪತ್ರಿಕೆಗಳ ಪೂರೈಕೆಗಾಗಿ (ಒಂದು ಆಂಗ್ಲ ಭಾಷೆ ಹಾಗೂ ಒಂದು ಕನ್ನಡ ದಿನಪತ್ರಿಕೆಗಳು
ವಾಸ್ತವಿಕ ವೆಚ್ಚದಲ್ಲಿ.
7.ಕಟ್ಟಡಗಳ ಬಾಡಿಗೆ ಲೋಕೋಪಯೋಗಿ ಇಲಾಖೆ ನಿಗದಿಪಡಿಸಿದ ನಂತರ ಆಡಳಿತಾತ್ಮಕ ಅನುಮೋದನೆ ನೀಡಿದ
ದರದಲ್ಲಿ ಪಾವತಿಸುವುದು.
8. ಅ) ಸ್ನಾತಕೋತ್ತರ / ವೃತ್ತಿಪರ ವಿದ್ಯಾರ್ಥಿನಿಲಯಗಳ ಗ್ರಂಥಾಲಯಕ್ಕಾಗಿ ಪ್ರಥಮ ಬಾರಿಗೆ ರೂ.1.25 ಲಕ್ಷ,
ನಂತರದ ಪ್ರತಿ ವರ್ಷಕ್ಕೆ ರೂ.30,000/-
ಆ) ಇತರೆ ವಿದ್ಯಾರ್ಥಿನಿಲಯಗಳಿಗೆ ಪ್ರಥಮ ಬಾರಿಗೆ ರೂ.1.00 ಲಕ್ಷ, ನಂತರದ ಪ್ರತಿ ವರ್ಷಕ್ಕೆ ರೂ.20,000/-
9.ಕ್ರೀಡಾ ಸಾಮಗ್ರಿಗಳು ಪ್ರತಿ ವರ್ಷಕ್ಕೊಮ್ಮೆ, ಪ್ರತಿ ನಿಲಯಕ್ಕೆ, ಒಂದು ಸೆಟ್ ವಾಸ್ತವ ದರದಲ್ಲಿ.


ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಅನುಸರಿಸುವ ಮಾನದಂಡಗಳು
1.ವಿದ್ಯಾರ್ಥಿನಿಲಯಗಳು ಇರುವ ಸ್ಥಳಗಳ ಕಾಲೇಜುಗಳಿಂದ 5 ಕಿ.ಮೀ.ಗಿಂತ ದೂರದ ಸ್ಥಳಗಳಿಂದ ಬರುವ ವಿದ್ಯಾರ್ಥಿಗಳಿಗೆ
ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗುವುದು. ಸ್ಥಳೀಯ ವಿದ್ಯಾರ್ಥಿಗಳು ಪ್ರವೇಶಕ್ಕೆ ಅನರ್ಹರು.
2.ಈ ವಸತಿನಿಲಯಗಳಿಗೆ ಪ್ರವೇಶ ಪಡೆಯಲು ಪ್ರವರ್ಗ-2ಎ, 2ಬಿ, 3ಎ, 3ಬಿ ವರ್ಗಗಳ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ
ಕುಟುಂಬದ ವಾರ್ಷಿಕ ವರಮಾನ ಮಿತಿ ರೂ.1.00 ಲಕ್ಷ ಹಾಗೂ ಪ್ರವರ್ಗ-1, ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳಿಗೆ ರೂ.2.50
ಲಕ್ಷ ನಿಗದಿಪಡಿಸಿದ್ದು, ಅರ್ಹತೆ ಮತ್ತು ಆದಾಯದ ಮಾನದಂಡದ ಮೇಲೆ ಆಯ್ಕೆ ಮಾಡಲಾಗುವುದು.
3.ವಿದ್ಯಾರ್ಥಿಗಳನ್ನು ಈ ಕೆಳಕಂಡ ಮೀಸಲಾತಿ ಅನುಪಾತದಂತೆ ಪ್ರವೇಶಕ್ಕೆ ಆಯ್ಕೆ ಮಾಡಲಾಗುವುದು. 
1ಪ್ರವರ್ಗ - 1ಶೇಕಡ 10
2ಪ್ರವರ್ಗ - 2ಎಶೇಕಡ 35
3ಪ್ರವರ್ಗ - 2ಬಿಶೇಕಡ 09
4ಪ್ರವರ್ಗ - 3ಎಶೇಕಡ 09
5ಪ್ರವರ್ಗ - 3ಬಿಶೇಕಡ 12
6ಪರಿಶಿಷ್ಟ ಜಾತಿಶೇಕಡ 21
7ಪರಿಶಿಷ್ಟ ಪಂಗಡಶೇಕಡ 04
ಒಟ್ಟುಶೇಕಡ 100
4.ಸರ್ಕಾರಿ ಸುತ್ತೋಲೆ ಸಂಖ್ಯೆ ಸಕಇ 53 ಬಿಎಂಸ್ 2009 ದಿ:26.2.2009ರಲ್ಲಿ ವಿದ್ಯಾರ್ಥಿ ನಿಲಯಗಳಲ್ಲಿ ಲಭ್ಯವಿರುವ ಖಾಲಿ ಸ್ಥಾನಗಳಲ್ಲಿ
ಶೇಕಡ 20ರಷ್ಟು ಸ್ಥಾನಗಳನ್ನು ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳು, ಮಾಜಿ ಸೈನಿಕರ ಮಕ್ಕಳು, ವಿಧವೆಯರ ಮಕ್ಕಳು,ದೇವದಾಸಿಯರ
ಮಕ್ಕಳು, ಅಂಗವಿಕಲ ಮಕ್ಕಳು, ತಂದೆ ಹಾಗೂ ತಾಯಿ ಇಲ್ಲದ ಅನಾಥ ಮಕ್ಕಳು, ಪ್ರಮಾಣೀಕೃತ ಬಾಲಕಾರ್ಮಿಕರು, ಯೋಜನಾ ನಿರ್ವಸಿತ
ಪೋಷಕರ ಮಕ್ಕಳು, ದೌರ್ಜನ್ಯದಲ್ಲಿ ಮೃತಪಟ್ಟ / ಶಾಶ್ವತ ಅಂಗವಿಕಲ ಪೋಷಕರ ಮಕ್ಕಳು, ಅಪಘಾತದಲ್ಲಿ ಮೃತಪಟ್ಟ / ಶಾಶ್ವತ ಅಂಗವಿ
ಕಲರಾಗಿರುವ ಪೋಷಕರ ಮಕ್ಕಳು, ಆದಿವಾಸಿ ಪಂಗಡದ (ಜೇನು ಕುರುಬ ಹಾಗೂ ಕೊರಗ ಸಮಾಜ) ಮಕ್ಕಳು, ಅಲೆಮಾರಿ ಜನಾಂಗದ
ಮಕ್ಕಳು, ಭಿಕ್ಷುಕರ ಮಕ್ಕಳು, ಸಫಾಯಿ ಕರ್ಮಚಾರಿ ಮಕ್ಕಳಿಗೆ ಮೀಸಲಿರಿಸಲಾಗಿದೆ.

ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಸರ್ಕಾರಿ ಆದೇಶ ಸಂಖ್ಯೆ ಸಕಇ 221 ಬಿಎಂಎಸ್ 2009
ದಿನಾಂಕ:24.7.2009 ರಲ್ಲಿ ಕೆಳಕಂಡಂತೆ ತಾಲ್ಲೂಕು ಮಟ್ಟದ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ.
1ತಾಲ್ಲೂಕಿನ ಹೆಚ್ಚಿನ ಭಾಗ ಪ್ರತಿನಿಧಿಸುವ ವಿಧಾನಸಭಾ ಸದಸ್ಯರುಅಧ್ಯಕ್ಷರು
2ತಾಲ್ಲೂಕಿನ ಉಳಿದ ಭಾಗ ಪ್ರತಿನಿಧಿಸುವ ವಿಧಾನಸಭಾ ಸದಸ್ಯರುಸದಸ್ಯರು
3ಆಯಾ ಕ್ಷೇತ್ರದ ವಿಧಾನ ಪರಿಷತ್ತಿನ ಸದಸ್ಯರುಸದಸ್ಯರು
4ಸಂಬಂಧಪಟ್ಟ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳುಸದಸ್ಯರು
5ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿ.ಇ.ಓ)ಸದಸ್ಯರು
6ಆಯಾ ತಾಲ್ಲೂಕಿನ ತಹಶೀಲ್ದಾರರುಸದಸ್ಯರು
7ಆಯಾ ತಾಲ್ಲೂಕಿನ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳುಸದಸ್ಯರು
8ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯಾ ತಾಲ್ಲೂಕಿನ ವಿಸ್ತರಣಾಧಿಕಾರಿಗಳುಸದಸ್ಯ ಕಾರ್ಯದರ್ಶಿ

ಮೆಟ್ರಿಕ್-ನಂತರದ ವಿದ್ಯಾರ್ಥಿನಿಲಯಗಳಿಗೆ ಪ್ರವೇಶ ನೀಡುವ ವೇಳಾಪಟ್ಟಿ(ಸಾಮಾನ್ಯ ಮತ್ತು ಮಾದರಿ ವಿದ್ಯಾರ್ಥಿನಿಲಯಗಳು)
1ನವೀಕರಣ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ದಿನಾಂಕಕಾಲೇಜು ಪ್ರಾರಂಭವಾಗುವ ದಿನಾಂಕದಿಂದ
2ಹೊಸ ವಿದ್ಯಾರ್ಥಿಗಳ ಪ್ರವೇಶಕ್ಕೆ ಪ್ರಕಟಣೆ ನೀಡುವ ದಿನಾಂಕ28.6.2016
3ಹೊಸ ವಿದ್ಯಾರ್ಥಿಗಳು ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ23.7.2016
4ವಿದ್ಯಾರ್ಥಿ ಸಲ್ಲಿಸುವ ಅರ್ಜಿಯನ್ನು, ವಿದ್ಯಾರ್ಥಿಯು ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಪ್ರಾಂಶುಪಾಲರಿಂದ ದೃಢೀಕರಿಸಿ,
ದಾಖಲೆಗಳೊಂದಿಗೆ, ಸಂಬಂಧಪಟ್ಟ ತಾಲ್ಲೂಕು ಹಿಂದುಳಿದ ವರ್ಗಗಳ ಕಛೇರಿಗೆ ಸಲ್ಲಿಸಲು ಕೊನೆಯ ದಿನಾಂಕ
25.7.2016
5ಹೊಸ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು, ಆಯ್ಕೆ ಸಮಿತಿಯು ಸಭೆ ಸೇರುವ ದಿನಾಂಕ27.7.2016 ರಿಂದ 30.7.2016ರೊಳಗೆ
6ಆಯ್ಕೆ ಸಮಿತಿಯ ಪಟ್ಟಿಯನ್ನು ಪ್ರಕಟಿಸುವ ದಿನಾಂಕ31.7.2016
7ಆಯ್ಕೆಯಾದ ವಿದ್ಯಾರ್ಥಿಗಳು, ವಿದ್ಯಾರ್ಥಿನಿಲಯಕ್ಕೆ ಪ್ರವೇಶ ಪಡೆಯುವ ಕೊನೆಯ ದಿನಾಂಕ31.7.2016 ರಿಂದ 3.8.2016 ರೊಳಗೆ

ರಾಜ್ಯದಲ್ಲಿರುವ ಮೆಟ್ರಿಕ್-ನಂತರದ ವಿದ್ಯಾರ್ಥಿನಿಲಯಗಳ ಜಿಲ್ಲಾವಾರು ಮಾಹಿತಿ
ಕ್ರ.ಸಂ.ಜಿಲ್ಲೆಯ ಹೆಸರುವಿದ್ಯಾರ್ಥಿನಿಲಯಗಳ ಸಂಖ್ಯೆವಿದ್ಯಾರ್ಥಿಗಳ ಮಂಜೂರಾತಿ ಸಂಖ್ಯೆ
ಬಾಲಕಬಾಲಕಿಒಟ್ಟುಬಾಲಕಬಾಲಕಿಒಟ್ಟು
1ಬಾಗಲಕೋಟೆ182139183523004315
2ಬೆಂಗಳೂರು (ಗ್ರಾ)369300600900
3ಬೆಂಗಳೂರು (ನ)192342180025204050
4ಬೆಳಗಾಂ253055257531255700
5ಬಳ್ಳಾರಿ291847300018254825
6ಬೀದರ್121527137515652940
7ಚಾಮರಾಜನಗರ6152161515252140
8ಚಿಕ್ಕಬಳ್ಳಾಪುರ8162480017002500
9ಚಿಕ್ಕಮಗಳೂರು112839117529604135
10ಚಿತ್ರದುರ್ಗ192443196524004365
11ದಕ್ಷಿಣ ಕನ್ನಡ153247147033004770
12ದಾವಣಗೆರೆ192443196524004365
13ಧಾರವಾಡ142236142522503675
14ಗದಗ್8172580018002600
15ಹಾಸನ192342202524004425
16ಹಾವೇರಿ91928101520403055
17ಕಲಬುರಗಿ202949210029505050
18ಕೊಡಗು8111980011001900
19ಕೋಲಾರ141630140016503050
20ಕೊಪ್ಪಳ9172698517652750
21ಮಂಡ್ಯ202141212522254350
22ಮೈಸೂರು242145257321604733
23ರಾಯಚೂರು131932137519503325
24ರಾಮನಗರ101020105010252075
25ಶಿವಮೊಗ್ಗ294372300045707570
26ತುಮಕೂರು182947195030124962
27ಉಡುಪಿ9152490016152515
28ಉತ್ತರ ಕನ್ನಡ122133123021253355
29ವಿಜಯಪುರ132437130024503750
30ಯಾದಗಿರಿ91221100012002200
ಒಟ್ಟು44262610684576364852110615

No comments: