Followers

Monday, July 22, 2019

ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಸಾಲ ಯೋಜನೆಗಳು:


ಸರ್ಕಾರದ ಆದೇಶ ಸಂಖ್ಯೆ: ಹಿಂವಕ 31 ಸಮನ್ವಯ 2013, ಬೆಂಗಳೂರು ದಿನಾಂಕ: 25/02/2013ರನ್ವಯ ಈ ಯೋಜನೆಯಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಇವರ ಅಧ್ಯಕ್ಷತೆಯಲ್ಲಿ ಫಲಾನುಭವಿಗಳ ಆಯ್ಕೆ ಸಮಿತಿ ಮೂಲಕ ಆಯ್ಕೆ ಮಾಡಬೇಕು. 

    ಅವಧಿ ಸಾಲ ಯೋಜನೆ​​


ಈ ಯೋಜನೆಯಲ್ಲಿ ಕೃಷಿ ಮತ್ತು ಕೃಷಿ ಅವಲಂಬಿತ ಚಟುವಟಿಕೆಗಳು, ಸಣ್ಣ ವ್ಯಾಪಾರ, ಸೇವಾ ವಲಯ, ಸಾರಿಗೆ ವಲಯ, ಶೈಕ್ಷಣಿಕ, ನ್ಯೂ ಸ್ವರ್ಣಿಮಾ, ಶಿಲ್ಪಸಂಪದ, ಸ್ವಯಂ ಸಕ್ಷಮ, ಮೈಕ್ರೋ ಫೈನಾನ್ಸ್ ಮತ್ತು ಕೃಷಿ ಸಂಪದ ವಲಯಗಳಲ್ಲಿ ಸಾಲ ಸೌಲಭ್ಯ ಒದಗಿಸಲಾಗುವುದು. 

ಅರ್ಹತೆ: ಬಡತನ ರೇಖೆಗಿಂತ ದುಪ್ಪಟ್ಟು ಆದಾಯ ಹೊಂದಿರುವ ಹಿಂದುಳಿದ ವರ್ಗಗಳ ಜನರು ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವನ್ನು ಒದಗಿಸಲಾಗುವುದು. 

ಗರಿಷ್ಠ ಸಾಲದ ಮೊತ್ತ:     ರೂ.10.00 ಲಕ್ಷಗಳು (ಪ್ರತಿ ಫಲಾನುಭವಿಗೆ)
ಬಡ್ಡಿ ದರ : ವಾರ್ಷಿಕ ಶೇ.6 ರಿಂದ 8ರಷ್ಟು.
ಮರುಪಾವತಿ ಅವಧಿ:      36 ರಿಂದ 60 ತಿಂಗಳು.
ವಯೋಮಿತಿ          :     18 ರಿಂದ 55 ವರ್ಷಗಳು
•     ವಾರ್ಷಿಕ ಆದಾಯದ ಮಿತಿ:   ಗ್ರಾಮಾಂತರ ಪ್ರದೇಶದವರಿಗೆ ವಾರ್ಷಿಕ ರೂ.98,000/-ಗಳಿಗಿಂತ ಹಾಗೂ ಪಟ್ಟಣ ಪ್ರದೇಶದವರಿಗೆ ರೂ.1,20,000/-ಗಳಿಗಿಂತ ಕಡಿಮೆ ಇರಬೇಕು.

No comments: