Followers

Monday, July 22, 2019

ಕಿರುಸಾಲ ಯೋಜನೆ:

ಈ ಯೋಜನೆಯಲ್ಲಿ ಕುಶಲಿ ಅಥವಾ ಕುಶಲಿಯಲ್ಲದ ವ್ಯಕ್ತಿಗಳು ನಗರ, ಪಟ್ಟಣ ಮತ್ತು ಹೋಬಳಿ ಹಂತಗಳಲ್ಲಿ ಸಣ್ಣ ಪ್ರಮಾಣದ ವ್ಯಾಪಾರ ಚಟುವಟಿಕೆಗಳನ್ನು ಕೈಗೊಳ್ಳಲು ಸ್ವ ಸಹಾಯ ಗುಂಪುಗಳ ಮೂಲಕ ಸಾಲ ಸೌಲಭ್ಯ ನೀಡುವುದು. 
1. ಸಾಲದ ಉದ್ದೇಶ: ಸಣ್ಣ ವ್ಯಾಪಾರ ಚುಟುವಟಿಕೆಗಳಾದ ಹಣ್ಣು ವ್ಯಾಪಾರ, ತರಕಾರಿ ವ್ಯಾಪಾರ, ಹಾಲು ವ್ಯಾಪಾರ, ಹೂ ವ್ಯಾಪಾರ, ಮೀನುವ್ಯಾಪಾರ, ಟೀ/ಕಾಫಿ ಸ್ಟಾಲ್, ಇತ್ಯಾದಿ ಸಣ್ಣ ವ್ಯಾಪಾರದ ಚಟುವಟಿಕೆಗಳಿಗೆ ಗರಿಷ್ಠ ರೂ.15,000/-ಗಳ ಆರ್ಥಿಕ ನೆರವು.
2. ಅರ್ಹತೆ: ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಸೇರಿದವರಾಗಿರಬೇಕು (ವಿಶ್ವಕರ್ಮ ಅದರ ಉಪ ಸಮುದಾಯಗಳು ಮತ್ತು ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ)
3. ಸಹಾಯಧನ: ಗರಿಷ್ಠ ರೂ.5,000/-ಗಳು.
4. ಸಾಲದ ಮೊತ್ತ: ರೂ.10,000/-ಗಳು.
5. ಬಡ್ಡಿದರ: ಸ್ವ ಸಹಾಯ ಸಂಘಗಳು ಸಾಲದ ಮೊತ್ತವನ್ನು ವಾರ್ಷಿಕ ಶೇಕಡ 4ರ ಬಡ್ಡಿಯೊಂದಿಗೆ ನಿಗಮಕ್ಕೆ ಹಿಂದಿರುಗಿಸಬೇಕಾಗಿರುತ್ತದೆ. ಶೇಕಡ 1ರ ಭಾಗ ಬಡ್ಡಿಯನ್ನು ಹೆಚ್ಚುವರಿಯಾಗಿ ಪಡೆದು ಸ್ವ-ಸಹಾಯ ಗುಂಪುಗಳು ಸೇವಾ ಶುಲ್ಕವಾಗಿ ಇಟ್ಟುಕೊಳ್ಳಬಹುದು. 
6. ಫಲಾನುಭವಿಗಳು ಸ್ವಸಹಾಯ ಗುಂಪುಗಳ ಸದಸ್ಯರಾಗಿರಬೇಕು. ಫಲಾನುಭವಿಗಳು ಬಿ.ಪಿ.ಎಲ್. ಕುಟುಂಬಕ್ಕೆ ಸೇರಿದವರಾಗಿರಬೇಕು, ಸರ್ಕಾರಿ/ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರಬಾರದು.
7. ಮರುಪಾವತಿ: ಸ್ವಸಹಾಯ ಗುಂಪುಗಳು ಸಾಲದ ಮೊತ್ತವನ್ನು 36 ತಿಂಗಳಲ್ಲಿ, 12 ತ್ರೈಮಾಸಿಕ ಕಂತುಗಳಲ್ಲಿ ಸಾಲ ಮರುಪಾವತಿ ಮಾಡಬೇಕು. 

No comments: