Followers

Monday, July 22, 2019

ಡಿ. ದೇವರಾಜ ಅರಸು ಪ್ರತಿಭಾ ಪುರಸ್ಕಾರ
(ಲೆಕ್ಕಶೀರ್ಷಿಕೆ ರಾಜ್ಯವಲಯ ಯೋಜನೆ 2225-03-277-2-37)(2016-17ನೇ ಸಾಲಿನ ತರಬೇತಿ, ಅರಿವು ಮತ್ತು ಪ್ರೋತ್ಸಾಹ, ಹಿಂದುಳಿದ
ವರ್ಗಗಳ ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮದಡಿ ಒದಗಿಸಿರುವ ಆಯವ್ಯಯ ರೂ.3466.00 ಲಕ್ಷಗಳಲ್ಲಿ ಹಂಚಿಕೆ ಮಾಡಲಾಗುವುದು)
ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ, ಸ್ನಾತಕೋತ್ತರ ಪದವಿಗಳಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕಗಳಿಸಿದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ
ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹವನ್ನು ನೀಡುವ ದೃಷ್ಟಿಯಿಂದ 2015-16ನೇ ಸಾಲಿನಿಂದ “ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರ” ಯೋಜನೆಯನ್ನು
ಆರಂಭಿಸಲಾಗಿದೆ.
“ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರ” ದ ಮೊತ್ತವನ್ನು ಈ ಕೆಳಗಿನಂತೆ ನೀಡಲಾಗುತ್ತಿದೆ.
ಕ್ರ.ಸಂ.ತರಗತಿ/ಕೋರ್ಸ್ಪ್ರತಿಭಾ ಪುರಸ್ಕಾರದ ಮೊತ್ತ (ರೂ.ಗಳಲ್ಲಿ)
1ಎಸ್.ಎಸ್.ಎಲ್.ಸಿ.10000
2ದ್ವಿತೀಯ ಪಿ.ಯು.ಸಿ.15000
2ಪದವಿ/ಸ್ನಾತಕೋತ್ತರ ಪದವಿ (ಸಾಮಾನ್ಯ)20000
4ವೃತ್ತಿಪರ ಪದವಿ/ವೃತ್ತಿಪರ ಸ್ನಾತಕೋತ್ತರ ಪದವಿ
(ತಾಂತ್ರಿಕ, ವೈದ್ಯಕೀಯ ಹಾಗೂ ಸಂಬಂಧಿತ ವಿಜ್ಞಾನ)
25000
ಅರ್ಹತೆಗಳು:
1.ಭಾರತದ ಪ್ರಜೆಯಾಗಿದ್ದು, ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
2.ಕರ್ನಾಟಕ ಸರ್ಕಾರ ಅಧಿಸೂಚಿಸಿರುವ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿರಬೇಕು.
3.ಶಾಸನಬದ್ಧ ವಿಶ್ವವಿದ್ಯಾಲಯಗಳು/ಅಧೀನಕ್ಕೆ ಒಳಪಡುವ/ಸರ್ಕಾರಿ/ಸ್ಥಳೀಯ
ಸಂಸ್ಥೆಗಳು/ ಅನುದಾನಿತ ಸಂಸ್ಥೆಗಳು/ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿರಬೇಕು.
4.ಸಮಾನ ಕೋರ್ಸ್‍ಗಳಿಗೆ ಸಂಬಂಧಿಸಿದಂತೆ ಒಬ್ಬ ವಿದ್ಯಾರ್ಥಿಗೆ ಒಂದು ಬಾರಿ ಮಾತ್ರ ಈ ಸೌಲಭ್ಯವನ್ನು ಒದಗಿಸುವುದು.
5.ಕುಟುಂಬದ ಒಟ್ಟು ವಾರ್ಷಿಕ ಆದಾಯಮಿತಿ:
ಪ್ರವರ್ಗ-1 - ರೂ.2.50 ಲಕ್ಷ.
ಪ್ರವರ್ಗ-2(ಎ), 3(ಎ) ಮತ್ತು 3(ಬಿ) - ರೂ.1.00 ಲಕ್ಷ.
ಕ್ರ. ಸಂ.ಪ್ರವರ್ಗಹೊಸನವೀಕರಣ
1ಪ್ರವರ್ಗ-1 ಮತ್ತು ಅಂಧ ವಿದ್ಯಾರ್ಥಿಗಳು40%50%
2ಪ್ರವರ್ಗ-2ಎ, 3ಎ ಮತ್ತು 3ಬಿ50%60%

No comments: