pm kisan mandhan yojana: ಈ ಸರ್ಕಾರಿ ಯೋಜನೆ ಮೂಲಕ ಪ್ರತಿ ತಿಂಗಳು 3000 ರೂ. ಪಿಂಚಣಿ ಪಡೆಯಿರಿ
ಕೇಂದ್ರ ಸರ್ಕಾರವು ರೈತರು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಅನೇಕ ಯೋಜನೆಗಳನ್ನು ಪ್ರಾರಂಭಿಸುತ್ತದೆ. ಇನ್ನು ಕೇಂದ್ರ ಸರ್ಕಾರವು ಈಗಾಗಲೇ ರೈತರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳಲ್ಲಿ ಪಿಎಂ ಕಿಸಾನ್ ಮಾನ್-ಧನ್ ಯೋಜನೆ ಕೂಡ ಒಂದಾಗಿದೆ.
ಇದರ ಪ್ರಕಾರ ರೈತರು ಪ್ರತಿ ತಿಂಗಳು 55 ರೂ ಠೇವಣಿ ಮಾಡಬೇಕಿದ್ದು, ಬಳಿಕ ವ್ಯಕ್ತಿಗೆ 60 ವರ್ಷ ತುಂಬಿದ ಬಳಿಕ ಪ್ರತೀ ತಿಂಗಳು 3000 ಸಾವಿರ ರೂ. ಮಾಸಿಕ ಪಿಂಚಣಿ ವ್ಯವಸ್ಥೆ ಪಡೆಯಲು ಅರ್ಹರಾಗುತ್ತಾರೆ.
ಯಾವ ಆರಂಭವಾಗಿದ್ದ ಯೋಜನೆ
ಪ್ರಧಾನ ಮಂತ್ರಿ ಕಿಸಾನ್ ಮಾನ್-ಧನ್ ಯೋಜನೆ (PMKMY) ಅನ್ನು 12 ಸೆಪ್ಟೆಂಬರ್ 2019 ರಂದು ಪ್ರಾರಂಭಿಸಲಾಗಿತ್ತು. ಬಡ ರೈತರಿಗೆ ವೃದ್ಧಾಪ್ಯದಲ್ಲಿ ನೆರವಾಗುವುದು ಇದರ ಮುಖ್ಯ ಉದ್ದೇಶವಾಗಿದೆ. ಅವರ ಖಾತೆಗೆ ಪ್ರತಿ ತಿಂಗಳು ನಿಗದಿತ ಹಣ ಬರುತ್ತದೆ. ಯಾವುದೇ ಸಣ್ಣ ಮತ್ತು ಅತಿಸಣ್ಣ ರೈತರು ಇದರ ಪ್ರಯೋಜನ ಪಡೆಯಬಹುದಾಗಿದೆ. ಇನ್ನು ಈ ಯೋಜನೆಯ ಲಾಭ ಪಡೆಯಲು ರೈತರು ಪ್ರತೀ ತಿಂಗಳು 55 ರೂಪಾಯಿಗಳನ್ನು ಠೇವಣಿ ಮಾಡಬೇಕಾಗುತ್ತದೆ. ಅದೇ ಸಮಯದಲ್ಲಿ ಸರ್ಕಾರ ಕೂಡ ಅಷ್ಟೇ ಮೊತ್ತವನ್ನು ಜೊತೆಯಾಗಿ ಠೇವಣಿ ಮಾಡುತ್ತಾರೆ. ಹೀಗೆ ಒಟ್ಟಾಗಿ ಎರಡೂ ಕಡೆಗಳಿಂದ ಒಟ್ಟು 110 ರೂ. ಮೊತ್ತವು ಠೇವಣಿ ಮಾಡಿದಂತಾಗುತ್ತದೆ.
ಯಾರೆಲ್ಲಾ ಇದರ ಲಾಭ ಪಡೆಯಬಹುದು?
ಇನ್ನು ಈ ಯೋಜನೆಯ ಲಾಭವನ್ನು ಸರ್ಕಾರವು ಹಲವು ಇತರೆ ವಿಭಾಗಗಳಿಗೂ ವಿಸ್ತರಿಸಿಕೊಂಡಿದೆ. ಅಂದರೆ ಚಾಲಕ ರಿಕ್ಷಾ ಎಳೆಯುವವನು, ಚಮ್ಮಾರ, ಟೈಲರ್, ಕಾರ್ಮಿಕ, ಮನೆ ಕೆಲಸಗಾರರು ಕೂಡ ಇದರ ಲಾಭ ಪಡೆದುಕೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ.
ಒಂದು ವೇಳೆ ಮರಣ ಸಂಭವಿಸಿದರೆ?
ಒಂದು ವೇಳೆ ಮರಣ ಸಂಭವಿಸಿದರೆ?
ಇನ್ನು ಒಂದು ವೇಳೆ ಫಲಾನುಭವಿಯು ಒಂದು ವೇಳೆ ಹಣ ಕಟ್ಟುತ್ತಿರುವ ಮಧ್ಯದಲ್ಲೇ ಮರಣ ಸಂಭವಿಸಿದರೆ ಏನಾಗುತ್ತದೆ ಎಂಬುದು ಸಹಜವಾಗಿಯೇ ಎಲ್ಲರ ಪ್ರಶ್ನೆಯಾಗಿದೆ. ಆದರೆ ಇದಕ್ಕೆ ಸರ್ಕಾರ ತನ್ನದೇ ಆದ ಸರಳ ನಿಯಮವನ್ನು ರೂಪಿಸಿಕೊಂಡಿದೆ. ಒಂದು ವೇಳೆ ಯೋಜನೆಯ ನಡುವಿನಲ್ಲೇ ಫಲಾನುಭವಿ ಮರಣ ಹೊಂದಿದರೆ ಆತನ ಪತ್ನಿಯು ಯೋಜನೆಗೆ ಹಣ ಕಟ್ಟುವ ಮೂಲಕ ಯೋಜನೆಯನ್ನು ಮುಂದುವರೆಸಬಹುದು. ಆದರೆ ಒಂದು ವೇಳೆ ಪತ್ನಿಯು ಯೋಜನೆಯಲ್ಲಿ ಮುಂದುವರೆಯಲು ಇಚ್ಚಿಸದಿದ್ದರೆ ಈಗಾಗಲೇ ಕಟ್ಟಿದ ಹಣವನ್ನು ಬಡ್ಡಿ ಸಮೇತ ಮರಳಿಸಲಾಗುತ್ತದೆ.
ಎಷ್ಟು ಹಣವನ್ನು ಠೇವಣಿ ಇಡಬೇಕು?
ಒಂದು ವೇಳೆ ನೀವು ಫಲಾನುಭವಿ 18 ವರ್ಷ ವಯಸ್ಸಿವರಾಗಿದ್ದರೆ ಪ್ರತೀ ತಿಂಗಳು 55 ರೂ.ಗಳನ್ನು ಠೇವಣಿ ಇಡಬೇಕಾಗುತ್ತದೆ. ಅದೇ ರೀತಿ ಫಲಾನುಭವಿ 29 ವರ್ಷ ವಯಸ್ಸಿನವರಾಗಿದ್ದರೆ 100 ರೂ.ಗಳನ್ನು ಠೇವಣಿ ಇಡಬೇಕಾಗುತ್ತದೆ. ಇನ್ನು ಫಲಾನುಭವಿ 40 ವರ್ಷದವನಾಗಿದ್ದರೆ ವ್ಯಕ್ತಿಯು ಪ್ರತೀ ತಿಂಗಳು 200 ರೂ. ಠೇವಣಿ ಇಡಬೇಕು ಎಂದು ಸರ್ಕಾರವು ನಿಯಮ ರೂಪಿಸಿದೆ.
ಇನ್ನು ಇಲ್ಲಿ ಒಂದು ವಿಷಯವನ್ನು ಎಲ್ಲರೂ ತಿಳಿದುಕೊಳ್ಳಬೇಕಿದೆ. ನಾವು ಎಷ್ಟು ವರ್ಷ ವಯಸ್ಸಿನವರಾಗಿದ್ದು, ಒಂದು ನಿರ್ದಿಷ್ಟ ಮೊತ್ತವನ್ನು ಪಾವತಿಸುತ್ತಿದ್ದರೆ ಸರ್ಕಾರ ಕೂಡ ಅಷ್ಟೇ ಮೊತ್ತವನ್ನು ಠೇವಣಿ ಇಡುತ್ತದೆ. ಇನ್ನು ವ್ಯಕ್ತಿಯು 18ರಿಂದ 40ರ ಒಳಗಿನ ವಯಸ್ಸಿನರಾಗಬೇಕಿದ್ದು, ಆದಾಯ ತೆರಿಗೆ ಪಾವತಿದಾರನಾಗಿರಬಾರದು. ಮೊಬೈಲ್ ಫೋನ್, ಆಧಾರ್ ಸಂಖ್ಯೆ ಮತ್ತು ಉಳಿತಾಯ ಖಾತೆಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಅಲ್ಲದೆ ಅರ್ಜಿದಾರರ ಮಾಸಿಕ ಆದಾಯ ರೂ 15,000 ಮೀರಬಾರದು.
ಯಾವೆಲ್ಲಾ ದಾಖಲೆಗಳ ಅಗತ್ಯವಿದೆ?
ಸಾಮಾನ್ಯವಾಗಿ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಹಲವು ದಾಖಲೆಗಳನ್ನು ನೀಡಬೇಕಾಗಿರುವುದು ಸಾಮಾನ್ಯ ಸಂಗತಿ. ಅದೇ ರೀತಿ ಈ ಯೋಜನೆಗೂ ಇದು ಅನ್ವಯವಾಗುತ್ತದೆ. ಇನ್ನು ಯೋಜನೆಯ ಲಾಭ ಪಡೆಯಲು ಆಧಾರ್ ಕಾರ್ಡ್, ಗುರುತಿನ ಚೀಟಿ, ಬ್ಯಾಂಕ್ ಖಾತೆ ಪಾಸ್ಬುಕ್, ಮೇಲ್ ಐಡಿ, ಮೊಬೈಲ್ ಸಂಖ್ಯೆ, ಪಾಸ್ಪೋರ್ಟ್ ಗಾತ್ರದ ಫೋಟೋವನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ?
ಈ ಯೋಜನೆಯ ಲಾಭ ಪಡೆಯಲು maandhan.in ವೆಬ್‌ಸೈಟ್‌ಗೆ ಲಾಗಿನ್ ಆಗಬೇಕು. ಅಲ್ಲಿ ಸ್ವಯಂ ನೋಂದಣಿ ಆಯ್ಕೆಯನ್ನು ಕ್ಲಿಕ್ ಮಾಡಿ, ಇದೇ ಸಮಯದಲ್ಲಿ ಮೊಬೈಲ್ ಬಂದ ಒಟಿಪಿ ನಮೂದಿಸಿ ನೊಂದಾಯಿಸಬಹುದು. ಬಳಿಕ ಆನ್ ಲೈನ್ ಫಾರ್ಮ್ ಅನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ, ಸಲ್ಲಿಸಬೇಕು.