Followers

Tuesday, January 7, 2025

jila panchayat taluka panchayat chunav ane

'ಚುನಾವಣೆ ವಿಚಾರ ನ್ಯಾಯಾಲಯಗಳ ಮುಂದಿರುವುದರಿಂದ ಅಲ್ಲಿಯೇ ಇತ್ಯರ್ಥವಾಗಬೇಕು. ಚುನಾವಣೆ ನಡೆಸಲು ನಾವಂತೂ ತಯಾರಾಗಿದ್ದೇವೆ' ಎಂದು

ಸಿಎಂ ಸಿದ್ದರಾಮಯ್ಯ ಎರಡು ದಿನದ ಹಿಂದಷ್ಟೇ ಪ್ರತಿಕ್ರಿಯಿಸಿದ್ದರು. ಇದೀಗ ಜನವರಿ 29ರಂದು ಸರ್ಕಾರದ ನಿಲುವು ಸ್ಪಷ್ಟವಾಗಲಿದೆ. ಅಂದು ಸರ್ಕಾರ ತಾನು ಕೈಗೊಂಡಿರುವ ಕ್ರಮವನ್ನು ನ್ಯಾಯಾಲಯದ ಮುಂದೆ ಸ್ಪಷ್ಟಪಡಿಸಲಿದೆ.

ಈ ಬೆಳವಣಿಗೆಗೆ ಪೂರಕವಾಗಿ, ಚುನಾವಣೆ ಸಂಬಂಧ ಕೋರ್ಟ್ನಲ್ಲಿ ಇರುವ ಪ್ರಕರಣ ಇತ್ಯರ್ಥಕ್ಕೆ ತಕ್ಷಣವೇ ಗಮನ ನೀಡುವುದು, ಚುನಾವಣೆಗೆ ಪೂರಕ ವಾತಾವರಣ ನಿರ್ವಿುಸುವುದು, ಬಜೆಟ್ನಲ್ಲಿ ಈ ನಿಟ್ಟಿನಲ್ಲಿ ಆದ್ಯತೆ, ಮುಖ್ಯವಾಗಿ ಮಾರ್ಚ್ನಲ್ಲಿ ಬಜೆಟ್ ಅಧಿವೇಶನ ಮುಗಿದ ಒಂದು ವಾರದ ಬಳಿಕ ಚುನಾವಣೆ ಪ್ರಕ್ರಿಯೆಗೆ ಅವಕಾಶ ಆಗುವಂತೆ ಮಾಡುವ ಕುರಿತು ಸಮಾಲೋಚನೆ ನಡೆದಿವೆ ಎಂದು ಕಾಂಗ್ರೆಸ್ನ ಉನ್ನತ ಮೂಲಗಳು ತಿಳಿಸಿವೆ.

ಅವಧಿ ಮುಗಿದರೂ ಕಳೆದ ನಾಲ್ಕು ವರ್ಷಗಳಿಂದ ತಾಲೂಕು, ಜಿಲ್ಲಾ ಪಂಚಾಯಿತಿ ಮತ್ತು ಬಿಬಿಎಂಪಿ ಚುನಾವಣೆ ನಡೆದಿಲ್ಲ ಎಂದು ಚುನಾವಣಾ ಆಯೋಗ ನ್ಯಾಯಾಂಗ ಉಲ್ಲಂಘನೆ ಪ್ರಕರಣ ದಾಖಲಿಸಿತ್ತು. ಕೋರ್ಟ್ನಲ್ಲಿ ವಿಚಾರಣೆಗೆ ಬಂದಾಗ ಸರ್ಕಾರ ಕಾಲಾವಕಾಶ ಕೋರಿತ್ತು. ಜತೆಗೆ ಚುನಾವಣೆ ನಡೆಸಲು ಮೀಸಲು ಮತ್ತು ಕ್ಷೇತ್ರ ಭೌಗೋಳಿಕ ಗಡಿಗಳನ್ನು ನಿರ್ಧರಿಸುವ ಹಾಗೂ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ಚುರುಕುಗೊಳಿಸಲಾಗಿದೆ; ಶೀಘ್ರವೇ ಅಂತಿಮಗೊಳಿಸಲಾಗುವುದು ಎಂದು ಹೇಳಿಕೊಂಡಿತ್ತು. ಇದೀಗ ಈ ಕಾರ್ಯ ಮುಗಿದಿದೆ. ಅಧಿಸೂಚನೆ ಪ್ರಕಟವಾಗಬೇಕಾಗಿದೆ. ಈ ನಡುವೆ ಆಯೋಗ ಪುನಃ ಕೋರ್ಟ್ ಕದ ತಟ್ಟಿದ್ದು ಮತ್ತೊಮ್ಮೆ ನಿರ್ದೇಶನ ನೀಡುವಂತೆ ಕೋರಿದೆ. ಜನವರಿ 29ರಂದು ಈ ಪ್ರಕರಣ ವಿಚಾರಣೆಗೆ ಬರುತ್ತಿದ್ದು, ಅಲ್ಲಿ ಸರ್ಕಾರ ತನ್ನ ಅಂತಿಮ ನಿರ್ಧಾರ ತಿಳಿಸಲಿದೆ.

ನಿರ್ಧಾರಕ್ಕೆ ಕಾರಣ?: ಮಾರ್ಚ್- ಏಪ್ರಿಲ್ನಲ್ಲಿ ಬಹುತೇಕ ಪರೀಕ್ಷೆ ಮುಗಿಯುತ್ತವೆ. ಏಪ್ರಿಲ್ನಲ್ಲಿ ಚುನಾವಣೆ ಘೋಷಣೆಯಾದರೆ ಮೇ ಅಂತ್ಯದೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬಹುದು, ಹೀಗಾಗಿ ಮೇ ಪ್ರಶಸ್ತ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಚುನಾವಣೆ ದಿನಾಂಕ ನಿಗದಿ ಮಾಡುವುದು ಆಯೋಗವಾದರೂ ಈ ಅವಧಿಗೆ ಪೂರಕ ವಾತಾವರಣವನ್ನು ಸರ್ಕಾರ ಸೃಷ್ಟಿಸಿಕೊಡಬೇಕೆಂಬ ತೀರ್ವನಕ್ಕೆ ಬರಲಾಗಿದೆ.

ಮೀಸಲು ಪ್ರಕಟ ಬಾಕಿ: ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಮೀಸಲು ಹಂಚಿಕೆ ಪ್ರಕ್ರಿಯೆ ನಡೆಯಬೇಕು. ಮೀಸಲು ಪಟ್ಟಿ ಸಿದ್ಧವಾಗಿದ್ದು ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಂದಿದೆ. ಮುಖ್ಯಮಂತ್ರಿ ಸೂಚನೆ ಬರುತ್ತಿದ್ದಂತೆ ಸಚಿವರ ಸಹಿ ಬೀಳಲಿದ್ದು, ಕರಡು ಪ್ರಕಟಣೆ ಹೊರಬೀಳಲಿದೆ. ನಂತರ ಆಕ್ಷೇಪಣೆಗೆ ಅವಕಾಶ ನೀಡಲಾಗುತ್ತದೆ. ಅಂತಿಮ ಪಟ್ಟಿ ಪ್ರಕಟಿಸಿದ ಬಳಿಕ ಆಯೋಗವು ಆ ಪಟ್ಟಿಯನ್ನು ಆಧರಿಸಿ ಪ್ರಕ್ರಿಯೆ ನಡೆಸಲು ಒಂದೂವರೆ ತಿಂಗಳು ಕಾಲಾವಕಾಶ ತೆಗೆದುಕೊಂಡು ನಂತರದಲ್ಲಿ ಚುನಾವಣೆ ದಿನಾಂಕ ನಿಗದಿ ಮಾಡಲಿದೆ.

ಬಿಬಿಎಂಪಿ ಚುನಾವಣೆಗೆ ಬಗ್ಗೆ ನಿರಾಸಕ್ತಿ?: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ವಿಚಾರದಲ್ಲಿ ಸರ್ಕಾರದಲ್ಲಿ ನಿಲುವು ಸ್ಪಷ್ಟವಾಗಿಲ್ಲ. ಬಿಬಿಎಂಪಿ ವಿಭಜನೆ ಆಗಬೇಕೆಂಬ ಬಗ್ಗೆ ಪಕ್ಷದ ಶಾಸಕರಲ್ಲೇ ಒಮ್ಮತ ಇಲ್ಲ. ಹೀಗಾಗಿ ಅವರನ್ನೆಲ್ಲ ಮುಂಬರುವ ಬಜೆಟ್ ಅಧಿವೇಶನದ ವೇಳೆಗೆ ಒಟ್ಟಿಗೆ ಸೇರಿಸಿ ಒಮ್ಮತಕ್ಕೆ ತರುವ ಪ್ರಯತ್ನ ನಡೆಯಲಿದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ಜಿಲ್ಲಾ ಪಂಚಾಯಿತಿ: 31
ತಾಲೂಕು ಪಂಚಾಯಿತಿ: 239
ತಾ.ಪಂ. ಸ್ಥಾನಗಳು: 3903
ಜಿ.ಪಂ. ಸ್ಥಾನಗಳು: 1083
ಅಂದಾಜು ಮತದಾರು: 3 ಕೋಟಿ
ಆತನ ವರ್ತನೆಯಿಂದಲೇ ತಂಡ ಒತ್ತಡಕ್ಕೆ ಸಿಲುಕಲು ಪ್ರಮುಖ ಕಾರಣ; Virat Kohli ಕುರಿತು ಶಾಕಿಂಗ್ ಹೇಳಿಕೆ ನೀಡಿದ ಮಾಜಿ ಕ್ರಿಕೆಟಿಗ

ಶಬ್ದಗಳಿಗಿಂತ ಅದನ್ನು ಕೇಳುವವರಿಗೆ… ವಿಚ್ಛೇದನ ವದಂತಿ ನಡುವೆ Yuzvendra Chahal ಮತ್ತೊಂದು ಪೋಸ್ಟ್ ವೈರಲ್

No comments:

jila panchayat taluka panchayat chunav ane

'ಚುನಾವಣೆ ವಿಚಾರ ನ್ಯಾಯಾಲಯಗಳ ಮುಂದಿರುವುದರಿಂದ ಅಲ್ಲಿಯೇ ಇತ್ಯರ್ಥವಾಗಬೇಕು. ಚುನಾವಣೆ ನಡೆಸಲು ನಾವಂತೂ ತಯಾರಾಗಿದ್ದೇವೆ' ಎಂದು ಸಿಎಂ ಸಿದ್ದರಾಮ...