Followers

Monday, July 22, 2019

​​​​​​​​​​ಕೃಷಿ ಸಂಪದ
ಹಿಂದುಳಿದ ವರ್ಗಗಳ ಸಣ್ಣ ರೈತರಿಗೆ ತರಕಾರಿ ಬೆಳೆಯಲು ಅಥವಾ ಇತರೆ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಸಣ್ಣ ಪ್ರಮಾಣದ ಬೆಳೆ ಸಾಲವನ್ನು ಮಂಜೂರು ಮಾಡಲಾಗುವುದು ​.
  
ಗರಿಷ್ಠ​​ಸಾಲದ ಮೊತ್ತ    ಪ್ರತಿ ಫಲಾನುಭವಿಗೆ ರೂ.50,000/-ಗಳು.
ಬಡ್ಡಿ ದರ   ವಾರ್ಷಿಕ ಶೇ.4ರಷ್ಟು
ಮರುಪಾವತಿ ಅವಧಿ     48 ತಿಂಗಳು(16 ತ್ರೈಮಾಸಿಕ)
ವಾರ್ಷಿಕಆದಾಯದ ಮಿತಿ:                      ಗ್ರಾಮಾಂತರ ಪ್ರದೇಶದವರಿಗೆ ವಾರ್ಷಿಕ ರೂ.98,000/-ಗಳಿಗಿಂತ ಹಾಗೂ ಪಟ್ಟಣ ಪ್ರದೇಶದವರಿಗೆ ರೂ.1,20,000/-ಗಳಿಗಿಂತ ಕಡಿಮೆ ಇರಬೇಕು.                                                                                                                                             
                                           ​                                                                                   ಸಾಲದ ವಿವರ:​

     
​ ರಾಷ್ಟ್ರೀಯ ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ     ಶೇ.95ರಷ್ಟು
ಫಲಾನುಭವಿ ವಂತಿಕೆ     ಶೇ 5ರಷ್ಟು
ಗರಿಷ್ಠ ಸಾಲದ ಮೊತ್ತ ಪ್ರತಿ ಫಲಾನುಭವಿಗೆ    ರೂ.50,000/-
        ಬಡ್ಡಿ ದರ                            ವಾರ್ಷಿಕ ಶೇ.4
                                              ​ಮರುಪಾವತಿ ಅವಧಿ                     03 ತಿಂಗಳಿಗೊಮ್ಮೆ 48 ಮಾಸಿಕ ಕಂತುಗಳು(16 ತ್ರೈಮಾಸಿಕ)​
                                                   
​​​

​​​​​​​​​8. ಶಿಲ್ಪ ಸಂಪದ​
ಹಿಂದುಳಿದ ವರ್ಗಗಳ ಸಾಂಪ್ರದಾಯಿಕ ವೃತ್ತಿದಾರರಿಗೆ ತಮ್ಮ ವೃತ್ತಿ ಕೌಶಲ್ಯತೆ ಹೆಚ್ಚಿಸಲು ಅಗತ್ಯವಿರುವ with latest technological inputs ಮತ್ತು ಸಾಲದ ನೆರವು ಒದಗಿಸುವುದು.
  • ಗರಿಷ್ಠ ಸಾಲದ ಮೊತ್ತ    ಪ್ರತಿ ಫಲಾನುಭವಿಗೆ ರೂ.10,00,000/-ಗಳು
    ಬಡ್ಡಿ ದರ    ರೂ.5.00ಲಕ್ಷದವರೆಗೆ ವಾರ್ಷಿಕ ಶೇ.6ರಷ್ಟು ರೂ.5.00 ರಿಂದ 10.00 ಲಕ್ಷದ ವರೆಗೆ   ವಾರ್ಷಿಕ ಶೇ.8ರಷ್ಟು​  
    ಮರುಪಾವತಿ ಅವಧಿ   ಗರಿಷ್ಠ 10 ವರ್ಷಗಳು.
    ವಾರ್ಷಿಕ ಆದಾಯದ ಮಿತಿ                      ಗ್ರಾಮಾಂತರ ಪ್ರದೇಶದವರಿಗೆ ವಾರ್ಷಿಕ ರೂ.98,000/-ಗಳಿಗಿಂತ ಹಾಗೂ ಪಟ್ಟಣ  ​ಪ್ರದೇಶದವರಿಗೆ ರೂ.1,20,000/-ಗಳಿಗಿಂತ ಕಡಿಮೆ ಇರಬೇಕು.​
    ​​​ 
  • ​ಸಾಲದ ವಿವರ:
  • ರಾಷ್ಟ್ರೀಯ ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ   ಶೇ.85ರಷ್ಟು
    ಡಿ.ಬಿ.ಸಿ.ಡಿ.ಸಿ ಪಾಲಿನ ವಂತಿಕೆ   ಶೇ.10 ರಷ್ಟು
    ಫಲಾನುಭವಿ ವಂತಿಕೆ            ಶೇ 5ರಷ್ಟು

    ​​
​​​​​​​​​​ಸ್ವಯಂ ಸಕ್ಷಮ ಸಾಲ ​ಯೋಜನೆ
ವೃತ್ತಿ ಶಿಕ್ಷಣ ಪಡೆದ ಹಿಂದುಳಿದ ವರ್ಗಗಳ ವಿದ್ಯಾವಂತ ಅಭ್ಯರ್ಥಿಗಳು ವಕೀಲ ವೃತ್ತಿ, ವೈದ್ಯ ವೃತ್ತಿ, ಇಂಜಿನಿಯರಿಂಗ್ ವೃತ್ತಿ, ಚಾರ್ಟೆಡ್ ಅಕೌಂಟೆಂಟ್ ವೃತ್ತಿ, ನರ್ಸಿಂಗ್ ಹೋಮ್, ಬಯೋ ಮೆಡಿಕಲ್ ಲ್ಯಾಬ್ಸ್, ಫಿಜಿಯೋಥೆರಫಿ ಲ್ಯಾಬ್ ಇತ್ಯಾದಿ ವೃತ್ತಿ ಘಟಕ ಸ್ಥಾಪಿಸಲು ಆರ್ಥಿಕ ನೆರವು ಒದಗಿಸಲಾಗುವುದು.

ಗರಿಷ್ಠ ಸಾಲದಮೊತ್ತ    ರೂ.10.00 ಲಕ್ಷಗಳು.
ಬಡ್ಡಿ ದರ  ರೂ.5.00ಲಕ್ಷಗಳವರೆಗೆ ವಾರ್ಷಿಕ ಶೇ.5ರಷ್ಟು ರೂ.5.00 ಲಕ್ಷಕ್ಕಿಂತ  ಹೆಚ್ಚಿನ ಘಟಕ  ವೆಚ್ಚಗಳ​ ​ಸಾಲಕ್ಕೆ ವಾರ್ಷಿಕ ಶೇ.8ರಷ್ಟು
ಮರುಪಾವತಿ ಅವಧಿ   60 ತಿಂಗಳು.
ವಯೋಮಿತಿ                       18 ರಿಂದ 35 ವರ್ಷಗಳು.
ವಾರ್ಷಿಕ ಆದಾಯದ ಮಿತಿ     ಗ್ರಾಮಾಂತರ ಪ್ರದೇಶದವರಿಗೆ ವಾರ್ಷಿಕ ರೂ.98,000/-ಗಳಿಗಿಂತ ಹಾಗೂ ಪಟ್ಟಣ ಪ್ರದೇಶದವರಿಗೆ ರೂ.1,20,000/-ಗಳಿಂತ ಕಡಿಮೆ  ಇರಬೇಕು.                                                                  
​​​​​​​​​​ಮಹಿಳಾ ಸಮೃದ್ಧಿ ಯೋಜನೆ 
ಮಹಿಳೆಯರನ್ನು ಆರ್ಥಿಕವಾಗಿ ​ ಸಬಲೀಕರಣಗೊಳಿಸಲು ಮಹಿಳಾ ಸ್ವ​ ಸಹಾಯ ಗುಂಪುಗಳ ಮೂಲಕ ಮಹಿಳೆಯರು ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳಿಗೆ, ಅಂದರೆ ಅಗರಬತ್ತಿ ತಯಾರಿಕೆಗೆ, ರೆಡಿಮೇಡ್ ಗಾರ್ಮೆಂಟ್ಸ್, ಡೈರಿ, ವ್ಯಾಪಾರ ಇತ್ಯಾದಿ ಎಲ್ಲಾ ವ್ಯಾಪಾರ ಚಟುವಟಿಕೆಗಳಿಗೆ ಸಾಲ ಮಂಜೂರು ಮಾಡಲಾಗುವುದು. ಪ್ರತಿ ಫಲಾನುಭವಿಗೆ ಗರಿಷ್ಠ ರೂ.50,000/-ಗಳಂತೆ ಒಂದು ಸ್ವ ಸಹಾಯ ಗುಂಪಿಗೆ ಗರಿಷ್ಠ ರೂ.3.50 ಲಕ್ಷ ಗಳವರೆಗೆ ಶೇ.4ರ ಬಡ್ಡಿ ದರದಲ್ಲಿ ಆರ್ಥಿಕ ನೆರವು ಒದಗಿಸುವುದು. ಅರ್ಜಿದಾರರು ಹಿಂದುಳಿದ ವರ್ಗಗಳಿಗೆ ಸೇರಿದ್ದು, ಅವರ ವಾರ್ಷಿಕ ವರಮಾನವು ಗ್ರಾಮಾಂತರ ಪ್ರದೇಶದವರಿಗೆ ರೂ.98,000/-ಗಳು ಮತ್ತು ಪಟ್ಟಣ ಪ್ರದೇಶದವರಿಗೆ ರೂ.1,20,000/-ಗಳ ಮಿತಿಯಲ್ಲಿರಬೇಕು.


​​​​​​​​​ ಮೈಕ್ರೋ ಫೈನಾನ್ಸ್​ ಯೋಜನೆ
ಈ ಯೋಜನೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಹಿಂದುಳಿದ ವರ್ಗಗಳ ಜನರಿಗೆ, ಸಣ್ಣ ಸಣ್ಣ ಆರ್ಥಿಕ ಚಟುವಟಿಕೆಗಳಿಗೆ ಸಾಲವನ್ನು ಮಂಜೂರು ಮಾಡಲಾಗುವುದು.ಈ ಸಾಲವನ್ನು ವೈಯಕ್ತಿಕವಾಗಿ ಆಥವಾ ಸ್ವ ಸಹಾಯ ಗುಂಪುಗಳ ಮುಖಾಂತರ ಮಂಜೂರು ಮಾಡಲಾಗುವುದು.​
 ಸಾಲದ ವಿವರ:
ರಾಷ್ಟ್ರೀಯ ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ       ಶೇ.90ರಷ್ಟು
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮಶೇ.5ರಷ್ಟು
ಫಲಾನುಭವಿ ವಂತಿಕೆ        ಶೇ 5ರಷ್ಟು
ಗರಿಷ್ಠ ಸಾಲದ ಮೊತ್ತ ಪ್ರತಿ ಫಲಾನುಭವಿಗೆ                      ರೂ.50,000/-
ಬಡ್ಡಿ ದರ     ವಾರ್ಷಿಕ ಶೇ.5
ಮರುಪಾವತಿ ಅವಧಿ  48 ಮಾಸಿಕ ಕಂತುಗಳು

​​​​​​   ​​​​​​​ಶೈಕ್ಷಣಿಕ ಸಾಲ ಯೋಜನೆ ​
ಇಂಜಿನಿಯರಿಂಗ್, ವೈದ್ಯಕೀಯ, ಡೆಂಟಲ್, ಕಂಪ್ಯೂಟರ್, ಚಾರ್ಟ್‍ಡ್ ಅಕೌಟೆಂಟ್, ಎಂ.ಬಿ.ಎ., ಹೋಟೇಲ್ ಮ್ಯಾನೇಜ್‍ಮೆಂಟ್, ಪಶುವೈದ್ಯಕೀಯ, ಕಾನೂನು, ಐ.ಸಿ.ಡಬ್ಲ್ಯೂ.ಎ., ಮುಂತಾದ ಎ.ಐ.ಸಿ.ಟಿ.ಇ.ಯಿಂದ, ಮೆಡಿಕಲ್ ಕೌನ್‍ಸಿಲ್ ಆಫ್ ಇಂಡಿಯಾ, ಮತ್ತು ಯು.ಜಿ.ಸಿ.ಯಿಂದ ಅನುಮೋದಿತ ಕೋರ್ಸ್‍ಗಳಲ್ಲಿ ಪದವಿ ಮತ್ತು ಸ್ನಾತಕೋತ್ತರಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸಲಾಗುವುದು. 



ಗರಿಷ್ಠ ಸಾಲದಮೊತ್ತ    ವರ್ಷಕ್ಕೆ ರೂ.2.50 ಲಕ್ಷಗಳು. (ಒಟ್ಟು ರೂ.10.00 ಲಕ್ಷಗಳು ಪೂರ್ಣ ಕೋರ್ಸ್ ಗೆ)
(ಭಾರತದಲ್ಲಿನ ವ್ಯಾಸಂಗಕ್ಕೆ ಒಟ್ಟು ರೂ.10.00ಲಕ್ಷಗಳು ಪೂರ್ಣ ಕೋರ್ಸ್‍ಗೆ)
(ವಿದೇಶದಲ್ಲಿನ ವ್ಯಾಸಂಗಕ್ಕೆ ಒಟ್ಟು ರೂ.20.00ಲಕ್ಷಗಳು ಪೂರ್ಣ ಕೋರ್ಸ್‍ಗೆ)
ಬಡ್ಡಿ ದರ   ವಾರ್ಷಿಕ ಶೇ.4ರಷ್ಟು ವಿದ್ಯಾರ್ಥಿನಿಯರಿಗೆ ಶೇ.3.5ರಷ್ಟು​
ಮರುಪಾವತಿ ಅವಧಿ   60 ತಿಂಗಳು (ರೂ.3.00 ಲಕ್ಷಗಳಿಂದ ರಿಂದ ರೂ.5.00 ಲಕ್ಷ ಗಳಿಗೆ    34 ಮಾಸಿಕ ರೂ.5.00 ಲಕ್ಷಗಳಿಗೆ 34 ​ಮಾಸಿಕ ರೂ.5.00 ರಿಂದ ​       ​ರೂ.10.00 ಲಕ್ಷಗಳಿಗೆ 120 ತಿಂಗಳು) ವ್ಯಾಸಂಗ ಪೂರ್ಣಗೊಂಡ 6 ತಿಂಗಳ ನಂತರ ಕಂತುಗಳ ಪ್ರಾರಂಭ.​
ವಯೋಮಿತಿ                        18 ರಿಂದ 32 ವರ್ಷಗಳು.
ವಾರ್ಷಿಕ ಆದಾಯದ ಮಿತಿ    ಗ್ರಾಮಾಂತರ ಪ್ರದೇಶದವರಿಗೆ ವಾರ್ಷಿಕ ರೂ.98,000/-ಗಳಿಗಹಾಗೂ ಪಟ್ಟಣ ಪ್ರದೇಶದವರಿಗೆ    ರೂ.1,20,000​​​​​​​/-ಗಳಿಗಿಂತ ಕಡಿಮೆ  ಇರಬೇಕು.​         ​
​​​
​​​​​​​​​ ನ್ಯೂಸ್ವರ್ಣಿಮಾ ಯೋಜನೆ
ಮಹಿಳೆಯರ ಸಬಲೀಕರಣಕ್ಕೆ ಹಾಗೂ ಆರ್ಥಿಕ ಸ್ವಾವಲಬಿಗಳನ್ನಾಗಿ ಮಾಡಲು ಮಹಿಳೆಯರು ​ಸ್ವಯಂ ಉದ್ಯೋಗ ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳಿಗೆ ಈ ಯೋಜನೆಯಲ್ಲಿ ವೈಯಕ್ತಿಕವಾಗಿ ಆರ್ಥಿಕ ನೆರವು ಒದಗಿಸಲಾಗುವುದು.
​​
ಗರಿಷ್ಠ ​ಸಾಲದಮೊತ್ತ   ರೂ.1,00,000/ಗಳು-(ಪ್ರತಿ ಫಲಾನುಭವಿಗೆ)
ಬಡ್ಡಿ ದರ  ವಾರ್ಷಿಕ ಶೇ.5ರಷ್ಟು
ಮರುಪಾವತಿ ಅವಧಿ   48 ತಿಂಗಳು (16 ತ್ರೈಮಾಸಿಕ)
ವಯೋಮಿತಿ                       18 ರಿಂದ 55 ವರ್ಷಗಳು
ವಾರ್ಷಿಕ ಆದಾಯದ ಮಿತಿ     ಗ್ರಾಮಾಂತರ ಪ್ರದೇಶದವರಿಗೆ ವಾರ್ಷಿಕ ರೂ.98,000- ಗಳಿಗಿಂತ ಹಾಗೂ ಪಟ್ಟಣ  ಪ್ರದೇಶದವರಿಗೆ ರೂ.1,20,000/- ಗಳಿಗಿಂತ ಕಡಿಮೆ ಇರಬೇಕು. ​
​​​

ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಸಾಲ ಯೋಜನೆಗಳು:


ಸರ್ಕಾರದ ಆದೇಶ ಸಂಖ್ಯೆ: ಹಿಂವಕ 31 ಸಮನ್ವಯ 2013, ಬೆಂಗಳೂರು ದಿನಾಂಕ: 25/02/2013ರನ್ವಯ ಈ ಯೋಜನೆಯಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಇವರ ಅಧ್ಯಕ್ಷತೆಯಲ್ಲಿ ಫಲಾನುಭವಿಗಳ ಆಯ್ಕೆ ಸಮಿತಿ ಮೂಲಕ ಆಯ್ಕೆ ಮಾಡಬೇಕು. 

    ಅವಧಿ ಸಾಲ ಯೋಜನೆ​​


ಈ ಯೋಜನೆಯಲ್ಲಿ ಕೃಷಿ ಮತ್ತು ಕೃಷಿ ಅವಲಂಬಿತ ಚಟುವಟಿಕೆಗಳು, ಸಣ್ಣ ವ್ಯಾಪಾರ, ಸೇವಾ ವಲಯ, ಸಾರಿಗೆ ವಲಯ, ಶೈಕ್ಷಣಿಕ, ನ್ಯೂ ಸ್ವರ್ಣಿಮಾ, ಶಿಲ್ಪಸಂಪದ, ಸ್ವಯಂ ಸಕ್ಷಮ, ಮೈಕ್ರೋ ಫೈನಾನ್ಸ್ ಮತ್ತು ಕೃಷಿ ಸಂಪದ ವಲಯಗಳಲ್ಲಿ ಸಾಲ ಸೌಲಭ್ಯ ಒದಗಿಸಲಾಗುವುದು. 

ಅರ್ಹತೆ: ಬಡತನ ರೇಖೆಗಿಂತ ದುಪ್ಪಟ್ಟು ಆದಾಯ ಹೊಂದಿರುವ ಹಿಂದುಳಿದ ವರ್ಗಗಳ ಜನರು ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವನ್ನು ಒದಗಿಸಲಾಗುವುದು. 

ಗರಿಷ್ಠ ಸಾಲದ ಮೊತ್ತ:     ರೂ.10.00 ಲಕ್ಷಗಳು (ಪ್ರತಿ ಫಲಾನುಭವಿಗೆ)
ಬಡ್ಡಿ ದರ : ವಾರ್ಷಿಕ ಶೇ.6 ರಿಂದ 8ರಷ್ಟು.
ಮರುಪಾವತಿ ಅವಧಿ:      36 ರಿಂದ 60 ತಿಂಗಳು.
ವಯೋಮಿತಿ          :     18 ರಿಂದ 55 ವರ್ಷಗಳು
•     ವಾರ್ಷಿಕ ಆದಾಯದ ಮಿತಿ:   ಗ್ರಾಮಾಂತರ ಪ್ರದೇಶದವರಿಗೆ ವಾರ್ಷಿಕ ರೂ.98,000/-ಗಳಿಗಿಂತ ಹಾಗೂ ಪಟ್ಟಣ ಪ್ರದೇಶದವರಿಗೆ ರೂ.1,20,000/-ಗಳಿಗಿಂತ ಕಡಿಮೆ ಇರಬೇಕು.

ರ್ನಾಟಕ ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ಮಂಡಳಿ ಒದಗಿಸಿದ ಮೊತ್ತದಿಂದ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳು: 

1. ಅಲೆಮಾರಿ/ಅರೆ ಅಲೆಮಾರಿ ಜನಾಂಗದ ಸ್ವಯಂ ಉದ್ಯೋಗ ಸಾಲ ಯೋಜನೆ:

ಸರ್ಕಾರದ ಆದೇಶ ಸಂಖ್ಯೆ: ಪಿ.ಹೆಚ್.ಎಸ್ 262 ಎಸ್.ಇ.ಡಬ್ಲ್ಯೂ 65, ದಿನಾಂಕ: 01/02/1966ರನ್ವಯ ಅಲೆಮಾರಿ/ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ 1) ಬೈರಾಗಿ (ಬಾವ), 2) ಬಾಲ ಸಂತೋಷಿ-ಜೋಷಿ, 3) ಬಾಜಿಗರ್, 4)ಭರಡಿ, 5)ಬುಡಬುಡಕಿ-ಜೋಶಿ-ಗೋಂಧಳಿ, 6)ಚಾರ, 7)ಚಿತ್ರಕಥಿ-ಜೋಷಿ, 8)ಧೋಲಿ, 9)ಢವೇರಿ, 10)ದೊಂಬರಿ, 11)ಘಿಸಾಡಿ, 12)ಗರುಡಿ, 13)ಗೋಪಾಲ್, 14)ಗೊಂದÀಳಿ, 15)ಹೆಳವ, 16)ಜೋಗಿ, 17)ಕೇಲ್ಕರಿ, 18)ಕೋಲ್ಹಟಿ, 19)ನಂದಿವಾಲ-ಜೋಷಿ-ಗೊಂದಳಿ, ಪುಲ್‍ಮಾಲ್ಲಿ, 20)ನಾಥಪಂಥಿ-ಡೌರಿ-ಗೋಸಾವಿ 21)ನಿರ್ಶಿಕಾರಿ, 22)ಪಾಂಗ್ಯುಯಲ್, 23)ಜೋಷಿ (ಸಾದ ಜೋಷಿ), 24)ಸಾನ್ಸಿಯ, 25)ಸರಾನಿಯ, 26)ತಿರುಮಲಿ, 27)ವಾಯ್ಡು 28)ವಾಸುದೇವ್, 29)ವಾಡಿ, 30)ವಾಗ್ರಿ, 31)ವಿರ್, 32)ಬಜನಿಯ, 33)ಶಿಕ್ಕಲಿಗರ್, 34)ಗೊಲ್ಲ, 35)ಕಿಲ್ಲಿಕ್ಯಾತಸ್, 36)ಸರೋಡಿ, 37)ದುರ್ಗ-ಮುರ್ಗ (ಬುರ್‍ಬುರ್‍ಚ), 38)ಹಾವಗಾರ್ (ಹಾವಾಡಿಗಾರ್), 39)ಪಿಚಗುಂಟಲ, 40)ಮಸಣಿಯ ಯೋಗಿ, 40)(ಬೆಸ್ತರ್)ಬುಂಡಬೆಸ್ತ, 42)ಕಟಬು,  43)ದರ್ವೆಶ್, 44)ಕಾಶಿ ಕಪಾಡಿ, 45)ದೊಂಬಿದಾಸ ಮತ್ತು 46)ಬೈಲ್‍ಪತರ್ ಜನಾಂಗಕ್ಕೆ ಸೇರಿದವರಿಗೆ ಸ್ವಯಂ ಉದ್ಯೋಗಕ್ಕೆ ಅವರು ಕೈಗೊಳ್ಳುವ ಆರ್ಥಿಕ ಚಟುವಟಿಕೆ ಅನುಸಾರ   ರೂ.2,00,000/-ಗಳವರೆಗೆ ಈ ಕೆಳಕಂಡಂತೆ ಸೌಲಭ್ಯ ಒದಗಿಸಲಾಗುವುದು.
ಘಟಕ ವೆಚ್ಚ ರೂ.50,000/-ಗಳಿಗೆ  ಶೇ.30ರಷ್ಟು ಗರಿಷ್ಟ ರೂ.10,000/-ಗಳ ಸಹಾಯಧನ ಉಳಿಕೆ ಶೇ.70ರಷ್ಟು ರೂ.40,000/-ಗಳನ್ನು ಶೇ.4ರ ಬಡ್ಡಿ ದರದಲ್ಲಿ ಸಾಲ.
ಘಟಕ ವೆಚ್ಚ ರೂ.50,001/-ರಿಂದ ರೂ.1,00,000/-ಗಳವರೆಗೆ ಶೇ.20ರಷ್ಟು ಗರಿಷ್ಟ ರೂ.20.000/-ಗಳ ಸಹಾಯಧನ ಉಳಿಕೆ ಶೇ.80ರಷ್ಟು ರೂ.80,000/-ಗಳನ್ನು ಶೇ.4ರ ಬಡ್ಡಿ ದರದಲ್ಲಿ ಸಾಲ.
ಘಟಕ ವೆಚ್ಚ ರೂ.1,00,001/-ರಿಂದ ರೂ.2,00,000/-ಗಳವರೆಗೆ ಶೇ.15ರಷ್ಟು ಕನಿಷ್ಟ  ರೂ.20,000/-ಗಳ ಗರಿಷ್ಟ ರೂ.30,000/-ಗಳ ಸಹಾಯಧನ ಉಳಿಕೆ ಶೇ.85ರಷ್ಟು ರೂ.1.70.000/-ಗಳನ್ನು ಶೇ.4ರ ಬಡ್ಡಿ ದರದಲ್ಲಿ ಸಾಲ.​

2. ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಆರ್ಥಿಕ ನೆರವು ಯೋಜನೆ: ಅಲೆಮಾರಿ/ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ ಮಹಿಳೆಯರು ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳಿಗೆ ತಲಾ ರೂ.35000/-ಗಳ ವರೆಗಿನ ಶೇ.30ರಷ್ಟು ಗರಿಷ್ಠ ರೂ.10000/-ಗಳ ಸಹಾಯಧನ ಉಳಿಕೆ ಶೇ.70ರಷ್ಟು ರೂ.25000/-ಗಳು ವಾರ್ಷಿಕ 4ರ ಬಡ್ಡಿದರದಲ್ಲಿ ಸಾಲ. ಪ್ರತಿ ಮಹಿಳಾ ಸ್ವ ಸಹಾಯ ಗುಂಪಿಗೆ ಗರಿಷ್ಠ ರೂ.3.50ಲಕ್ಷಗಳ ಸೌಲಭ್ಯ ಒದಗಿಸಲಾಗುವುದು.

3. ಅಲೆಮಾರಿ/ಅರೆ ಅಲೆಮಾರಿ ಅರಿವು-ಶೈಕ್ಷಣಿಕ ಸಾಲ ಯೋಜನೆ ಸಾಲ ಯೋಜನೆ: ಅಲೆಮಾರಿ/ಅರೆ ಅಲೆಮಾರಿ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡಲು ವಾರ್ಷಿಕ ಶೇ.2ರ ಬಡ್ಡಿದರದಲ್ಲಿ ವಾರ್ಷಿಕ ಗರಿಷ್ಠ ರೂ.1.00ಲಕ್ಷಗಳ ವರೆಗೆ ಆರ್ಥಿಕ ನೆರವು ಒದಗಿಸಲಾಗುವುದು. ಅರಿವು-ಶೈಕ್ಷಣಿಕ ಸಾಲ ಯೋಜನೆಯಲ್ಲಿ ಗುರುತಿಸಿರುವ 28 ಕೋರ್ಸ್‍ಗಳು ಹಾಗೂ (1) ಡಿಪ್ಲೊಮೊ, (2) ಐ.ಟಿ.ಐ., (3) ನರ್ಸಿಂಗ್, (4) ಬಿ.ಎ., (5) ಬಿ.ಎಸ್.ಸಿ., (6) ಎಂ.ಎ., (7) ಎಂ.ಎಸ್.ಸಿ., (8) ಡಿ.ಇ.ಡಿ., (9) ಬಿ.ಎಡ್., ಹಾಗೂ ಸಾಮಾನ್ಯ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸಲಾಗುವುದು. ಈ ಯೋಜನೆಯಲ್ಲಿ ಸೌಲಭ್ಯ ಪಡೆಯಲು ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ಮಿತಿ ರೂ.6.00ಲಕ್ಷಗಳು.

4. ಅಲೆಮಾರಿ/ಅರೆ ಅಲೆಮಾರಿ ಜನಾಂಗದ ಯುವಕರಿಗೆ ಟೂರಿಸ್ಟ್ ಟ್ಯಾಕ್ಸಿ/ಸರಕು ಸಾಗಾಣಿಕೆ ವಾಹನ ಕೊಳ್ಳಲು ಸಹಾಯಧನ: ವಾಹನ ಚಾಲನಾ ಪರವಾನಗಿಯನ್ನು ಹೊಂದಿರುವ  ಅಲೆಮಾರಿ/ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ 62 ನಿರುದ್ಯೋಗಿ ಯುವಕರಿಗೆ ಟೂರಿಸ್ಟ್ ಟ್ಯಾಕ್ಸಿ/ಸರಕು ಸಾಗಾಣಿಕೆ ವಾಹನಗಳನ್ನು ಖರೀದಿಸಲು ರೂ.3.00ಲಕ್ಷಗಳ ವರೆಗೆ ಅಥವಾ ವಾಹನದ ಶೇ.50ರಷ್ಟು ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಸಹಾಯಧನ ನೀಡಲಾಗುವುದು. ಉಳಿದ ಮೊತ್ತವನ್ನು ಬ್ಯಾಂಕ್‍ಗಳಿಂದ ಸಾಲದ ರೂಪದಲ್ಲಿ ಪಡೆಯವುದು.

5. ಅಲೆಮಾರಿ/ಅರೆ ಅಲೆಮಾರಿ ಗಂಗಾ ಕಲ್ಯಾಣ ನೀರಾವರಿ ಸೌಲಭ್ಯ: ಅಲೆಮಾರಿ/ಅರೆ ಅಲೆಮಾರಿ ಸಮುದಾಯಗಳಿಗೆ ಸೇರಿದ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ವೈಯಕ್ತಿಕ/ಸಾಮೂಹಿಕ ನೀರಾವರಿ ಯೋಜನೆಯ ಘಟಕ ವೆಚ್ಚಗಳಲ್ಲಿ ನೀರಾವರಿ ಸೌಲಭ್ಯ ಒದಗಿಸಲಾಗುವುದು.


6. ಅಲೆಮಾರಿ/ಅರೆ ಅಲೆಮಾರಿ ಭೂ ಖರೀದಿ ಯೋಜನೆ: ಅಲೆಮಾರಿ/ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ ಕನಿಷ್ಠ 1 ಎಕರೆ ತರಿ ಭೂಮಿ ಅಥವಾ 2 ಎಕರೆ ಖುಷ್ಕಿ ಜಮೀನನ್ನು ಕೊಂಡುಕೊಳ್ಳಲು ಸಾಲ ಮತ್ತು ಸಹಾಯಧನ ಒದಗಿಸಲಾಗುವುದು. ಘಟಕ ವೆಚ್ಚ ರೂ.10.00ಲಕ್ಷಗಳನ್ನು ನಿಗದಿಪಡಿಸಿದೆ. ಈ ಮೊತ್ತದಲ್ಲಿ ಶೇ.50ರಷ್ಟು ಸಹಾಯಧನ ಹಾಗೂ ಉಳಿಕೆ ಶೇ.50ರಷ್ಟು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುವುದು.


  ​​​​​ಕರ್ನಾಟಕ ಅಲೆಮಾರಿ ಅರೆಅಲೆಮಾರಿ ಅಭಿವೃದ್ಧಿ ಮಂಡಳಿ ಒದಗಿಸುವ ಮೊತ್ತದಿಂದ ಅನುಷ್ಟಾನ ಗೊಳಿಸುವ ಕಾರ್ಯಕ್ರಮಗಳು ​

1. ಅಲೆಮಾರಿ/ಅರೆ ಅಲೆಮಾರಿ ಜನಾಂಗದ ಸ್ವಯಂ ಉದ್ಯೋಗ ಸಾಲ ಯೋಜನೆ:
ಸರ್ಕಾರದ ಆದೇಶ ಸಂಖ್ಯೆ: ಪಿ.ಹೆಚ್.ಎಸ್ 262 ಎಸ್.ಇ.ಡಬ್ಲ್ಯೂ 65, ದಿನಾಂಕ: 01/02/1966ರನ್ವಯ ಅಲೆಮಾರಿ/ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ 1) ಬೈರಾಗಿ (ಬಾವ), 2) ಬಾಲ ಸಂತೋಷಿ-ಜೋಷಿ, 3) ಬಾಜಿಗರ್, 4)ಭರಡಿ, 5)ಬುಡಬುಡಕಿ-ಜೋಶಿ-ಗೋಂಧಳಿ, 6)ಚಾರ, 7)ಚಿತ್ರಕಥಿ-ಜೋಷಿ, 8)ಧೋಲಿ, 9)ಢವೇರಿ, 10)ದೊಂಬರಿ, 11)ಘಿಸಾಡಿ, 12)ಗರುಡಿ, 13)ಗೋಪಾಲ್, 14)ಗೊಂದÀಳಿ, 15)ಹೆಳವ, 16)ಜೋಗಿ, 17)ಕೇಲ್ಕರಿ, 18)ಕೋಲ್ಹಟಿ, 19)ನಂದಿವಾಲ-ಜೋಷಿ-ಗೊಂದಳಿ, ಪುಲ್‍ಮಾಲ್ಲಿ, 20)ನಾಥಪಂಥಿ-ಡೌರಿ-ಗೋಸಾವಿ 21)ನಿರ್ಶಿಕಾರಿ, 22)ಪಾಂಗ್ಯುಯಲ್, 23)ಜೋಷಿ (ಸಾದ ಜೋಷಿ), 24)ಸಾನ್ಸಿಯ, 25)ಸರಾನಿಯ, 26)ತಿರುಮಲಿ, 27)ವಾಯ್ಡು 28)ವಾಸುದೇವ್, 29)ವಾಡಿ, 30)ವಾಗ್ರಿ, 31)ವಿರ್, 32)ಬಜನಿಯ, 33)ಶಿಕ್ಕಲಿಗರ್, 34)ಗೊಲ್ಲ, 35)ಕಿಲ್ಲಿಕ್ಯಾತ, 36)ಸರೋಡಿ, 37)ದುರ್ಗ-ಮುರ್ಗ (ಬುರ್‍ಬುರ್‍ಚ), 38)ಹಾವಗಾರ್ (ಹಾವಾಡಿಗಾರ್), 39)ಪಿಚಗುಂಟಲ, 40)ಮಸಣಿಯ ಯೋಗಿ, 40)(ಬೆಸ್ತರ್)ಬುಂಡಬೆಸ್ತ, 42)ಕಟಬು,  43)ದರ್ವೆಶ್, 44)ಕಾಶಿ ಕಪಾಡಿ, 45)ದೊಂಬಿದಾಸ ಮತ್ತು 46)ಬೈಲ್‍ಪತರ್ ಜನಾಂಗಕ್ಕೆ ಸೇರಿದವರಿಗೆ ಸ್ವಯಂ ಉದ್ಯೋಗಕ್ಕೆ ಅವರು ಕೈಗೊಳ್ಳುವ ಆರ್ಥಿಕ ಚಟುವಟಿಕೆ ಅನುಸಾರ   ರೂ.200000/-ಗಳವರೆಗೆ ಈ ಕೆಳಕಂಡಂತೆ ಸೌಲಭ್ಯ ಒದಗಿಸಲಾಗುವುದು.

ಘಟಕ ವೆಚ್ಚ ರೂ.50,000/-ಗಳಿಗೆ  ಶೇ.30ರಷ್ಟು ಗರಿಷ್ಟ ರೂ.10,000/-ಗಳ ಸಹಾಯಧನ ಉಳಿಕೆ ಶೇ.70ರಷ್ಟು ರೂ.40,000/-ಗಳನ್ನು ಶೇ.4ರ ಬಡ್ಡಿ ದರದಲ್ಲಿ ಸಾಲ.
ಘಟಕ ವೆಚ್ಚ ರೂ.50,001/-ರಿಂದ ರೂ.1,00,000/-ಗಳವರೆಗೆ ಶೇ.20ರಷ್ಟು ಗರಿಷ್ಟ ರೂ.20.000/-ಗಳ ಸಹಾಯಧನ ಉಳಿಕೆ ಶೇ.80ರಷ್ಟು ರೂ.80,000/-ಗಳನ್ನು ಶೇ.4ರ ಬಡ್ಡಿ ದರದಲ್ಲಿ ಸಾಲ.
ಘಟಕ ವೆಚ್ಚ ರೂ.1,00,001/-ರಿಂದ ರೂ.2,00,000/-ಗಳವರೆಗೆ ಶೇ.15ರಷ್ಟು ಕನಿಷ್ಟ  ರೂ.20,000/-ಗಳ ಗರಿಷ್ಟ ರೂ.30,000/-ಗಳ ಸಹಾಯಧನ ಉಳಿಕೆ ಶೇ.85ರಷ್ಟು ರೂ.1.70.000/-ಗಳನ್ನು ಶೇ.4ರ ಬಡ್ಡಿ ದರದಲ್ಲಿ ಸಾಲ.


2. ಅಲೆಮಾರಿ/ಅರೆ ಅಲೆಮಾರಿ ಅರಿವು/ಶೈಕ್ಷಣಿಕ ಸಾಲ ಯೋಜನೆ ಸಾಲ ಯೋಜನೆ: ಅಲೆಮಾರಿ/ಅರೆ ಅಲೆಮಾರಿ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡಲು ವಾರ್ಷಿಕ ಶೇ.2ರ ಬಡ್ಡಿದರದಲ್ಲಿ ವಾರ್ಷಿಕ ಗರಿಷ್ಠ ರೂ.1.00ಲಕ್ಷಗಳ ವರೆಗೆ ಆರ್ಥಿಕ ನೆರವು ಒದಗಿಸಲಾಗುವುದು. ಅರಿವು-ಶೈಕ್ಷಣಿಕ ಸಾಲ ಯೋಜನೆಯಲ್ಲಿ ಗುರುತಿಸಿರುವ 28 ಕೋರ್ಸ್‍ಗಳು ಹಾಗೂ (1) ಡಿಪ್ಲೊಮೊ, (2) ಐ.ಟಿ.ಐ., (3) ನರ್ಸಿಂಗ್, (4) ಬಿ.ಎ., (5) ಬಿ.ಎಸ್.ಸಿ., (6) ಎಂ.ಎ., (7) ಎಂ.ಎಸ್.ಸಿ., (8) ಡಿ.ಇ.ಡಿ., (9) ಬಿ.ಎಡ್., ಹಾಗೂ ಸಾಮಾನ್ಯ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸಲಾಗುವುದು. ಈ ಯೋಜನೆಯಲ್ಲಿ ಸೌಲಭ್ಯ ಪಡೆಯಲು ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ಮಿತಿ ರೂ.6.00ಲಕ್ಷಗಳು.​

3. ಅಲೆಮಾರಿ/ಅರೆ ಅಲೆಮಾರಿ ಗಂಗಾ ಕಲ್ಯಾಣ ನೀರಾವರಿ ಸೌಲಭ್ಯ: ಅಲೆಮಾರಿ/ಅರೆ ಅಲೆಮಾರಿ ಸಮುದಾಯಗಳಿಗೆ ಸೇರಿದ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ವೈಯಕ್ತಿಕ/ಸಾಮೂಹಿಕ ನೀರಾವರಿ ಯೋಜನೆಯ ಘಟಕ ವೆಚ್ಚಗಳಲ್ಲಿ ನೀರಾವರಿ ಸೌಲಭ್ಯ ಒದಗಿಸಲಾಗುವುದು.


4. ಅಲೆಮಾರಿ/ಅರೆ ಅಲೆಮಾರಿ ಭೂ ಖರೀದಿ ಯೋಜನೆ: ಅಲೆಮಾರಿ/ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ ಕನಿಷ್ಠ 1 ಎಕರೆ ತರಿ ಭೂಮಿ ಅಥವಾ 2 ಎಕರೆ ಖುಷ್ಕಿ ಜಮೀನನ್ನು ಕೊಂಡುಕೊಳ್ಳಲು ಸಾಲ ಮತ್ತು ಸಹಾಯಧನ ಒದಗಿಸಲಾಗುವುದು. ಘಟಕ ವೆಚ್ಚ ರೂ.10.00ಲಕ್ಷಗಳನ್ನು ನಿಗದಿಪಡಿಸಿದೆ. ಈ ಮೊತ್ತದಲ್ಲಿ ಶೇ.50ರಷ್ಟು ಸಹಾಯಧನ ಹಾಗೂ ಉಳಿಕೆ ಶೇ.50ರಷ್ಟು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುವುದು.

7. ಅಲೆಮಾರಿ/ಅರೆ ಅಲೆಮಾರಿ ಜನಾಂಗದ ವೃತ್ತಿಪರ/ಉದ್ಯಮ ಶೀಲತಾ ತರಬೇತಿ ಕಾರ್ಯಕ್ರಮ: ನಿಗಮದ ವಿವಿಧ ಯೋಜನೆಗಳಲ್ಲಿ ಸಾಲ ಸೌಲಭ್ಯ ಪಡೆದ ಫಲಾನುಭವಿಗಳಿಗೆ ಕಾರ್ಯಕ್ರಮಗಳಲ್ಲಿ ಸಾಲ ಸೌಲಭ್ಯ ಪಡೆಯುವ ಫಲಾನುಭವಿಗೆ ಕನಿಷ್ಟ 3 ದಿನದ ಉದ್ಯಮಶೀಲತಾ ತರಬೇತಿಯನ್ನು ಕೊಡಿಸಲಾಗುವುದು.
ನಿರುದ್ಯೋಗಿ ಯುವಕ ಯುವತಿಯರಿಗೆ ವೃತ್ತಿಪರ ಕೋರ್ಸ್‍ಗಳಲ್ಲಿ ರೆಡಿಮೇಡ್ ಗಾರ್ಮೆಟ್ಸ್, ಕಂಪ್ಯೂಟರ್ ತರಬೇತಿ, ಪ್ಲಂಬಿಂಗ್ ತರಬೇತಿ, ಇತ್ಯಾದಿ ಅಲ್ಪಾವದಿ 3 ರಿಂದ 4 ತಿಂಗಳುಗಳ ಅವಧಿಯ ತರಬೇತಿಯನ್ನು ಕೊಡಿಸಲಾಗುವುದು.

​​​​​​ಅತ್ಯಂತ/ಅತಿ ಹಿಂದುಳಿದ ತಾಲ್ಲೂಕುಗಳಲ್ಲಿ ಯುವಜನರ ಆರ್ಥಿಕ ಸಶಕ್ತಿಕರಣಕ್ಕಾಗಿ ಆರ್ಥಿಕ ನೆರವು ಯೋಜನೆ: ​
     2016-17ನೇ ಸಾಲಿನ ಆಯವ್ಯಯ ಭಾಷಣದಲ್ಲಿ “ಅತಿ ಹಿಂದುಳಿದ ತಾಲ್ಲೂಕುಗಳಲ್ಲಿ ಯುವಜನರ ಆರ್ಥಿಕ ಸಶಕ್ತೀಕರಣಕ್ಕಾಗಿ ರೂ.10.00ಕೋಟಿಗಳನ್ನು ಒದಗಿಸಲಾಗುವುದು” ಎಂದು ಘೋಷಿಸಲಾಗಿರುತ್ತದೆ. ಆದ್ದರಿಂದ, ಡಾ|| ಡಿ.ಎಂ.ನಂಜುಂಡಪ್ಪ ವರದಿಯಲ್ಲಿ ಗುರುತಿಸಿರುವ ಅತ್ಯಂತ ಹಿಂದುಳಿದ 39 ತಾಲ್ಲೂಕುಗಳು ಹಾಗೂ ಅತಿ ಹಿಂದುಳಿದ 40 ತಾಲ್ಲೂಕುಗಳು ಹೀಗೆ ಒಟ್ಟು 79 ತಾಲ್ಲೂಕುಗಳಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುವ 10 ಸದಸ್ಯರನ್ನು ಒಳಗೊಂಡ ಸ್ವ ಸಹಾಯ ಗುಂಪುಗಳಿಗೆ ಆರ್ಥಿಕ ನೆರವನ್ನು ಒದಗಿಸುವುದು.
         ಈ ಸ್ವ ಸಹಾಯ ಗುಂಪುಗಳ ಮೂಲಕ ಗ್ರಾಮ ಮಟ್ಟದಲ್ಲಿ ಜನರಿಗೆ ಅವಶ್ಯವಿರುವ ಸೇವೆಗಳನ್ನು/ಕಾಮಗಾರಿಗಳನ್ನು ನಿರ್ವಹಿಸಲು ಚಟುವಟಿಕೆ ಅನುಸಾರ ಪ್ರತಿ ಸದಸ್ಯರಿಗೆ ಗರಿಷ್ಠ ರೂ.35000/-ಗಳಂತೆ ಆರ್ಥಿಕ ನೆರವು. ಇದರಲ್ಲಿ, ಶೇ.30ರಷ್ಟು ಗರಿಷ್ಠ ರೂ.10000/-ಗಳ ಸಹಾಯಧನ, ಉಳಿಕೆ ಮೊತ್ತ ಶೇ.70ರಷ್ಟು ಗರಿಷ್ಠ ರೂ.25000/-ಗಳು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಒದಗಿಸಲಾಗುವುದು. ಹೀಗೆ ಪ್ರತಿ ಗುಂಪಿಗೆ ಗರಿಷ್ಠ ರೂ.3.50ಲಕ್ಷಗಳ ಆರ್ಥಿಕ ನೆರವನ್ನು ಒದಗಿಸುವುದು. ​


​​​​
ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಆರ್ಥಿಕ ನೆರವು:
1. ಉದ್ದೇಶ: ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪಿ.ಹೆಚ್.ಡಿ., ಪೋಸ್ಟ್ ಡಾಕ್ಟ್ರಲ್ ಮತ್ತು ಮಾಸ್ಟರ್ ಡಿಗ್ರಿ ವ್ಯಾಸಂಗಕ್ಕೆ ಪ್ರವೇಶ ಹೊಂದಿದ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, 3ಬಿ 
(ವಿಶ್ವಕರ್ಮ ಸಮುದಾಯಗಳ ಮತ್ತು ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ) ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲ.
2. ಸಾಲದ ಮೊತ್ತ: ವಾರ್ಷಿಕ ಗರಿಷ್ಠ ರೂ.3.50ಲಕ್ಷಗಳಂತೆ 3 ವರ್ಷದ ಅವಧಿಗೆ ಗರಿಷ್ಠ ರೂ.10.00ಲಕ್ಷಗಳು.
3. ಅಭ್ಯರ್ಥಿಯ ವಯಸ್ಸು 35 ವರ್ಷಗಳ ವಯೋಮಿತಿಯಲ್ಲಿರಬೇಕು.
4. ಕುಟುಂಬದ ವಾರ್ಷಿಕ ಆದಾಯ ರೂ.3,50,000/-ಗಳ ಮಿತಿಯಲ್ಲಿರಬೇಕು.
5. ವ್ಯಾಸಂಗಕ್ಕೆ ಪ್ರವೇಶ ಪಡೆದ ಬಗ್ಗೆ ವಿದೇಶಿ ವಿಶ್ವವಿದ್ಯಾಲಯಗಳ ಪ್ರವೇಶ ಪತ್ರ, ವೀಸಾ, ಪಾಸ್‍ಪೋರ್ಟ್, ಏರ್‍ಟಿಕೇಟ್‍ನ ಪ್ರತಿ ಒದಗಿಸಬೇಕು.
6. ಸಾಲದ ಭದ್ರತೆಗೆ ವಿದ್ಯಾರ್ಥಿಯ ತಂದೆ ಅಥವಾ ಜಾಮೀನುದಾರರು ಹೊಂದಿರುವ ಸ್ಥಿರಾಸ್ಥಿಯನ್ನು ನಿಗಮಕ್ಕೆ ಆಧಾರ ಮಾಡಬೇಕು. (ಕೊಲ್ಯಾಟರಲ್ ಸೆಕ್ಯೂರಿಟಿ)
7. ಅಭ್ಯರ್ಥಿಗಳ ಆಯ್ಕೆ: ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು/ಕಾರ್ಯದರ್ಶಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ರಚಿಸಿರುವ ಆಯ್ಕೆ ಸಮಿತಿಯ ಮೂಲಕ ಆಯ್ಕೆ ಮಾಡುವುದು.
8. ಮರುಪಾವತಿ ಅವಧಿ: ಮರುಪಾವತಿ ಅವಧಿ ಗರಿಷ್ಠ 60 ಮಾಸಿಕ ಕಂತುಗಳು. ವ್ಯಾಸಂಗ ಪೂರ್ಣಗೊಂಡ 1 ವರ್ಷದ ನಂತರ ಅಥವಾ ಉದ್ಯೋಗ ದೊರೆತ 6 ತಿಂಗಳ ನಂತರ ಮರುಪಾವತಿ ಕಂತು ಪ್ರಾರಂಭವಾಗುತ್ತದೆ.​
​ ​
​​​​ ​   ​ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಅನುಷ್ಟಾನಗೊಳಿಸುವ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ್ತ ವ್ಯಾಸಂಗಕ್ಕೆ ಬಡ್ಡಿರಹಿತ ಸಾಲ ಯೋಜನೆಗಳಲ್ಲಿ ನಿಗದಿಪಡಿಸಿದ ಫಲಾನುಭವಿಗಳ ​ವಾರ್ಷಿಕ                       ಆದಾಯದ ಮಿತಿಯನ್ನು ಹೆಚ್ಚಿಸುವ ಕುರಿತು ​​

ಸಾರ್ವಜನಿಕರೇ ಗಮನಿಸಿ : ಡಿ.31 ರೊಳಗೆ ತಪ್ಪದೇ ಈ 4 ಪ್ರಮುಖ ಕೆಲಸಗಳನ್ನ ಮುಗಿಸಿಕೊಳ್ಳಿ.

ಡಿಸೆಂಬರ್ 31 ರ ನಂತರ ಈ ಕೆಲಸಗಳನ್ನು ಮಾಡಲು ನಿಮಗೆ ಇನ್ನೊಂದು ಅವಕಾಶ ಸಿಗುವುದಿಲ್ಲ. ಇಲ್ಲದಿದ್ದರೆ, ನೀವು ಭಾರಿ ದಂಡವನ್ನು ಪಾವತಿಸಬೇಕಾಗಬಹುದು ಅಥವಾ ನಿ...