Followers

Monday, July 22, 2019


ಮಾನ್ಯ ಸುಪ್ರೀಂ ಕೋರ್ಟಿನ ಆದೇಶಾನುಸಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಪರಿಷ್ಕೃತ ಪದಕ್ರಮ ಪಟ್ಟಿಗಳು

ಪದಕ್ರಮ ಪಟ್ಟಿಗಳು
ದಿನಾಂಕ: 1.1.2019 ರಂದು ಇದ್ದಂತೆ ಹೊರಡಿಸಿರುವ ಎಲ್ಲಾ ವೃಂದದ ನೌಕರರ ಅಂತಿಮ ಪದಕ್ರಮ ಪಟ್ಟಿಗಳು.

1ಜಂಟಿ ನಿರ್ದೇಶಕರು
2ಉಪ ನಿರ್ದೇಶಕರು
3ಜಿಲ್ಲಾ ಅಧಿಕಾರಿಗಳು
4ಪತ್ರಾಂಕಿತ ವ್ಯವಸ್ಥಾಪಕರು
5ಪ್ರಥಮ ದರ್ಜೆ ಸಹಾಯಕರು
6ದ್ವಿತೀಯ ದರ್ಜೆ ಸಹಾಯಕರು
7ಶೀಘ್ರಲಿಪಿಗಾರರು
8ಹಿರಿಯ ಬೆರಳಚ್ಚುಗಾರರು / ಬೆರಳಚ್ಚುಗಾರರು
9ಹೊಲಿಗೆ ತರಬೇತಿ ಶಿಕ್ಷಕರು
10ಮಹಿಳಾ ಕಲ್ಯಾಣ ಕೇಂದ್ರ ಸಂಚಾಲಕಿಯರು
11ವಾಹನ ಚಾಲಕರು
12ಆಶ್ರಮಶಾಲಾ ಶಿಕ್ಷಕರು
13ಕಛೇರಿ ಮೇಲ್ವಿಚಾರಕರು / ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು
14ನಿಲಯ ಪಾಲಕರು (ಪುರುಷ)
15ನಿಲಯ ಪಾಲಕರು (ಮಹಿಳೆ)
16ನಿಲಯ ಮೇಲ್ವಿಚಾರಕರು (ಪುರುಷ)
17ನಿಲಯ ಮೇಲ್ವಿಚಾರಕರು (ಮಹಿಳೆ)
18ಕಿರಿಯ ನಿಲಯ ಮೇಲ್ವಿಚಾರಕರು(ಪುರುಷ)
19ಕಿರಿಯ ನಿಲಯ ಮೇಲ್ವಿಚಾರಕರು(ಮಹಿಳೆ)
ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಸ್ವರ್ಧಾತ್ಮಕ ಪರೀಕ್ಷೆಗಳ ಪರೀಕ್ಷಾ ಪೂರ್ವ ತರಬೇತಿ
(ಲೆಕ್ಕಶೀರ್ಷಿಕೆ ರಾಜ್ಯವಲಯ ಯೋಜನೆ 2225-03-277-2-37) (2016-17ನೇ ಸಾಲಿನ ತರಬೇತಿ, ಅರಿವು ಮತ್ತು ಪ್ರೋತ್ಸಾಹ, ಹಿಂದುಳಿದ
ವರ್ಗಗಳ ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮದಡಿ ಒದಗಿಸಿರುವ ಆಯವ್ಯಯ ರೂ.3466.00 ಲಕ್ಷಗಳಲ್ಲಿ ಹಂಚಿಕೆ ಮಾಡಲಾಗುವುದು)
ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಐ.ಎ.ಎಸ್, ಕೆ.ಎ.ಎಸ್ ಹಾಗೂ ಬ್ಯಾಂಕ್ ಪ್ರೊಬೇಷನರ್ ಆಫೀಸರ್ಸ್ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ
ತರಬೇತಿಯನ್ನು ಪ್ರತಿಷ್ಟಿತ ಖಾಸಗಿ ತರಬೇತಿ ಸಂಸ್ಥೆಗಳ ಮೂಲಕ ನೀಡಲಾಗುತ್ತಿದೆ.
ಅರ್ಹತೆಗಳು:
1.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಿಂದುಳಿದ ವರ್ಗಗಳ ಅಭ್ಯರ್ಥಿಯು ಐ.ಎ.ಎಸ್, ಕೆ.ಎ.ಎಸ್ ಅಥವಾ ಬ್ಯಾಂಕ್
ಪ್ರೊಬೇಷನರ್ ಆಫೀಸರ್ಸ್ ಪರೀಕ್ಷೆಗಳ ಪರೀಕ್ಷಾ ಪೂರ್ವ ತರಬೇತಿಗಳಲ್ಲಿ ಯಾವುದಾರೊಂದಕ್ಕೆ ಒಂದು ಬಾರಿ ಮಾತ್ರ ಉಚಿತ
ಪರೀಕ್ಷಾ ಪೂರ್ವ ತರಬೇತಿಯನ್ನು ಪಡೆಯಬಹುದು.
2.ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು, ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಅಥವಾ 3(ಬಿ) ಗೆ ಸೇರಿದ ಅರ್ಹ
ಅಭ್ಯರ್ಥಿಗಳು oಟಿಟiಟಿe ಮೂಲಕ ಅರ್ಜಿಗಳನ್ನು ಸಲ್ಲಿಸುವುದು.
3.ಅಭ್ಯರ್ಥಿಯ ಮತ್ತು ಕುಟುಂಬದ ವಾರ್ಷಿಕ ಆದಾಯ ಮಿತಿ ಪ್ರವರ್ಗ 1 ರ ಅಭ್ಯರ್ಥಿಗಳಿಗೆ ರೂ.4.50 ಲಕ್ಷ ಹಾಗೂ ಪ್ರವರ್ಗ 2(ಎ),
3(ಎ) ಮತ್ತು 3(ಬಿ) ಅಭ್ಯರ್ಥಿಗಳಿಗೆ ರೂ.3.50 ಲಕ್ಷಗಳು.
4.ಅಭ್ಯರ್ಥಿಯು ಸಕ್ಷಮ ಪ್ರಾಧಿಕಾರದಿಂದ ಪಡೆದಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಹೊಂದಿರಬೇಕು.
5.ಅಭ್ಯರ್ಥಿಯು ಯಾವುದಾದರೊಂದು ಅಂಗೀಕೃತ ವಿಶ್ವವಿದ್ಯಾಲಯದ ಪದವೀಧರನಾಗಿರಬೇಕು ಅಥವಾ ಕೇಂದ್ರ ಲೋಕಸೇವಾ ಆಯೋಗ/ಕರ್ನಾಟಕ
ಲೋಕಸೇವಾ ಆಯೋಗ/ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು (ಬ್ಯಾಂಕ್) ಕೋರುವ ಷರತ್ತಿಗೊಳಪಟ್ಟಿರಬೇಕು.
6.ಅಭ್ಯರ್ಥಿಯ ವಯೋಮಿತಿ ಕನಿಷ್ಠ 21 ವರ್ಷ ವಯಸ್ಸಿನವರಾಗಿರಬೇಕು.
7.ಕೇಂದ್ರ/ರಾಜ್ಯ ಸರ್ಕಾರದ/ಅನುದಾನಿತ ಸಂಸ್ಥೆಗಳ/ಸಾರ್ವಜನಿಕ ಸ್ವಾಮ್ಯತೆಗೆ ಒಳಪಟ್ಟ ಸಂಸ್ಥೆಗಳಲ್ಲಿನ ನೌಕರರು ಅರ್ಜಿ ಸಲ್ಲಿಸಲು ಮತ್ತು ತರಬೇತಿ
ಪಡೆಯಲು ಅರ್ಹರಲ್ಲ.
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ:
1.ದಿನಪತ್ರಿಕೆಗಳು/ವೆಬ್‍ಸೈಟ್ ಮುಖಾಂತರ ವ್ಯಾಪಕ ಪ್ರಚಾರವನ್ನು ನೀಡಿ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ
ಅರ್ಜಿಗಳನ್ನು ಅಹ್ವಾನಿಸಲಾಗುವುದು.
2.ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ಏರ್ಪಡಿಸಲಾಗುವುದು ಹಾಗೂ ಲಿಖಿತ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳು,
ಪ್ರವರ್ಗವಾರು ಮೀಸಲಾತಿ,ವಿವಿಧ ಸಂಸ್ಥೆಗಳಲ್ಲಿ ಲಭ್ಯವಿರುವ ಹಾಗೂ ಈ ಸಂಸ್ಥೆಗಳಿಗೆ ಸರ್ಕಾರ ನಿಗದಿಪಡಿಸುವ ಸಂಖ್ಯೆ
ಗಳಿಗೆ ಅನುಗುಣವಾಗಿ ಅಭ್ಯರ್ಥಿಗಳನ್ನು ಅವರ ಮೂಲ ದಾಖಲೆಗಳ ಪರಿಶೀಲನೆ ಮಾಡಿದ ನಂತರ ತರಬೇತಿಗಾಗಿ ಕೌನ್ಸಿ
-ಲಿಂಗ್ ಮೂಲಕ ವಿವಿಧ ತರಬೇತಿ ಸಂಸ್ಥೆಗಳಿಗೆ ನಿಯೋಜಿಸಲಾಗುವುದು.
3.ಲಿಖಿತ ಪರೀಕ್ಷೆಯು ಇಂಗ್ಲೀಷ್, ಸಾಮಾನ್ಯ ಜ್ಞಾನ ಮತ್ತು ಗಣಿತ ಇತ್ಯಾದಿ ವಿಷಯಗಳನ್ನು ಒಳಗೊಂಡಿರುತ್ತದೆ.
ತರಬೇತಿಗೆ ಆಯ್ಕೆಯಾಗಿ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಸರ್ಕಾರದ ವತಿಯಿಂದ ನೀಡುವ ಸೌಲಭ್ಯಗಳು:
1.ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ತರಬೇತಿ ಅವಧಿಗೆ ಮಾಸಿಕ ತರಬೇತಿ ಭತ್ಯೆಯನ್ನು ಕೆಳಕಂಡಂತೆ ನೀಡಲಾಗುವುದು.
ಕ್ರ. ಸಂ.ಪರೀಕ್ಷಾ ಪೂರ್ವ ತರಬೇತಿತರಬೇತಿ ಸಂಸ್ಥೆಯ ಸ್ಥಳತರಬೇತಿ ಭತ್ಯೆ (ಪ್ರತಿ ಅಭ್ಯರ್ಥಿಗೆ)
1ಐ.ಎ.ಎಸ್.
ದೆಹಲಿ
ಹೈದರಾಬಾದ್
ಬೆಂಗಳೂರು
6000 + ತರಬೇತಿ ವೆಚ್ಚ
10000 + ತರಬೇತಿ ವೆಚ್ಚ
ತರಬೇತಿ ಸಂಸ್ಥೆ ಇರುವ ಸ್ಥಳಕ್ಕೆ ಸಂಬಂಧಿಸಿದಂತೆ ಸ್ಥಳೀಯ ಜಿಲ್ಲೆಯ ಅಭ್ಯರ್ಥಿಗಳಿಗೆ
2000 ಮತ್ತು ಹೊರ ಜಿಲ್ಲೆಗಳ ಅಭ್ಯರ್ಥಿಗಳಿಗೆ 4000 ಹಾಗೂ ತರಬೇತಿ ವೆಚ್ಚ
2ಕೆ.ಎ.ಎಸ್.ಕರ್ನಾಟಕತರಬೇತಿ ಸಂಸ್ಥೆ ಇರುವ ಸ್ಥಳಕ್ಕೆ ಸಂಬಂಧಿಸಿದಂತೆ ಸ್ಥಳೀಯ ಜಿಲ್ಲೆಯ ಅಭ್ಯರ್ಥಿಗಳಿಗೆ 2000
ಮತ್ತು ಹೊರ ಜಿಲ್ಲೆಗಳ ಅಭ್ಯರ್ಥಿಗಳಿಗೆ 4000 ಹಾಗೂ ತರಬೇತಿ ವೆಚ್ಚ
3ಬ್ಯಾಂಕಿಂಗ್ಕರ್ನಾಟಕತರಬೇತಿ ಸಂಸ್ಥೆ ಇರುವ ಸ್ಥಳಕ್ಕೆ ಸಂಬಂಧಿಸಿದಂತೆ ಸ್ಥಳೀಯ ಜಿಲ್ಲೆಯ ಅಭ್ಯರ್ಥಿಗಳಿಗೆ 2000
ಮತ್ತು ಹೊರ ಜಿಲ್ಲೆಗಳ ಅಭ್ಯರ್ಥಿಗಳಿಗೆ 4000 ಹಾಗೂ ತರಬೇತಿ ವೆಚ್ಚ
2.ತರಬೇತಿ ಶುಲ್ಕವನ್ನು ಇಲಾಖೆಯಿಂದಲೇ ತರಬೇತಿ ಸಂಸ್ಥೆಗೆ ಪಾವತಿಸಲಾಗುವುದು.
3.ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಸಂಸ್ಥೆಯಿಂದ ಒಂದು ಸೆಟ್ ಕೋರ್ಸ್ ಮೆಟೀರಿಯಲ್ ಅನ್ನು
ನೀಡಲಾಗುವುದು.
4. ಐ.ಎ.ಎಸ್ ಪರೀಕ್ಷಾ ಪೂರ್ವ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಸ್ವಂತ ಸ್ಥಳದಿಂದ ತರಬೇತಿ ಸಂಸ್ಥೆ ಇರುವ ಸ್ಥಳಕ್ಕೆ
ಒಂದು ಬಾರಿ ಹೋಗಿ ಬರಲು ದ್ವಿತೀಯ ದರ್ಜೆ ರೈಲ್ವೆ (ಸ್ಲೀಪರ್) ಪ್ರಯಾಣ ಭತ್ಯೆ ನೀಡಲಾಗುವುದು.
ಐ.ಎ.ಎಸ್ ಪರೀಕ್ಷೆಗೆ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು
ಕೌಶಲ್ಯ ತರಬೇತಿ ಕಾರ್ಯಕ್ರಮ
(ಲೆಕ್ಕಶೀರ್ಷಿಕೆ ರಾಜ್ಯವಲಯ ಯೋಜನೆ 2225-03-277-2-37) (2016-17ನೇ ಸಾಲಿನ ತರಬೇತಿ, ಅರಿವು ಮತ್ತು ಪ್ರೋತ್ಸಾಹ,ಹಿಂದುಳಿದ ವರ್ಗಗಳ
ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮದಡಿ ಒದಗಿಸಿರುವ ಆಯವ್ಯಯ ರೂ.3466.00 ಲಕ್ಷಗಳಲ್ಲಿ ಹಂಚಿಕೆ ಮಾಡಲಾಗುವುದು)
ಹಿಂದುಳಿದ ವರ್ಗಗಳ ನಿರುದ್ಯೋಗಿ ಮಹಿಳಾ/ಪುರುಷ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿ ನೀಡುವ ಮೂಲಕ ಸ್ವಯಂ ಉದ್ಯೋಗ ರೂಪಿಸಿಕೊಳ್ಳಲು
2015-16 ನೇ ಸಾಲಿನಲ್ಲಿ ಈ ಕೆಳಕಂಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
1.ಬೆಂಗಳೂರಿನ ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (NIFT) ಸಂಸ್ಥೆಯ ಮೂಲಕ ಫ್ಯಾಷನ್ ಟೆಕ್ನಾಲಜಿ ತರಬೇತಿ.
1.National Institute of Fashion Technology, ಬೆಂಗಳೂರು ಸಂಸ್ಥೆಯ ಮೂಲಕ ಫ್ಯಾಶನ್ ಟೆಕ್ನಾಲಜಿಯ,
ಈ ಕೆಳಗಿನ ಕೋರ್ಸ್‍ಗಳಿಗೆ ಉಚಿತ ತರಬೇತಿಯನ್ನು ನೀಡಲಾಗುವುದು.
Sl. No.CourseMinimum QualificationAge limitDuration
1Garment manufacturing technology
(Developing Line supervisor)
10+2 Pass18-356 months
2Apparel quality control, product
analysis and assurance
10+2 Pass18-356 months
3Garment construction (Developing Sewing
operators for Garment manufacturing units
and also boutique establishment)
10+2 Pass18-356 months
2.ತರಬೇತಿ ಸಂಸ್ಥೆ ಇರುವ ಸ್ಥಳಕ್ಕೆ ಸಂಬಂಧಿಸಿದಂತೆ ಸ್ಥಳೀಯ ಜಿಲ್ಲೆಯ ಅಭ್ಯರ್ಥಿಗಳಿಗೆ ರೂ.1000/-
ಮತ್ತು ಹೊರ ಜಿಲ್ಲೆಗಳ ಅಭ್ಯರ್ಥಿಗಳಿಗೆ ರೂ.3000/-ಗಳು.
2.VTU ಕೌಶಲ್ಯ ಅಭಿವೃದ್ಧಿ ತರಬೇತಿ ಕೆಂದ್ರÀಗಳ ಮೂಲಕ ಕೌಶಲ್ಯ ತರಬೇತಿ.
1.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರಗಳಾದ ಬೆಂಗಳೂರು, ಬೆಳಗಾವಿ,
ಕಲಬುರ್ಗಿ ಹಾಗೂ ಮೈಸೂರು ವಿಭಾಗೀಯ ಕೇಂದ್ರಗಳ ಮೂಲಕ ಈ ಕೆಳಗಿನ ಕೋರ್ಸ್‍ಗಳಿಗೆ ಉಚಿತ ತರಬೇತಿಯನ್ನು
ನೀಡಲಾಗುವುದು (ಒಬ್ಬ ಅಭ್ಯರ್ಥಿಗೆ ಒಂದು ಕೋರ್ಸ್‍ನಲ್ಲಿ ಮಾತ್ರ ತರಬೇತಿಯನ್ನು ನೀಡಲಾಗುವುದು).
Sl. No.CourseMinimum QualificationAge limitDuration
1Bar Bending8 Pass18-352 months
2Masonary
3Shuttering Carpentry
4Plumbing
5Painting
6Scaffolding
2.ತರಬೇತಿ ಸಂಸ್ಥೆ ಇರುವ ಸ್ಥಳಕ್ಕೆ ಸಂಬಂಧಿಸಿದಂತೆ ಸ್ಥಳೀಯ ಜಿಲ್ಲೆಯ ಅಭ್ಯರ್ಥಿಗಳಿಗೆ ರೂ.1000/-
ಮತ್ತು ಹೊರ ಜಿಲ್ಲೆಗಳ ಅಭ್ಯರ್ಥಿಗಳಿಗೆ ರೂ.3000/-ಗಳು.
VTU ಮೂಲಕ ತರಬೇತಿ
3.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಈ ಕೆಳಕಂಡ ತರಬೇತಿ ಸಂಸ್ಥೆಗಳ ಮೂಲಕ ತರಬೇತಿ:
1.ಕ.ರಾ.ರ.ಸಾ.ನಿಗಮ:
1) ಕೇಂದ್ರಿಯ ತರಬೇತಿ ಕೇಂದ್ರ, ಬೆಂಗಳೂರು
2) ಪ್ರಾದೇಶಿಕ ತರಬೇತಿ ಕೇಂದ್ರ, ಮಳವಳ್ಳಿ
3) ಪ್ರಾದೇಶಿಕ ತರಬೇತಿ ಕೇಂದ್ರ, ಹಾಸನ
2.ಬೆಂ.ಮ.ಸಾ.ಸಂಸ್ಥೆ:
1)ಚಾಲಕ ತರಬೇತಿ ಕೇಂದ್ರ, ವಡ್ಡರಹಳ್ಳಿ, ಬೆಂಗಳೂರು
3.ಈ.ಕ.ರ.ಸಾ.ನಿಗಮ:
1) ಪ್ರಾದೇಶಿಕ ತರಬೇತಿ ಕೇಂದ್ರ, ಹುಮನಾಬಾದ್
2) ಚಾಲಕ ತರಬೇತಿ ಕೇಂದ್ರ, ಹಗರಿಬೊಮ್ಮನಹಳ್ಳಿ
4.ವಾ.ಕ.ರ.ಸಾ.ನಿಗಮ:
1) ಪ್ರಾದೇಶಿಕ ತರಬೇತಿ ಕೇಂದ್ರ, ಹುಬ್ಬಳ್ಳಿ
ಅ) ನಿಗದಿಪಡಿಸಿರುವ ಅರ್ಹತೆಗಳು:
1) ವಯೋಮಿತಿ: ಕನಿಷ್ಠ 21 ವರ್ಷಗಳು ಗರಿಷ್ಠ 35 ವರ್ಷಗಳು ಪೂರ್ಣಗೊಂಡಿರಬೇಕು.
2) ಎಲ್.ಎಂ.ವಿ ಪರವಾನಗಿ ಪಡೆದು ಕನಿಷ್ಠ ಒಂದು ವರ್ಷ ಪೂರ್ಣಗೊಂಡಿರಬೇಕು. ಒಂದು ವೇಳೆ ಟ್ರ್ಯಾಕ್ಟರ್
ಎಲ್.ಎಂ.ವಿ ಆಗಿದ್ದರೆ ಪರವಾನಗಿ ಪಡೆದು 2 ವರ್ಷ ಪೂರ್ಣಗೊಂಡಿರಬೇಕು.
3) ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು.
ಆ) ವಿದ್ಯಾರ್ಥಿಗಳಿಗೆ ಒದಗಿಸಲಾಗುವ ಸೌಲಭ್ಯಗಳ ವಿವರಗಳು:
1) ಉಚಿತ ಊಟ ಮತ್ತು ವಸತಿ ವ್ಯವಸ್ಥೆ.
2) ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ರೂ.1,000/- ತರಬೇತಿ ಭತ್ಯೆ ಹಾಗೂ ರೂ.500/- ಸಮವಸ್ತ್ರ
ಭತ್ಯೆಯನ್ನು ತರಬೇತಿ ಮುಕ್ತಾಯಗೊಂಡ ಬಳಿಕ ನೀಡಲಾಗುವುದು.
4.ಜಿಲ್ಲಾ ಮಟ್ಟದಲ್ಲಿ ಲಘು ವಾಹನ ಚಾಲನಾ ತರಬೇತಿ
1) ಲಘು/ಭಾರೀ ವಾಹನ ಚಾಲನಾ ತರಬೇತಿ ಪಡೆಯುವ ಅಭ್ಯರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು,
ಹಿಂದುಳಿದ ವರ್ಗಗಳ ಪ್ರವರ್ಗ-1/2ಎ/3ಎ/3ಬಿ ಗೆ ಸೇರಿರಬೇಕು.
2) ಅಭ್ಯರ್ಥಿಯು ಕನಿಷ್ಠ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
3) ಕನಿಷ್ಠ 21 ವರ್ಷ ವಯೋಮಿತಿಯನ್ನು ಪೂರೈಸಿರಬೇಕು.
4) ಭಾರೀ ವಾಹನ ಚಾಲನಾ ತರಬೇತಿ ಪಡೆಯುವ ಅಭ್ಯರ್ಥಿಯು ಲಘು ವಾಹನ ಚಾಲನಾ ಪರವಾನಗಿ
ಪಡೆದು ಕನಿಷ್ಠ ಒಂದು ವರ್ಷ ಪೂರೈಸಿರಬೇಕು.
5) ಕೇಂದ್ರ ಮೋಟಾರು ವಾಹನ ನಿಯಮಾವಳಿಗಳು 1989 ನಿಯಮ 5 ರಂತೆ ವೈದ್ಯಕೀಯ ಪ್ರಮಾಣ
ಪತ್ರವನ್ನು ಹಾಜರುಪಡಿಸಬೇಕು.
6) ಕನಿಷ್ಠ 1 ತಿಂಗಳ ಅವಧಿಯ ತರಬೇತಿಯನ್ನು ತರಬೇತಿ ಕೇಂದ್ರಗಳು ನೀಡಬೇಕು.
7) ಸರ್ಕಾರದ ಆದೇಶ ಸಂಖ್ಯೆ: ಸಾಆ/ಪ್ರವರ್ತನ-3/ಪಿಆರ್-105/2013-14, ದಿನಾಂಕ: 27.09.2013 ರ ಅನ್ವಯ
ಈ ಕೆಳಗಿನಂತೆ ಗರಿಷ್ಠ ತರಬೇತಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಅ. ಆಟೋರಿಕ್ಷಾ - ರೂ.3000/-
ಆ. ಲಘು ಮೋಟಾರು ವಾಹನ - ರೂ.4000/-
ಇ. ಸಾರಿಗೆ ವಾಹನ - ರೂ.6000/-
8) ಪ್ರಾದೇಶಿಕ ಸಾರಿಗೆ ಕಛೇರಿಗಳಿಂದ ಅಂಗೀಕೃತವಾದ ಲಘು/ಭಾರೀ ವಾಹನ ಚಾಲನಾ ತರಬೇತಿ ಕೇಂದ್ರಗಳ ಮೂಲಕ
ಮೇಲ್ಕಾಣಿಸಿದ ದರದ ಗರಿಷ್ಠ ಮಿತಿಗೆ ಒಳಪಟ್ಟು ಕರ್ನಾಟಕ ಪಾರದರ್ಶಕತೆ ಅಧಿನಿಯಮ 1999 ರನ್ವಯ ತರಬೇತಿ ಕಾರ್ಯ
ಕ್ರಮವನ್ನು ಅನುಷ್ಠಾನ ಮಾಡಲಾಗುವುದು.
9) ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ರೂ.1,000/- ತರಬೇತಿ ಭತ್ಯೆಯನ್ನು ತರಬೇತಿ ಮುಕ್ತಾಯಗೊಂಡ ಬಳಿಕ ನೀಡುವುದು.
ಅ) ತರಬೇತಿಗೆ ಅಭ್ಯರ್ಥಿಗಳ ಆಯ್ಕೆ ವಿಧಾನ:
1) ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಸದರಿ ತರಬೇತಿ ಕಾರ್ಯಕ್ರಮದ ಬಗ್ಗೆ ವ್ಯಾಪಕ ಪ್ರಚಾರವನ್ನು ನೀಡಿ,
ಅರ್ಹ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಬೇಕು.
2) ಆಯ್ಕೆ ಸಮಿತಿ -
1ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಅಧ್ಯಕ್ಷರು
2ಪ್ರಾದೇಶಿಕ ಸಾರಿಗೆ ಅಧಿಕಾರಿಸದಸ್ಯರು
3ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಸದಸ್ಯ ಕಾರ್ಯದರ್ಶಿ
3) ಅರ್ಹ ಅರ್ಜಿಗಳನ್ನು ಪರಿಶೀಲಿಸಿ, ಈ ಕೆಳಗಿನ ಮೀಸಲಾತಿ ಅನುಪಾತದ ಆಧಾರದಲ್ಲಿ ಪ್ರತಿ ಜಿಲ್ಲೆಗೆ ಗರಿಷ್ಠ
20 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ತರಬೇತಿಗೆ ನಿಯೋಜಿಸಬೇಕು.
ಕ್ರ. ಸಂ.ಪ್ರವರ್ಗಮೀಸಲಾತಿ ಅನುಪಾತ
1115%
22ಎ53%
33ಎ15%
43ಬಿ17%
ಒಟ್ಟು100%
4) ಅಭ್ಯರ್ಥಿಯು ತರಬೇತಿಯನ್ನು ಮಧ್ಯದಲ್ಲೇ ಬಿಟ್ಟು ಹೋದಲ್ಲಿ ನಿಯಮಾನುಸಾರ ತರಬೇತಿ ವೆಚ್ಚವನ್ನು ಅಭ್ಯರ್ಥಿಗಳಿಂದ
ವಸೂಲಿ ಮಾಡತಕ್ಕದ್ದು.
ಆ) ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ ಅರ್ಹತೆ:
1) ಕೋರ್ಸ್‍ಗೆ ಸಂಬಂಧಿಸಿದಂತೆ ನಿಗದಿತ ವಿದ್ಯಾರ್ಹತೆ ಹೊಂದಿರಬೇಕು.
2) 18-35 ವಯೋಮಿತಿಯಲ್ಲಿರಬೇಕು.
3) ಅಭ್ಯರ್ಥಿಗಳ ಮತ್ತು ಕುಟುಂಬದ ವಾರ್ಷಿಕ ಆದಾಯ ಮಿತಿ ಪ್ರವರ್ಗ 1 ರ ಅಭ್ಯರ್ಥಿಗಳಿಗೆ ರೂ.2.50 ಲಕ್ಷ ಹಾಗೂ
ಪ್ರವರ್ಗ 2ಎ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ ರೂ.1.00 ಲಕ್ಷಗಳು.
4) ಅವಧಿ: ಗರಿಷ್ಠ 6 ತಿಂಗಳ ತರಬೇತಿ.
5) ತರಬೇತಿ ಪಡೆಯಲು ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತರಬೇತಿ ಭತ್ಯೆ ನೀಡಲಾಗುವುದು.
ಡಿ. ದೇವರಾಜ ಅರಸು ಪ್ರತಿಭಾ ಪುರಸ್ಕಾರ
(ಲೆಕ್ಕಶೀರ್ಷಿಕೆ ರಾಜ್ಯವಲಯ ಯೋಜನೆ 2225-03-277-2-37)(2016-17ನೇ ಸಾಲಿನ ತರಬೇತಿ, ಅರಿವು ಮತ್ತು ಪ್ರೋತ್ಸಾಹ, ಹಿಂದುಳಿದ
ವರ್ಗಗಳ ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮದಡಿ ಒದಗಿಸಿರುವ ಆಯವ್ಯಯ ರೂ.3466.00 ಲಕ್ಷಗಳಲ್ಲಿ ಹಂಚಿಕೆ ಮಾಡಲಾಗುವುದು)
ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ, ಸ್ನಾತಕೋತ್ತರ ಪದವಿಗಳಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕಗಳಿಸಿದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ
ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹವನ್ನು ನೀಡುವ ದೃಷ್ಟಿಯಿಂದ 2015-16ನೇ ಸಾಲಿನಿಂದ “ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರ” ಯೋಜನೆಯನ್ನು
ಆರಂಭಿಸಲಾಗಿದೆ.
“ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರ” ದ ಮೊತ್ತವನ್ನು ಈ ಕೆಳಗಿನಂತೆ ನೀಡಲಾಗುತ್ತಿದೆ.
ಕ್ರ.ಸಂ.ತರಗತಿ/ಕೋರ್ಸ್ಪ್ರತಿಭಾ ಪುರಸ್ಕಾರದ ಮೊತ್ತ (ರೂ.ಗಳಲ್ಲಿ)
1ಎಸ್.ಎಸ್.ಎಲ್.ಸಿ.10000
2ದ್ವಿತೀಯ ಪಿ.ಯು.ಸಿ.15000
2ಪದವಿ/ಸ್ನಾತಕೋತ್ತರ ಪದವಿ (ಸಾಮಾನ್ಯ)20000
4ವೃತ್ತಿಪರ ಪದವಿ/ವೃತ್ತಿಪರ ಸ್ನಾತಕೋತ್ತರ ಪದವಿ
(ತಾಂತ್ರಿಕ, ವೈದ್ಯಕೀಯ ಹಾಗೂ ಸಂಬಂಧಿತ ವಿಜ್ಞಾನ)
25000
ಅರ್ಹತೆಗಳು:
1.ಭಾರತದ ಪ್ರಜೆಯಾಗಿದ್ದು, ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
2.ಕರ್ನಾಟಕ ಸರ್ಕಾರ ಅಧಿಸೂಚಿಸಿರುವ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿರಬೇಕು.
3.ಶಾಸನಬದ್ಧ ವಿಶ್ವವಿದ್ಯಾಲಯಗಳು/ಅಧೀನಕ್ಕೆ ಒಳಪಡುವ/ಸರ್ಕಾರಿ/ಸ್ಥಳೀಯ
ಸಂಸ್ಥೆಗಳು/ ಅನುದಾನಿತ ಸಂಸ್ಥೆಗಳು/ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿರಬೇಕು.
4.ಸಮಾನ ಕೋರ್ಸ್‍ಗಳಿಗೆ ಸಂಬಂಧಿಸಿದಂತೆ ಒಬ್ಬ ವಿದ್ಯಾರ್ಥಿಗೆ ಒಂದು ಬಾರಿ ಮಾತ್ರ ಈ ಸೌಲಭ್ಯವನ್ನು ಒದಗಿಸುವುದು.
5.ಕುಟುಂಬದ ಒಟ್ಟು ವಾರ್ಷಿಕ ಆದಾಯಮಿತಿ:
ಪ್ರವರ್ಗ-1 - ರೂ.2.50 ಲಕ್ಷ.
ಪ್ರವರ್ಗ-2(ಎ), 3(ಎ) ಮತ್ತು 3(ಬಿ) - ರೂ.1.00 ಲಕ್ಷ.
ಕ್ರ. ಸಂ.ಪ್ರವರ್ಗಹೊಸನವೀಕರಣ
1ಪ್ರವರ್ಗ-1 ಮತ್ತು ಅಂಧ ವಿದ್ಯಾರ್ಥಿಗಳು40%50%
2ಪ್ರವರ್ಗ-2ಎ, 3ಎ ಮತ್ತು 3ಬಿ50%60%
ಮೆರಿಟ್ ಹೊಂದಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ
"ಪೂರ್ಣ ಶುಲ್ಕಗಳ ಪಾವತಿಯೊಂದಿಗೆ, ಹಿಂದುಳಿದ ವರ್ಗಗಳ ಮೆಟ್ರಿಕ್-ನಂತರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ: (ಲೆಕ್ಕಶೀರ್ಷಿಕೆ ರಾಜ್ಯವಲಯ ಯೋಜನೆ
2225-03-277-2-51 ಮತ್ತು ಜಿಲ್ಲಾವಲಯ ಯೋಜನೇತರ 2225-00-103-0-28)
ವಿವಿಧ ಕೋರ್ಸುಗಳಲ್ಲಿ ಅತ್ಯಂತ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಮುಂದುವರೆಸಲು ಸರ್ಕಾರವು ಸರ್ಕಾರಿ ಸಂಸ್ಥೆಗಳಿಗೆ ನಿಗದಿಪಡಿಸಿರುವ
ದರಗಳಲ್ಲಿ 5 ಶುಲ್ಕಗಳ ಜೊತೆಗೆ ಪೂರ್ಣ ಶುಲ್ಕಗಳನ್ನು ಪಾವತಿಸಲಾಗುತ್ತದೆ. ನಿಗದಿಪಡಿಸಿರುವ ಕನಿಷ್ಠ ಶೇಕಡಾವಾರು ಅಂಕಗಳ ವಿವರ ಕೆಳಕಂಡಂತಿವೆ.
ಪ್ರವರ್ಗನಿಗದಿಪಡಿಸಿದ ಕನಿಷ್ಠ ಶೇಕಡಾ ಅಂಕಗಳು
ಪ್ರವರ್ಗ-1 ಮತ್ತು ಎಲ್ಲಾ ಪ್ರವರ್ಗಗಳ ಅಂಧ ವಿದ್ಯಾರ್ಥಿಗಳು65%
ಹಿಂದುಳಿದ ವರ್ಗಗಳ ಇತರೆ ಪ್ರವರ್ಗಗಳು ಮತ್ತು ಇತರೆಯವರು70%
ಅನುದಾನ ಹಂಚಿಕೆ:
ಈ ಎರಡೂ ಕಾರ್ಯಕ್ರಮಗಳಿಗೆ ಒಂದೇ ಲೆಕ್ಕಶೀರ್ಷಿಕೆಯಡಿಯಲ್ಲಿ ಒಟ್ಟಿಗೆ ಅನುದಾನವನ್ನು ನೀಡುವುದರಿಂದ, ಈ ಎರಡೂ ಕಾರ್ಯಕ್ರಮಗಳಿಗೆ ಅನುದಾನ
ಹಂಚಿಕೆಯನ್ನು ಈ ಕೆಳಗಿನಂತೆ ಮಾಡಿಕೊಳ್ಳುವುದು.
ಅ)"ಶುಲ್ಕ ವಿನಾಯಿತಿ" ಕಾರ್ಯಕ್ರಮಕ್ಕೆ ಶೇ.60ರಷ್ಟು ಆಯವ್ಯಯವನ್ನು "ಪೂರ್ಣ ಶುಲ್ಕಗಳ ಪಾವತಿಯೊಂದಿಗೆ ಹಿಂದುಳಿದ ವರ್ಗಗಳ ಮೆಟ್ರಿಕ್-ನಂತರದ
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ" ಕಾರ್ಯಕ್ರಮಕ್ಕೆ ಶೇ.40ರಷ್ಟು ಆಯವ್ಯಯವನ್ನು ಹಂಚಿಕೆ ಮಾಡಿಕೊಳ್ಳುವುದು.
ಆ)ಮೇಲೆ ನಿಗದಿಪಡಿಸಿದ ಶೇಕಡಾ ಅಂಕಗಳ ಮಿತಿಯೊಳಗೆ ಬರುವ ಪ್ರವರ್ಗ-1ರ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಮತ್ತು ಎಲ್ಲಾ ಪ್ರವರ್ಗಗಳ ಅಂಧ ವಿದ್ಯಾರ್ಥಿಗಳಿಗೆ,
ನಿಗದಿತ ಪೂರ್ಣ ಶುಲ್ಕಗಳನ್ನು ಮೊದಲನೇ ಆದ್ಯತೆಯಲ್ಲಿ ಮಂಜೂರು ಮಾಡುವುದು.
ಇ)ನಂತರ ಶೇ.60 ರಷ್ಟು ಆಯವ್ಯಯ ಮತ್ತು ಶೇ.40ರಷ್ಟು ಆಯವ್ಯಯಗಳಿಗೆ ಪ್ರತ್ಯೇಕವಾಗಿ ಈ ಕೆಳಗಿನಂತೆ ಪ್ರವರ್ಗವಾರು, ಶೇಕಡಾವಾರು
ಹಂಚಿಕೆ ಮಾಡಲಾಗುವುದು.
1ಪ್ರವರ್ಗ - 2ಎಶೇಕಡ 58
2ಪ್ರವರ್ಗ - 3ಎಶೇಕಡ 16
33 ಪ್ರವರ್ಗ - 3ಬಿಶೇಕಡ 20
4ಇತರೆ ಸಮುದಾಯಗಳುಶೇಕಡ 05
5ಇತರೆ ಹಿಂದುಳಿದ ವರ್ಗಶೇಕಡ 01
ಒಟ್ಟುಶೇಕಡ 100
ಮಂಜೂರಾತಿ ಪ್ರಾಧಿಕಾರ:
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಅನುದಾನದಿಂದ ಪಾವತಿಸುವ ಗುಂಪು-ಎ, ಗುಂಪು-ಬಿ, ಗುಂಪು-ಸಿ, ಮತ್ತು ಗುಂಪು-ಡಿ
ಕೋರ್ಸುಗಳಿಗೆ ಸಂಬಂಧಿಸಿದಂತೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯು, ಆಯಾ ಜಿಲ್ಲೆಯಲ್ಲಿ, ನಿಗದಿತ ಶುಲ್ಕ ವಿನಾಯಿತಿ
ಮಂಜೂರು ಮಾಡುವ ಪ್ರಾಧಿಕಾರ ಆಗಿರುತ್ತಾರೆ.
ಮಂಜೂರಾತಿ ವಿಧಾನ:
1.ಆನ್‍ಲೈನ್ ಮೂಲಕ ಇ-ಪಾಸ್ ತಂತ್ರಾಂಶದಲ್ಲಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗುವುದು.ಮಂಜೂರು ಮಾಡುವ
ಪ್ರಾಧಿಕಾರ ಆಗಿರುತ್ತಾರೆ.
2.ವಿದ್ಯಾರ್ಥಿಗಳು ನಿಗದಿತ ದಾಖಲೆಗಳು ಹಾಗೂ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಐ.ಎಫ್.ಸಿ.ಕೋಡ್, ಜಾತಿ ಮತ್ತು ಆದಾಯ ಪ್ರಮಾಣ
ಪತ್ರ, ಹಿಂದಿನ ತರಗತಿಯ ಅಂಕಪಟ್ಟಿ ಇತ್ಯಾದಿ ಮಾಹಿತಿಯೊಂದಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹಾಗೂ ಹಾರ್ಡ್ ಕಾಫಿಯನ್ನು
ಸಂಬಂಧಪಟ್ಟ ಕಾಲೇಜುಗಳಿಗೆ ಸಲ್ಲಿಸುವುದು.
3.ಕಾಲೇಜು ಪ್ರಾಂಶುಪಾಲರು ಮತ್ತು ಪರಿಶೀಲನಾ ಅಧಿಕಾರಿಗಳು ಆಯಾ ಹಂತದಲ್ಲಿ ಅರ್ಜಿ ಹಾಗೂ ದಾಖಲೆಗಳನ್ನು ಪರಿಶೀಲಿಸಿ, ಆನ್‍ಲೈನ್‍ನಲ್ಲಿ
ದೃಢೀಕರಿಸಿ ಸದರಿ ದಾಖಲೆಗಳನ್ನು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಸಲ್ಲಿಸಬೇಕು.
4.ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಪರಿಶೀಲಿಸಿ, ಆನ್‍ಲೈನ್‍ನಲ್ಲಿ ದೃಢೀಕರಿಸುವುದು.
5.ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಸದರಿ ಮಾಹಿತಿಯ ಪರಿಶೀಲನೆಯನ್ನು ಮಾಡುವುದು.
6.ಅರ್ಹ ವಿದ್ಯಾರ್ಥಿಗಳಿಗೆ ಆಯಾ ವರ್ಷ ಲಭ್ಯವಾಗುವ ಅನುದಾನಕ್ಕೆ ಅನುಗುಣವಾಗಿ ಅರ್ಹತೆ ಮತ್ತು
ಅಂಕಗಳ ಆಧಾರದ ಮೇಲೆ ಜಿಲ್ಲಾ ಹಂತದಲ್ಲಿ ಶುಲ್ಕ ವಿನಾಯಿತಿ ಮಂಜೂರು ಮಾಡುವುದು.
7.ಮಂಜೂರಾದ ಮೊತ್ತವನ್ನು ಸಂಬಂಧಿತ ಕಾಲೇಜುಗಳ ಬ್ಯಾಂಕ್ ಖಾತೆಗೆ ನೇರವಾಗಿ ಖಜಾನೆ-2 ತಂತ್ರಾಂಶದ ಮೂಲಕ ಪಾವತಿಸುವುದು.
ಶುಲ್ಕ ವಿನಾಯಿತಿ
(ಲೆಕ್ಕಶೀರ್ಷಿಕೆ ರಾಜ್ಯವಲಯ ಯೋಜನೆ 2225-03-277-2-51 ಮತ್ತು ಜಿಲ್ಲಾವಲಯ ಯೋಜನೇತರ 2225-00-103-0-28)
(2019-20ನೇ ಸಾಲಿನ ಆಯವ್ಯಯ ರೂ.47500.00 ಲಕ್ಷಗಳು)
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ನೆರವಾಗುವ ದೃಷ್ಟಿಯಿಂದ ಸರ್ಕಾರವು, ಸರ್ಕಾರದ ಕಾಲೇಜುಗಳಿಗೆ ನಿಗದಿಪಡಿಸುವ
ಶುಲ್ಕದ ದರಗಳನ್ನು ಸಂಬಂಧಪಟ್ಟ ವಿದ್ಯಾರ್ಥಿಯ ಕಾಲೇಜಿನ ಪ್ರಾಂಶುಪಾಲರ ಖಾತೆಗೆ ಜಮಾಗೊಳಿಸಲಾಗುವುದು.
ವಿಶೇಷ ಸೂಚನೆ: ವಿದ್ಯಾರ್ಥಿಗಳು ಖಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆ ಗೆ ಆಧಾರ್ ಸಂಖ್ಯೆಯನ್ನು ಜೋಡಣೆ (link) ಮಾಡಿಸತಕ್ಕದ್ದು.

ಅರ್ಹತೆಗಳು:
1.ಭಾರತದ ಪ್ರಜೆಯಾಗಿದ್ದು, ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು ಹಾಗೂ ಭಾರತ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಧಿಸೂಚಿಸಿರುವ ಹಿಂದುಳಿದ
ವರ್ಗಗಳ ಪಟ್ಟಿಯಲ್ಲಿ ಸೇರಿರಬೇಕು.
2.ಕರ್ನಾಟಕದ ಶಾಸನಬದ್ಧ ವಿಶ್ವ ವಿದ್ಯಾಲಯಗಳ ಅಧೀನಕ್ಕೆ ಒಳಪಡುವ ಸರ್ಕಾರಿ / ಸ್ಥಳೀಯ ಸಂಸ್ಥೆ/ ಅನುದಾನಿತ ಸಂಸ್ಥೆ / ಮಾನ್ಯತೆ ಪಡೆದ ಅನುದಾನರಹಿತ
ಖಾಸಗಿ ಸಂಸ್ಥೆಗಳಲ್ಲಿ – ಮೆಟ್ರಿಕ್-ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಾಗಿರಬೇಕು.
3.ಈ ಸೌಲಭ್ಯವನ್ನು ಪಡೆಯಲು ವಿದ್ಯಾರ್ಥಿಯ ತಂದೆ-ತಾಯಿ/ಪೋಷಕರ ಕುಟುಂಬದ ವಾರ್ಷಿಕ ವರಮಾನ ಈ ಕೆಳಗೆ ನಿಗದಿಪಡಿಸಿದ ಗರಿಷ್ಠ ಮಿತಿಯೊಳಗೆ ಇರಬೇಕು.
1.ಪ್ರವರ್ಗ-1ರ ವಿದ್ಯಾರ್ಥಿಗಳಿಗೆ ರೂ.2.50 ಲಕ್ಷ ಹಾಗೂ
2.ಭಾರತ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಧಿಸೂಚಿಸಿರುವ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿದ ಮತ್ತು ಎಲ್ಲಾ ಧರ್ಮಗಳ,
ಜಾತಿಗಳ ಹಾಗೂ ಸಮುದಾಯಗಳ ವಿದ್ಯಾರ್ಥಿಗಳಿಗೆ ರೂ.1.00 ಲಕ್ಷ
3.ಸಮಾಜ ಕಲ್ಯಾಣ/ ಪರಿಶಿಷ್ಟ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವ್ಯಾಪ್ತಿಗೆ ಬರುವ ವಿದ್ಯಾರ್ಥಿಗಳು ಹಿಂದುಳಿದ
ವರ್ಗಗಳ ಕಲ್ಯಾಣ ಇಲಾಖೆಯಿಂದ ಈ ಸೌಲಭ್ಯಗಳನ್ನು ಪಡೆಯಲು ಅರ್ಹರಿರುವುದಿಲ್ಲ.
4.ಹೊಸ ಮತ್ತು ನವೀಕರಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕಾಗಿ ಈ ಹಿಂದಿನ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಈ ಕೆಳಗಿನಂತೆ ಕನಿಷ್ಠ
ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.
ಕ್ರ. ಸಂ.ಪ್ರವರ್ಗಹೊಸನವೀಕರಣ
1ಪ್ರವರ್ಗ-1 ಮತ್ತು ಅಂಧ ವಿದ್ಯಾರ್ಥಿಗಳು40%50%
2ಪ್ರವರ್ಗ-2ಎ, 3ಎ ಮತ್ತು 3ಬಿ50%60%
5.ಅ) ಸಮಾನ ಕೋರ್ಸುಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ವ್ಯಾಸಂಗ ಮಾಡುತ್ತಿದ್ದಲ್ಲಿ, ಅಂತಹವರು ಅರ್ಹರಿರುವುದಿಲ್ಲ.
ಆ) ಸ್ನಾತಕೋತ್ತರ, ವೈದ್ಯಕೀಯ ಕೋರ್ಸುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಕೋರ್ಸಿನ ಅವಧಿಯಲ್ಲಿ
ಮೆಡಿಕಲ್ ಪ್ರಾಕ್ಟೀಸ್ ಮಾಡುತ್ತಿದ್ದಲ್ಲಿ, ಈ ಸೌಲಭ್ಯಕ್ಕೆ ಅರ್ಹರಿರುವುದಿಲ್ಲ.
ಇ) ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಕೋರ್ಸುಗಳ, ಪದವಿ ಅಥವಾ ಸ್ನಾತಕೋತ್ತರ ಪದವಿಗಳಲ್ಲಿ ಉತ್ತೀರ್ಣ /
ಅನುತ್ತೀರ್ಣರಾದವರು ಅಂಗೀಕೃತ ವೃತ್ತಿಪರ ಅಥವಾ ತಾಂತ್ರಿಕ ಸರ್ಟಿಫಿಕೇಟ್, ಡಿಪ್ಲೋಮಾ, ಪದವಿ ಕೋರ್ಸುಗಳಲ್ಲಿ
ವ್ಯಾಸಂಗ ಮಾಡಿದ್ದಲ್ಲಿ ಹಾಗೂ ಇತರೆ ರೀತಿ ಅರ್ಹರಿದ್ದಲ್ಲಿ ಅವರು ಈ ಯೋಜನೆಯ ಅಡಿ ಸೌಲಭ್ಯಗಳಿಗೆ ಅರ್ಹರಿರುತ್ತಾರೆ.
ಒಂದಕ್ಕಿಂತ ಹೆಚ್ಚು ಬಾರಿ ಕೋರ್ಸುಗಳ ಬದಲಾವಣೆ ಮಾಡಿಕೊಂಡವರು ಅರ್ಹರಿರುವುದಿಲ್ಲ.
ಈ) ಒಂದೇ ಕುಟುಂಬದ ಇಬ್ಬರು ಗಂಡು ಮಕ್ಕಳು ಮಾತ್ರ ಈ ಯೋಜನೆಗೆ ಅರ್ಹರು. ಆದರೆ, ಈ ನಿರ್ಬಂಧ ಹೆಣ್ಣು
ಮಕ್ಕಳಿಗೆ ಅನ್ವಯಿಸುವುದಿಲ್ಲ.
6.ಅ) ಶುಲ್ಕ ವಿನಾಯಿತಿಗೆ ಅರ್ಹ ಇರುವ ಶುಲ್ಕಗಳು:ರಾಜ್ಯಮಟ್ಟದ ಸಮಿತಿಯು ನಿಗದಿಪಡಿಸುವ ದರಗಳಂತೆ ಈ ಕೆಳಗಿನ ಐದು ಶುಲ್ಕಗಳಿಗೆ
ಮಾತ್ರ ವಿನಾಯಿತಿ ನೀಡಲಾಗುವುದು.
ಅ) ಬೋಧನಾ ಶುಲ್ಕ
ಆ) ಪ್ರಯೋಗಾಲಯ ಶುಲ್ಕ (ಯಾವ ಕೋರ್ಸುಗಳಲ್ಲಿ ಪ್ರಯೋಗಾಲಯ ಕಡ್ಡಾಯವಿದೆಯೋ ಆ ಕೋರ್ಸುಗಳಿಗೆ ಮಾತ್ರ)
ಇ) ಪರೀಕ್ಷಾ ಶುಲ್ಕ
ಈ) ಕ್ರೀಡಾ ಶುಲ್ಕ
ಉ) ಗ್ರಂಥಾಲಯ ಶುಲ್ಕ
ಆ) Readers Charges ದರಗಳು:
ಮೆಟ್ರಿಕ್-ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂಧ ವಿದ್ಯಾರ್ಥಿಗಳಿಗೆ ಮೇಲಿನ ದರಗಳಂತೆ ಶುಲ್ಕ ವಿನಾಯಿತಿ ನೀಡುವುದರ
ಜೊತೆಗೆ ಈ ಕೆಳಗಿನಂತೆ ಖeಚಿಜeಡಿs ಅhಚಿಡಿges ಅನ್ನು ಸಹ ಪಾವತಿಸಲಾಗುವುದು.
ಕೋರ್ಸಿನ ಗುಂಪುReaders Charges
(10 ತಿಂಗಳಿಗೆ) (ರೂ.ಗಳಲ್ಲಿ)
ಗುಂಪು-ಎ, ಬಿ1750/-
ಗುಂಪು-ಸಿ1300/-
ಗುಂಪು-ಡಿ900/-
ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ
(ಲೆಕ್ಕಶೀರ್ಷಿಕೆ ರಾಜ್ಯವಲಯ ಯೋಜನೆ 2225-03-277-2-51(2019-20ನೇ ಸಾಲಿನ ಆಯವ್ಯಯ ರೂ.7000.00 ಲಕ್ಷಗಳು)
ಮೆಟ್ರಿಕ್-ನಂತರದ ವಿದ್ಯಾರ್ಥಿವೇತನದ ದರಗಳು
(ಸರ್ಕಾರದ ಆದೇಶ ಸಂ.ಬಿಸಿಡಬ್ಲ್ಯೂ 518 ಬಿಎಂಎಸ್ 2013, ದಿನಾಂಕ 3.9.2013ರಂತೆ)
ಕ್ರ. ಸಂ.ಗುಂಪುಮಂಜೂರು ಮಾಡಲಾಗುವ ವಿದ್ಯಾರ್ಥಿವೇತನದ
ದರ (ವಾರ್ಷಿಕ)
1ಗುಂಪು-ಎ3500/-
2ಗುಂಪು-ಬಿ3350/-
3ಗುಂಪು-ಸಿ2100/-
4ಗುಂಪು-ಡಿ1600/-
ವಿಶೇಷ ಸೂಚನೆ: ವಿದ್ಯಾರ್ಥಿಗಳು ಖಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆ ಗೆ ಆಧಾರ್ ಸಂಖ್ಯೆಯನ್ನು ಜೋಡಣೆ (link) ಮಾಡಿಸತಕ್ಕದ್ದು.

ಅರ್ಹತೆಗಳು:
1.ಭಾರತದ ಪ್ರಜೆಯಾಗಿದ್ದು, ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು ಹಾಗೂ ಭಾರತ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಧಿಸೂಚಿಸಿರುವ ಹಿಂದುಳಿದ
ವರ್ಗಗಳ ಪಟ್ಟಿಯಲ್ಲಿ ಸೇರಿರಬೇಕು.
2.ಕರ್ನಾಟಕದ ಶಾಸನಬದ್ಧ ವಿಶ್ವ ವಿದ್ಯಾಲಯಗಳ ಅಧೀನಕ್ಕೆ ಒಳಪಡುವ ಸರ್ಕಾರಿ / ಸ್ಥಳೀಯ ಸಂಸ್ಥೆ/ ಅನುದಾನಿತ ಸಂಸ್ಥೆ ಮಾನ್ಯತೆ ಪಡೆದ ಅನುದಾನ
ರಹಿತ ಖಾಸಗಿ ಸಂಸ್ಥೆಗಳಲ್ಲಿ ಮೆಟ್ರಿಕ್-ನಂತರದ ಶಿಕ್ಷಣವನ್ನು ಪಡೆಯುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಮೆಟ್ರಿಕ್-ನಂತರದ ವಿದ್ಯಾರ್ಥಿವೇತನ
ಪಡೆಯಲು ಅರ್ಹರಿರುತ್ತಾರೆ.
3.ಸರ್ಕಾರದ ವಿದ್ಯಾರ್ಥಿನಿಲಯಗಳಲ್ಲಿ / ವಸತಿ ಕಾಲೇಜುಗಳಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಮೆಟ್ರಿಕ್-ನಂತರದ ವಿದ್ಯಾರ್ಥಿ ವೇತನವನ್ನು
ಪಡೆಯಲು ಅರ್ಹರಿರುವುದಿಲ್ಲ.
4.ವಾರ್ಷಿಕ ಆದಾಯಮಿತಿ ಪ್ರವರ್ಗ-1ರ ವಿದ್ಯಾರ್ಥಿಗಳಿಗೆ ರೂ.2.50 ಲಕ್ಷ, ಪ್ರವರ್ಗ-2ಎ, 3ಎ, ಮತ್ತು 3ಬಿ ವಿದ್ಯಾರ್ಥಿಗಳಿಗೆ- ರೂ.1.00 ಲಕ್ಷ ನಿಗದಿಪಡಿಸಿದೆ.
5.ಹೊಸ ಮತ್ತು ನವೀಕರಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕಾಗಿ ಹಿಂದಿನ ತರಗತಿಗಳಲ್ಲಿ ನಿಗದಿಪಡಿಸಿರುವ ಕನಿಷ್ಠ ಅಂಕ
ಕ್ರ. ಸಂ.ಪ್ರವರ್ಗಹೊಸನವೀಕರಣ
1ಪ್ರವರ್ಗ-140%50%
2ಪ್ರವರ್ಗ-2ಎ, 3ಎ ಮತ್ತು 3ಬಿ50%60%
6.ಸಮಾನ ಕೋರ್ಸುಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ವ್ಯಾಸಂಗ ಮಾಡುತ್ತಿದ್ದಲ್ಲಿ, ವಿದ್ಯಾರ್ಥಿವೇತನಕ್ಕೆ ಅರ್ಹರಿರುವುದಿಲ್ಲ.
7.ಒಂದೇ ಕುಟುಂಬದ ಇಬ್ಬರು ಗಂಡು ಮಕ್ಕಳು ಮಾತ್ರ ಈ ಯೋಜನೆಗೆ ಅರ್ಹರು. ಈ ನಿರ್ಬಂಧ ಹೆಣ್ಣು ಮಕ್ಕಳಿಗೆ ಅನ್ವಯಿಸುವುದಿಲ್ಲ.
8. ವಿವಿಧ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮೆಟ್ರಿಕ್-ನಂತರದ ವಿದ್ಯಾರ್ಥಿಗಳಿಗೆ ಕೋರ್ಸಿನ ಗುಂಪುವಾರು ಪ್ರತಿ ತಿಂಗಳಿಗೆ ಮೆಟ್ರಿಕ್-ನಂತರದ ವಿದ್ಯಾರ್ಥಿವೇತನವನ್ನು
10 ತಿಂಗಳ ಅವಧಿಗೆ ಅರ್ಹತೆ ಮತ್ತು ಆದಾಯಮಿತಿಯನ್ನು ಪರಿಗಣಿಸಿ, ಮಂಜೂರು ಮಾಡಲಾಗುವುದು.
ಮಂಜೂರಾತಿ ವಿಧಾನ:
1.ಆನ್‍ಲೈನ್ ಮೂಲಕ ಇ-ಪಾಸ್ ತಂತ್ರಾಂಶದಲ್ಲಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗುವುದು.
2.ವಿದ್ಯಾರ್ಥಿಗಳು ನಿಗದಿತ ದಾಖಲೆಗಳು ಹಾಗೂ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಐ.ಎಫ್.ಸಿ.ಕೋಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಹಿಂದಿನ ತರಗತಿಯ
ಅಂಕಪಟ್ಟಿ ಇತ್ಯಾದಿ ಮಾಹಿತಿಯೊಂದಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹಾಗೂ ಹಾರ್ಡ್ ಕಾಫಿಯನ್ನು ಸಂಬಂಧಪಟ್ಟ ಕಾಲೇಜುಗಳಿಗೆ ಸಲ್ಲಿಸುವುದು.
3.ಕಾಲೇಜು ಪ್ರಾಂಶುಪಾಲರು ಮತ್ತು ಪರಿಶೀಲನಾ ಅಧಿಕಾರಿಗಳು ಆಯಾ ಹಂತದಲ್ಲಿ ಅರ್ಜಿ ಹಾಗೂ ದಾಖಲೆಗಳನ್ನು ಪರಿಶೀಲಿಸಿ, ಆನ್‍ಲೈನ್‍ನಲ್ಲಿ ದೃಢೀಕರಿಸಿ ಸದರಿ
ದಾಖಲೆಗಳನ್ನು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಸಲ್ಲಿಸಬೇಕು.
4.ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಪರಿಶೀಲಿಸಿ, ಆನ್‍ಲೈನ್‍ನಲ್ಲಿ ದೃಢೀಕರಿಸುವುದು.
5.ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಸದರಿ ಮಾಹಿತಿಯ ಪರಿಶೀಲನೆಯನ್ನು ಮಾಡುವುದು.
6.ಆಯಾ ವರ್ಷದಲ್ಲಿ ಲಭ್ಯವಾಗುವ ಜಿಲ್ಲಾವಾರು ಅನುದಾನಕ್ಕೆ ತಕ್ಕಂತೆ ಅರ್ಹತೆ ಮತ್ತು ಅಂಕಗಳ ಆಧಾರದ ಮೇಲೆ ಅರ್ಹ ವಿದ್ಯಾರ್ಥಿಗಳಿಗೆ ತಾಲ್ಲೂಕು ಹಂತದಲ್ಲಿ
ವಿದ್ಯಾರ್ಥಿವೇತನವನ್ನು ಮಂಜೂರು
7.ಆಯ್ಕೆಯಾದ ಅರ್ಹ ಅರ್ಜಿಗಳಿಗೆ ಆಯಾ ವರ್ಷದ ಆಯವ್ಯಯಕ್ಕೆ ಅನುಗುಣವಾಗಿ, ಮೀಸಲಾತಿ ನೀತಿಯನ್ವಯ ವಿದ್ಯಾರ್ಥಿವೇತನವನ್ನು ಮಂಜೂರು ಮಾಡಿ
ಖಜಾನೆ-2 ತಂತ್ರಾಂಶದ ಮೂಲಕ ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾಮಾಡುವುದು.
ಮೆಟ್ರಿಕ್-ಪೂರ್ವ ವಿದ್ಯಾರ್ಥಿವೇತನ
(ಲೆಕ್ಕಶೀರ್ಷಿಕೆ ರಾಜ್ಯವಲಯ ಯೋಜನೆ 2225-03-277-2-52 ಮತ್ತು ಜಿಲ್ಲಾವಲಯ ಯೋಜನೆ ಮತ್ತು ಯೋಜನೇತರ 2225-00-103-0-66) (2019-20ನೇ ಸಾಲಿನ ಆಯವ್ಯಯ ರೂ.9000.00 ಲಕ್ಷಗಳು)
ಮೆಟ್ರಿಕ್-ಪೂರ್ವ ವಿದ್ಯಾರ್ಥಿವೇತನದ ದರಗಳು
(ಸರ್ಕಾರದ ಆದೇಶ ಸಂ.ಬಿಸಿಡಬ್ಲ್ಯೂ 620 ಬಿಎಂಎಸ್ 2014, ದಿನಾಂಕ 7.1.2015ರಂತೆ)
ತರಗತಿಬಾಲಕ/ಬಾಲಕಿAdhoc Grantಒಟ್ಟು
1 ರಿಂದ 5250/-500/-750/-
6 ರಿಂದ 8400/-500/-900/-
9 ರಿಂದ 10500/-500/-1000/-
ವಿಶೇಷ ಸೂಚನೆ: ವಿದ್ಯಾರ್ಥಿಗಳು ಖಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆ ಗೆ ಆಧಾರ್ ಸಂಖ್ಯೆಯನ್ನು ಜೋಡಣೆ (link) ಮಾಡಿಸತಕ್ಕದ್ದು.

ಅರ್ಹತೆಗಳು:
1.ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು.
2.ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ.44,500/-ರ ಒಳಗೆ ಇರಬೇಕು.
3.ಸರ್ಕಾರದ / ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ /ಅನುದಾನರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುವ
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಅರ್ಹರು.
4.ಸರ್ಕಾರದ / ಸರ್ಕಾರದ ಅನುದಾನಿತ ವಿದ್ಯಾರ್ಥಿನಿಲಯಗಳಲ್ಲಿ/ವಸತಿಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ
ಗಳು ವಿದ್ಯಾರ್ಥಿವೇತನ ಪಡೆಯಲು ಅರ್ಹರಿರುವುದಿಲ್ಲ.
5.ಹಿಂದಿನ ತರಗತಿಯಲ್ಲಿ ಶೇ.75 ಕ್ಕಿಂತ ಹೆಚ್ಚು ಹಾಜರಾತಿ ಹೊಂದಿದವರು ಮಾತ್ರ ಅರ್ಹರು.
6.ಹಿಂದಿನ ತರಗತಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು, ವಿದ್ಯಾರ್ಥಿವೇತನ ಪಡೆಯಲು ಅರ್ಹರಿರುವುದಿಲ್ಲ.
ಆಯ್ಕೆ ವಿಧಾನ:
1.ಮೊದಲನೇ ಆದ್ಯತೆ: ಎಲ್ಲಾ ಅರ್ಹ ನವೀಕರಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮಂಜೂರು ಮಾಡುವುದು.
2.ಎರಡನೇ ಆದ್ಯತೆ: ಹಿಂದುಳಿದ ವರ್ಗಗಳ ಪ್ರವರ್ಗ-1ರ ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಮಂಜೂರು ಮಾಡುವುದು.
3.ಮೂರನೇ ಆದ್ಯತೆ: ಉಳಿದ ಮೊತ್ತವನ್ನು ಅರ್ಹವಿರುವ ಪ್ರವರ್ಗ-2ಎ, 3ಎ, 3ಬಿ ಮತ್ತು ಇತರೆ ಹಿಂದುಳಿದ ವರ್ಗಗಳ(ಕೇಂದ್ರ
ಸರ್ಕಾರದ ಹಿಂದುಳಿದ ವರ್ಗದ ಪಟ್ಟಿಯಲ್ಲಿ ಇರುವ ಜಾತಿಗಳು ಮಾತ್ರ) ವಿದ್ಯಾರ್ಥಿಗಳಿಗೆ ಆದಾಯ ಮತ್ತು ಅರ್ಹತೆಯ ಆಧಾರದ
ಮೇಲೆ ಈ ಕೆಳಕಂಡ ಪ್ರಮಾಣದಂತೆ ಮಂಜೂರು ಮಾಡಲಾಗುವುದು.
1ಪ್ರವರ್ಗ - 2ಎಶೇಕಡ 61
2ಪ್ರವರ್ಗ – 3ಎಶೇಕಡ 17
3ಪ್ರವರ್ಗ – 3ಬಿಶೇಕಡ 21
4ಇತರೆ ಹಿಂದುಳಿದ ವರ್ಗಶೇಕಡ 01
ಒಟ್ಟುಶೇಕಡ 100
ಮಂಜೂರಾತಿ ವಿಧಾನ:
1.ಮೆಟ್ರಿಕ್-ಪೂರ್ವ ವಿದ್ಯಾರ್ಥಿವೇತನ ಸೌಲಭ್ಯವನ್ನು ಪಡೆಯಲು ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಿ ಸಾರ್ವಜನಿಕ ಪ್ರಕಟಣೆ ಹೊರಡಿಸುವುದು.
2.ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಗಳನ್ನು ಆನ್ ಲೈನ್ ಮೂಲಕ ಪರಿಶೀಲಿಸಿ, ಅರ್ಹ ಅರ್ಜಿಗಳನ್ನು ದೃಢೀಕರಿಸುವುದು.
3.ಇಲಾಖೆಯ ಮೆಟ್ರಿಕ್-ಪೂರ್ವ ವಿದ್ಯಾರ್ಥಿವೇತನ ಇ-ಪಾಸ್ ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಮಾಹಿತಿಯನ್ನು ಭರ್ತಿ ಮಾಡುವುದು.
4.ಭರ್ತಿ ಮಾಡಿರುವ ಮಾಹಿತಿಯನ್ನು ಪರಿಶೀಲಿಸಿ, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ದೃಢೀಕರಿಸುವುದು.
5.ಆಯ್ಕೆಯಾದ ಅರ್ಹ ಅರ್ಜಿಗಳಿಗೆ ಆಯಾ ವರ್ಷದ ಆಯವ್ಯಯಕ್ಕೆ ಅನುಗುಣವಾಗಿ, ಮೀಸಲಾತಿ ನೀತಿಯನ್ವಯ ವಿದ್ಯಾರ್ಥಿವೇತನವನ್ನು
ಮಂಜೂರು ಮಾಡಿ ಆಧಾರ್ ಪಾವತಿ ವ್ಯವಸ್ಥೆ (Aadhar Bridge Payment System) ಮೂಲಕ ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾಮಾಡುವುದು.
ಮಂಜೂರಾತಿ ಪ್ರಕ್ರಿಯೆಯ ವೇಳಾಪಟ್ಟಿ
1ಅವಶ್ಯಕ ದಾಖಲಾತಿಗಳನ್ನು ವಿದ್ಯಾರ್ಥಿಗಳು ಸಂಬಂಧಪಟ್ಟ ಶಾಲೆಗಳಿಗೆ ಸಲ್ಲಿಸುವಂತೆ ಸಾರ್ವಜನಿಕ ಪ್ರಕಟಣೆ ಹೊರಡಿಸುವುದುಜೂನ್ 15
2ಶಾಲೆಗಳ ಮುಖ್ಯೋಪಾಧ್ಯಾಯರುಗಳಿಗೆ ಸೂಕ್ತ ಸೂಚನೆಗಳನ್ನು ಸಂಬಂಧಪಟ್ಟ ಶಿಕ್ಷಣಾಧಿಕಾರಿಗಳ ಮೂಲಕ ನೀಡುವುದುಜೂನ್ 15
3ನಿಗದಿತ ನಮೂನೆಗಳನ್ನು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಸ್ತಾಂತರಿಸುವುದುಜೂನ್ 20
4ಸಂಬಂಧಪಟ್ಟ ಶಾಲೆಗಳಿಂದ ಭರ್ತಿ ಮಾಡಿದ ನಮೂನೆಗಳನ್ನು ಮತ್ತು ದಾಖಲತಿಗಳನ್ನು ಕ್ಷೇತ್ರ ಶಿಕ್ಷಣಾದಿಕಾರಿಗಳ ಮೂಲಕ
ವಾಪಸ್ಸು ಪಡೆಯುವುದು
ಜುಲೈ 10
5ಇಲಾಖೆಯ ಸಾಫ್ಟ್‍ವೇರ್‍ನಲ್ಲಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಯ ಸಂಖ್ಯೆ ಐ.ಎಫ್.ಎಸ್.ಸಿ. ಕೋಡ್, ಆಧಾರ್ ಕಾರ್ಡ್
ಸಂಖ್ಯೆ ಹಾಗೂ ಜಾತಿ ಮತ್ತು ಆದಾಯದ ವಿವರಗಳನ್ನು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ
ಯಲ್ಲಿ ಎಂಟ್ರಿ ಮಾಡುವುದು.
ಆಗಸ್ಟ್-10
6ಆನ್‍ಲೈನ್ ಮಂಜೂರಾತಿ ನೀಡುವುದುಅನುದಾನ ಲಭ್ಯತೆ ಹಾಗೂ ಬಿಡುಗಡೆ
ಆಧಾರದಲ್ಲಿ ಕ್ರಮ ಕೈಗೊಳ್ಳುವುದು.
7ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವಿದ್ಯಾರ್ಥಿವೇತನ ಮೊತ್ತವನ್ನು ಜಮಾ ಮಾಡುವುದು
ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳು
(ಲೆಕ್ಕಶೀರ್ಷಿಕೆ ರಾಜ್ಯವಲಯ ಯೋಜನೆ 2225-03-277-2-53 ಮತ್ತು ಜಿಲ್ಲಾವಲಯ ಯೋಜನೆ ಹಾಗೂ ಯೋಜನೇತರ 2225-00-103-0-26)
(2016-17ನೇ ಸಾಲಿನ ಒಟ್ಟು ಆಯವ್ಯಯ ರಾಜ್ಯವಲಯ ರೂ.63871.96 ಲಕ್ಷಗಳು)

ಸರ್ಕಾರಿ / ಸರ್ಕಾರಿ ಅಂಗೀಕೃತ ಶಿಕ್ಷಣ ಸಂಸ್ಥೆಗಳಲ್ಲಿ ಮೆಟ್ರಿಕ್ ನಂತರದ ಕೋರ್ಸುಗಳಾದ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ,ಬಿ.ಇ,
ಎಂಬಿಬಿಎಸ್, ಡಿಪ್ಲೋಮ, ವೃತ್ತಿಶಿಕ್ಷಣ ಇತ್ಯಾದಿ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ 1068
ಮೆಟ್ರಿಕ್-ನಂತರದ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಲಾಗಿದ್ದು, (442 ಬಾಲಕರು ಹಾಗೂ 626 ಬಾಲಕಿಯರು) ಇವುಗಳಲ್ಲಿ ಕ್ರಮವಾಗಿ
45763 ಹಾಗೂ 64852 ಹೀಗೆ ಒಟ್ಟು 110615 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ.

ಮೆಟ್ರಿಕ್-ನಂತರದ ವಿದ್ಯಾರ್ಥಿನಿಲಯಗಳಲ್ಲಿ ಈ ಕೆಳಕಂಡ ಸೌಲಭ್ಯಗಳನ್ನು ನೀಡಲಾಗುತ್ತಿದೆ.
1.ಪ್ರತಿ ವಿದ್ಯಾರ್ಥಿಗೆ ಮಾಹೆಯಾನ ರೂ.1400/-ರ ವೆಚ್ಚದಲ್ಲಿ 10 ತಿಂಗಳ ಅವಧಿಗೆ ಆಹಾರದ ವೆಚ್ಚ ನೀಡಿಕೆ.
2.ಉಚಿತ ವಸತಿ ಸೌಕರ್ಯ.
3.ಪ್ರತಿ ವಿದ್ಯಾರ್ಥಿನಿಲಯಕ್ಕೆ ಮಾಹೆಯಾನ ರೂ.1000ರ ವೆಚ್ಚದಲ್ಲಿ 10 ತಿಂಗಳ ಅವಧಿಗೆ ಸಾದಿಲ್ವಾರು ವೆಚ್ಚ ಭರಿಸುವುದು.
4.ಮಂಜೂರಾತಿ ಸಂಖ್ಯೆ 50 ಇರುವ ನಿಲಯಕ್ಕೆ ವರ್ಷಕ್ಕೆ ರೂ. 600 ಹಾಗೂ ಮಂಜೂರಾತಿ ಸಂಖ್ಯೆ 50ಕ್ಕಿಂತ ಹೆಚ್ಚು
ಇರುವ ನಿಲಯಕ್ಕೆ ರೂ. 1000ರಂತೆ ಪಾತ್ರೆಗಳಿಗೆ ಕಲಾಯಿ ವೆಚ್ಚ ಭರಿಸುವುದು.
5.ಶೌಚಾಲಯಗಳ ಸ್ವಚ್ಚತೆಗಾಗಿ ಪ್ರತಿ ನಿಲಯಕ್ಕೆ ವಾರ್ಷಿಕ ರೂ. 1250/- ವೆಚ್ಚ ಮಾಡಲಾಗುವುದು.
6.ಪ್ರತಿ ನಿಲಯಕ್ಕೆ 2 ದಿನ ಪತ್ರಿಕೆಗಳ ಪೂರೈಕೆಗಾಗಿ (ಒಂದು ಆಂಗ್ಲ ಭಾಷೆ ಹಾಗೂ ಒಂದು ಕನ್ನಡ ದಿನಪತ್ರಿಕೆಗಳು
ವಾಸ್ತವಿಕ ವೆಚ್ಚದಲ್ಲಿ.
7.ಕಟ್ಟಡಗಳ ಬಾಡಿಗೆ ಲೋಕೋಪಯೋಗಿ ಇಲಾಖೆ ನಿಗದಿಪಡಿಸಿದ ನಂತರ ಆಡಳಿತಾತ್ಮಕ ಅನುಮೋದನೆ ನೀಡಿದ
ದರದಲ್ಲಿ ಪಾವತಿಸುವುದು.
8. ಅ) ಸ್ನಾತಕೋತ್ತರ / ವೃತ್ತಿಪರ ವಿದ್ಯಾರ್ಥಿನಿಲಯಗಳ ಗ್ರಂಥಾಲಯಕ್ಕಾಗಿ ಪ್ರಥಮ ಬಾರಿಗೆ ರೂ.1.25 ಲಕ್ಷ,
ನಂತರದ ಪ್ರತಿ ವರ್ಷಕ್ಕೆ ರೂ.30,000/-
ಆ) ಇತರೆ ವಿದ್ಯಾರ್ಥಿನಿಲಯಗಳಿಗೆ ಪ್ರಥಮ ಬಾರಿಗೆ ರೂ.1.00 ಲಕ್ಷ, ನಂತರದ ಪ್ರತಿ ವರ್ಷಕ್ಕೆ ರೂ.20,000/-
9.ಕ್ರೀಡಾ ಸಾಮಗ್ರಿಗಳು ಪ್ರತಿ ವರ್ಷಕ್ಕೊಮ್ಮೆ, ಪ್ರತಿ ನಿಲಯಕ್ಕೆ, ಒಂದು ಸೆಟ್ ವಾಸ್ತವ ದರದಲ್ಲಿ.


ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಅನುಸರಿಸುವ ಮಾನದಂಡಗಳು
1.ವಿದ್ಯಾರ್ಥಿನಿಲಯಗಳು ಇರುವ ಸ್ಥಳಗಳ ಕಾಲೇಜುಗಳಿಂದ 5 ಕಿ.ಮೀ.ಗಿಂತ ದೂರದ ಸ್ಥಳಗಳಿಂದ ಬರುವ ವಿದ್ಯಾರ್ಥಿಗಳಿಗೆ
ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗುವುದು. ಸ್ಥಳೀಯ ವಿದ್ಯಾರ್ಥಿಗಳು ಪ್ರವೇಶಕ್ಕೆ ಅನರ್ಹರು.
2.ಈ ವಸತಿನಿಲಯಗಳಿಗೆ ಪ್ರವೇಶ ಪಡೆಯಲು ಪ್ರವರ್ಗ-2ಎ, 2ಬಿ, 3ಎ, 3ಬಿ ವರ್ಗಗಳ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ
ಕುಟುಂಬದ ವಾರ್ಷಿಕ ವರಮಾನ ಮಿತಿ ರೂ.1.00 ಲಕ್ಷ ಹಾಗೂ ಪ್ರವರ್ಗ-1, ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳಿಗೆ ರೂ.2.50
ಲಕ್ಷ ನಿಗದಿಪಡಿಸಿದ್ದು, ಅರ್ಹತೆ ಮತ್ತು ಆದಾಯದ ಮಾನದಂಡದ ಮೇಲೆ ಆಯ್ಕೆ ಮಾಡಲಾಗುವುದು.
3.ವಿದ್ಯಾರ್ಥಿಗಳನ್ನು ಈ ಕೆಳಕಂಡ ಮೀಸಲಾತಿ ಅನುಪಾತದಂತೆ ಪ್ರವೇಶಕ್ಕೆ ಆಯ್ಕೆ ಮಾಡಲಾಗುವುದು. 
1ಪ್ರವರ್ಗ - 1ಶೇಕಡ 10
2ಪ್ರವರ್ಗ - 2ಎಶೇಕಡ 35
3ಪ್ರವರ್ಗ - 2ಬಿಶೇಕಡ 09
4ಪ್ರವರ್ಗ - 3ಎಶೇಕಡ 09
5ಪ್ರವರ್ಗ - 3ಬಿಶೇಕಡ 12
6ಪರಿಶಿಷ್ಟ ಜಾತಿಶೇಕಡ 21
7ಪರಿಶಿಷ್ಟ ಪಂಗಡಶೇಕಡ 04
ಒಟ್ಟುಶೇಕಡ 100
4.ಸರ್ಕಾರಿ ಸುತ್ತೋಲೆ ಸಂಖ್ಯೆ ಸಕಇ 53 ಬಿಎಂಸ್ 2009 ದಿ:26.2.2009ರಲ್ಲಿ ವಿದ್ಯಾರ್ಥಿ ನಿಲಯಗಳಲ್ಲಿ ಲಭ್ಯವಿರುವ ಖಾಲಿ ಸ್ಥಾನಗಳಲ್ಲಿ
ಶೇಕಡ 20ರಷ್ಟು ಸ್ಥಾನಗಳನ್ನು ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳು, ಮಾಜಿ ಸೈನಿಕರ ಮಕ್ಕಳು, ವಿಧವೆಯರ ಮಕ್ಕಳು,ದೇವದಾಸಿಯರ
ಮಕ್ಕಳು, ಅಂಗವಿಕಲ ಮಕ್ಕಳು, ತಂದೆ ಹಾಗೂ ತಾಯಿ ಇಲ್ಲದ ಅನಾಥ ಮಕ್ಕಳು, ಪ್ರಮಾಣೀಕೃತ ಬಾಲಕಾರ್ಮಿಕರು, ಯೋಜನಾ ನಿರ್ವಸಿತ
ಪೋಷಕರ ಮಕ್ಕಳು, ದೌರ್ಜನ್ಯದಲ್ಲಿ ಮೃತಪಟ್ಟ / ಶಾಶ್ವತ ಅಂಗವಿಕಲ ಪೋಷಕರ ಮಕ್ಕಳು, ಅಪಘಾತದಲ್ಲಿ ಮೃತಪಟ್ಟ / ಶಾಶ್ವತ ಅಂಗವಿ
ಕಲರಾಗಿರುವ ಪೋಷಕರ ಮಕ್ಕಳು, ಆದಿವಾಸಿ ಪಂಗಡದ (ಜೇನು ಕುರುಬ ಹಾಗೂ ಕೊರಗ ಸಮಾಜ) ಮಕ್ಕಳು, ಅಲೆಮಾರಿ ಜನಾಂಗದ
ಮಕ್ಕಳು, ಭಿಕ್ಷುಕರ ಮಕ್ಕಳು, ಸಫಾಯಿ ಕರ್ಮಚಾರಿ ಮಕ್ಕಳಿಗೆ ಮೀಸಲಿರಿಸಲಾಗಿದೆ.

ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಸರ್ಕಾರಿ ಆದೇಶ ಸಂಖ್ಯೆ ಸಕಇ 221 ಬಿಎಂಎಸ್ 2009
ದಿನಾಂಕ:24.7.2009 ರಲ್ಲಿ ಕೆಳಕಂಡಂತೆ ತಾಲ್ಲೂಕು ಮಟ್ಟದ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ.
1ತಾಲ್ಲೂಕಿನ ಹೆಚ್ಚಿನ ಭಾಗ ಪ್ರತಿನಿಧಿಸುವ ವಿಧಾನಸಭಾ ಸದಸ್ಯರುಅಧ್ಯಕ್ಷರು
2ತಾಲ್ಲೂಕಿನ ಉಳಿದ ಭಾಗ ಪ್ರತಿನಿಧಿಸುವ ವಿಧಾನಸಭಾ ಸದಸ್ಯರುಸದಸ್ಯರು
3ಆಯಾ ಕ್ಷೇತ್ರದ ವಿಧಾನ ಪರಿಷತ್ತಿನ ಸದಸ್ಯರುಸದಸ್ಯರು
4ಸಂಬಂಧಪಟ್ಟ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳುಸದಸ್ಯರು
5ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿ.ಇ.ಓ)ಸದಸ್ಯರು
6ಆಯಾ ತಾಲ್ಲೂಕಿನ ತಹಶೀಲ್ದಾರರುಸದಸ್ಯರು
7ಆಯಾ ತಾಲ್ಲೂಕಿನ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳುಸದಸ್ಯರು
8ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯಾ ತಾಲ್ಲೂಕಿನ ವಿಸ್ತರಣಾಧಿಕಾರಿಗಳುಸದಸ್ಯ ಕಾರ್ಯದರ್ಶಿ

ಮೆಟ್ರಿಕ್-ನಂತರದ ವಿದ್ಯಾರ್ಥಿನಿಲಯಗಳಿಗೆ ಪ್ರವೇಶ ನೀಡುವ ವೇಳಾಪಟ್ಟಿ(ಸಾಮಾನ್ಯ ಮತ್ತು ಮಾದರಿ ವಿದ್ಯಾರ್ಥಿನಿಲಯಗಳು)
1ನವೀಕರಣ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ದಿನಾಂಕಕಾಲೇಜು ಪ್ರಾರಂಭವಾಗುವ ದಿನಾಂಕದಿಂದ
2ಹೊಸ ವಿದ್ಯಾರ್ಥಿಗಳ ಪ್ರವೇಶಕ್ಕೆ ಪ್ರಕಟಣೆ ನೀಡುವ ದಿನಾಂಕ28.6.2016
3ಹೊಸ ವಿದ್ಯಾರ್ಥಿಗಳು ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ23.7.2016
4ವಿದ್ಯಾರ್ಥಿ ಸಲ್ಲಿಸುವ ಅರ್ಜಿಯನ್ನು, ವಿದ್ಯಾರ್ಥಿಯು ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಪ್ರಾಂಶುಪಾಲರಿಂದ ದೃಢೀಕರಿಸಿ,
ದಾಖಲೆಗಳೊಂದಿಗೆ, ಸಂಬಂಧಪಟ್ಟ ತಾಲ್ಲೂಕು ಹಿಂದುಳಿದ ವರ್ಗಗಳ ಕಛೇರಿಗೆ ಸಲ್ಲಿಸಲು ಕೊನೆಯ ದಿನಾಂಕ
25.7.2016
5ಹೊಸ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು, ಆಯ್ಕೆ ಸಮಿತಿಯು ಸಭೆ ಸೇರುವ ದಿನಾಂಕ27.7.2016 ರಿಂದ 30.7.2016ರೊಳಗೆ
6ಆಯ್ಕೆ ಸಮಿತಿಯ ಪಟ್ಟಿಯನ್ನು ಪ್ರಕಟಿಸುವ ದಿನಾಂಕ31.7.2016
7ಆಯ್ಕೆಯಾದ ವಿದ್ಯಾರ್ಥಿಗಳು, ವಿದ್ಯಾರ್ಥಿನಿಲಯಕ್ಕೆ ಪ್ರವೇಶ ಪಡೆಯುವ ಕೊನೆಯ ದಿನಾಂಕ31.7.2016 ರಿಂದ 3.8.2016 ರೊಳಗೆ

ರಾಜ್ಯದಲ್ಲಿರುವ ಮೆಟ್ರಿಕ್-ನಂತರದ ವಿದ್ಯಾರ್ಥಿನಿಲಯಗಳ ಜಿಲ್ಲಾವಾರು ಮಾಹಿತಿ
ಕ್ರ.ಸಂ.ಜಿಲ್ಲೆಯ ಹೆಸರುವಿದ್ಯಾರ್ಥಿನಿಲಯಗಳ ಸಂಖ್ಯೆವಿದ್ಯಾರ್ಥಿಗಳ ಮಂಜೂರಾತಿ ಸಂಖ್ಯೆ
ಬಾಲಕಬಾಲಕಿಒಟ್ಟುಬಾಲಕಬಾಲಕಿಒಟ್ಟು
1ಬಾಗಲಕೋಟೆ182139183523004315
2ಬೆಂಗಳೂರು (ಗ್ರಾ)369300600900
3ಬೆಂಗಳೂರು (ನ)192342180025204050
4ಬೆಳಗಾಂ253055257531255700
5ಬಳ್ಳಾರಿ291847300018254825
6ಬೀದರ್121527137515652940
7ಚಾಮರಾಜನಗರ6152161515252140
8ಚಿಕ್ಕಬಳ್ಳಾಪುರ8162480017002500
9ಚಿಕ್ಕಮಗಳೂರು112839117529604135
10ಚಿತ್ರದುರ್ಗ192443196524004365
11ದಕ್ಷಿಣ ಕನ್ನಡ153247147033004770
12ದಾವಣಗೆರೆ192443196524004365
13ಧಾರವಾಡ142236142522503675
14ಗದಗ್8172580018002600
15ಹಾಸನ192342202524004425
16ಹಾವೇರಿ91928101520403055
17ಕಲಬುರಗಿ202949210029505050
18ಕೊಡಗು8111980011001900
19ಕೋಲಾರ141630140016503050
20ಕೊಪ್ಪಳ9172698517652750
21ಮಂಡ್ಯ202141212522254350
22ಮೈಸೂರು242145257321604733
23ರಾಯಚೂರು131932137519503325
24ರಾಮನಗರ101020105010252075
25ಶಿವಮೊಗ್ಗ294372300045707570
26ತುಮಕೂರು182947195030124962
27ಉಡುಪಿ9152490016152515
28ಉತ್ತರ ಕನ್ನಡ122133123021253355
29ವಿಜಯಪುರ132437130024503750
30ಯಾದಗಿರಿ91221100012002200
ಒಟ್ಟು44262610684576364852110615
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳು
(ಲೆಕ್ಕಶೀರ್ಷಿಕೆ ರಾಜ್ಯವಲಯ ಯೋಜನೆ 2225-03-277-2-53 ಮತ್ತು ಜಿಲ್ಲಾವಲಯ ಯೋಜನೆ ಹಾಗೂ ಯೋಜನೇತರ 2225-00-103-0-26)
(2016-17ನೇ ಸಾಲಿನ ಒಟ್ಟು ಆಯವ್ಯಯ ರಾಜ್ಯವಲಯ ರೂ.63871.96 ಲಕ್ಷಗಳು)

ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಅವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಂದುವರೆಸಲು ಪ್ರೋತ್ಸಾಹಿಸುವ ಸಲುವಾಗಿ
ಮೆಟ್ರಿಕ್ ಪೂರ್ವ ಬಾಲಕರ/ ಬಾಲಕಿಯರ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಿ, ನಿರ್ವಹಿಸಲಾಗುತ್ತಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾ
-ಖೆಯಡಿ 1340 ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳಿದ್ದು, (1055 ಬಾಲಕರು ಹಾಗೂ 285 ಬಾಲಕಿಯರು) ಇವುಗಳಲ್ಲಿ ಕ್ರಮವಾಗಿ 54731
ಹಾಗೂ 15111 ಹೀಗೆ ಒಟ್ಟು 69842 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ.

ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯದ ಉದ್ಯಾನವನ

ಪ್ರಾರ್ಥನಾನಿರತ ಮೆಟ್ರಿಕ್-ಪೂರ್ವ ವಿದ್ಯಾರ್ಥಿಗಳು

ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳಲ್ಲಿ ಈ ಕೆಳಕಂಡ ಸೌಲಭ್ಯಗಳನ್ನು ನೀಡಲಾಗುತ್ತಿದೆ.
1.ಪ್ರತಿ ವಿದ್ಯಾರ್ಥಿಗೆ ಮಾಹೆಯಾನ ರೂ.1300/- ವೆಚ್ಚದಲ್ಲಿ 10 ತಿಂಗಳ ಅವಧಿಗೆ ಆಹಾರ ನೀಡಿಕೆ.
2.ಉಚಿತ ವಸತಿ ಸೌಕರ್ಯ.
3.ಪ್ರತಿ ವಿದ್ಯಾರ್ಥಿಗೆ ವರ್ಷಕ್ಕೆ 2 ಜೊತೆ ಸಮವಸ್ತ್ರ ಪೂರೈಕೆ.
4.ಪ್ರತಿ ವಿದ್ಯಾರ್ಥಿಗೆ ಮಾಹೆಯಾನ ರೂ.50/-ರಂತೆ 10 ತಿಂಗಳ ಅವಧಿಗೆ ಇತರೆ ವೆಚ್ಚ .
5.ಪ್ರತಿ ಬಾಲಕ ವಿದ್ಯಾರ್ಥಿಗೆ ರೂ.50/-ರಂತೆ 10 ತಿಂಗಳಿಗೆ ಕ್ಷೌರದ ವೆಚ್ಚ ನೀಡಿಕೆ.
6.ಪ್ರತಿ ವಿದ್ಯಾರ್ಥಿಗೆ ರೂ.200/-ರ ವೆಚ್ಚದಲ್ಲಿ ವರ್ಷಕ್ಕೆ ಪಠ್ಯ ಪುಸ್ತಕ ಮತ್ತು ಲೇಖನ ಸಾಮಗ್ರಿ ನೀಡಿಕೆ.
7.ಪ್ರತಿ ವಿದ್ಯಾರ್ಥಿನಿಲಯಕ್ಕೆ ಮಾಹೆಯಾನ ರೂ.500/- ರಂತೆ 10 ತಿಂಗಳ ಅವಧಿಗೆ ವೈದ್ಯಕೀಯ ವೆಚ್ಚ ನೀಡಿಕೆ.
8.ಪ್ರತಿ ವಿದ್ಯಾರ್ಥಿಗೆ 3 ವರ್ಷಕ್ಕೊಮ್ಮೆ ಹಾಸಿಗೆ ಹೊದಿಕೆ ಸರಬರಾಜು.
9.ಮಂಜೂರಾತಿ ಸಂಖ್ಯೆ 50 ಇರುವ ನಿಲಯಕ್ಕೆ ವರ್ಷಕ್ಕೆ ರೂ.600/-ರಂತೆ ಹಾಗೂ ಮಂಜೂರಾತಿ ಸಂಖ್ಯೆ
50ಕ್ಕಿಂತ ಹೆಚ್ಚಾಗಿ ಇರುವ ನಿಲಯಕ್ಕೆ ರೂ.1000/-ರಂತೆ ಪಾತ್ರೆಗಳಿಗೆ ಕಲಾಯಿ ವೆಚ್ಚ ಭರಿಸಲಾಗುತ್ತದೆ.
10.ಮೂವರು ಅಲ್ಪಕಾಲಿಕ ಬೋಧಕರನ್ನು ಮಾಹೆಯಾನ ರೂ.2000/-ರಂತೆ ಗೌರವಧನ ಕೊಡುವುದರೊಂದಿಗೆ
ಕಠಿಣ ವಿಷಯಗಳಲ್ಲಿ ಪಾಠ ಹೇಳಿಸುವುದು.
11.ಪ್ರತಿ ವಿದ್ಯಾರ್ಥಿನಿಲಯಕ್ಕೆ ವಾರ್ತಾ ಪತ್ರಿಕೆ ಮತ್ತು ನಿಯತಕಾಲಿಕೆ ಖರೀದಿಗಾಗಿ ವಾರ್ಷಿಕವಾಗಿ ರೂ.3000/-
12.ಶೌಚಾಲಯಗಳ ಸ್ವಚ್ಛತೆಗಾಗಿ ಪ್ರತಿ ವಿದ್ಯಾರ್ಥಿನಿಲಯಕ್ಕೆ ಮಾಹೆಯಾನ ರೂ.1000/- ರಂತೆ 10 ತಿಂಗಳಿಗೆ.
ವಿದ್ಯಾರ್ಥಿನಿಲಯದಲ್ಲಿ ಮಾಸಿಕ ಆರೋಗ್ಯ ತಪಾಸಣೆ

ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಅನುಸರಿಸುವ ಮಾನದಂಡಗಳು
1.ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಸರ್ಕಾರಿ / ಸರ್ಕಾರಿ ಅಂಗೀಕೃತ
ಶಿಕ್ಷಣ ಸಂಸ್ಥೆಗಳಲ್ಲಿ 5ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು..
2.ಶೈಕ್ಷಣಿಕ ಸಂಸ್ಥೆಯಂದ 5 ಕಿ.ಮೀ ದೂರದಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಶೇಕಡಾ 90ರಷ್ಟು ಸ್ಥಾನಗಳನ್ನು
ಹಾಗೂ ಉಳಿದ 10ರಷ್ಟು ಸ್ಥಾನಗಳನ್ನು 5 ಕಿ.ಮೀ.ಗಳಿಗಿಂತ ಕಡಿಮೆ ದೂರದ ಸ್ಥಳಗಳ ವಿದ್ಯಾರ್ಥಿಗಳಿಗೆ
ನೀಡಲಾಗುವುದು.
3.ಪ್ರವರ್ಗ-1ರ ವಿದ್ಯಾರ್ಥಿಗಳಿಗೆ ರೂ.1.00 ಲಕ್ಷ ಹಾಗೂ ಪ್ರವರ್ಗ 2ಎ, 2ಬಿ, 3ಎ, 3ಬಿಯ ವಿದ್ಯಾರ್ಥಿಗಳ
ಕುಟುಂಬದ ವಾರ್ಷಿಕ ವರಮಾನ ಮಿತಿ ರೂ.44,500/-ಕ್ಕೆ ನಿಗದಿಪಡಿಸಿದೆ.
4.ಬೇಸಿಗೆ ರಜಾ ನಂತರ ಎಲ್ಲಾ ನಿಲಯಗಳನ್ನು ಜೂನ್ 1ರಂದು ತೆರೆಯಲಾಗುತ್ತದೆ.ಹಿಂದಿನ ವಾರ್ಷಿಕ ಪರೀಕ್ಷೆಯಲ್ಲಿ
ಎಲ್ಲಾ ವಿಷಯಗಳಲ್ಲಿ ಉತ್ತೀರ್ಣರಾದ ನಿಲಯಾರ್ಥಿಗಳನ್ನು ಮಾತ್ರ ನವೀಕರಣ ವಿದ್ಯಾರ್ಥಿಗಳೆಂದು ಪರಿಗಣಿಸಿ ಆಯ್ಕೆ
ಸಮಿತಿಯ ಅನುಮೋದನೆಗೆ ಒಳಪಟ್ಟು ವಿದ್ಯಾರ್ಥಿಗಳನ್ನು ನವೀಕರಿಸಲಾಗುವುದು.
5.ನವೀಕರಣ ವಿದ್ಯಾರ್ಥಿಗಳ ಪ್ರವೇಶಾತಿಯ ಬಳಿಕ ಉಳಿದ ಸ್ಥಾನಗಳಿಗೆ ಆಯ್ಕೆ ಸಮಿತಿಯು ಆಯ್ಕೆ
ಮಾಡಿದ ಹೊಸ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವುದು.
6.ವಿದ್ಯಾರ್ಥಿಗಳನ್ನು ಈ ಕೆಳಕಂಡ ಮೀಸಲಾತಿ ಅನುಪಾತದಂತೆ ಪ್ರವೇಶಕ್ಕೆ ಆಯ್ಕೆ ಮಾಡಲಾಗುವುದು.
1ಪ್ರವರ್ಗ - 1ಶೇಕಡ 10
2ಪ್ರವರ್ಗ - 2ಎಶೇಕಡ 35
3ಪ್ರವರ್ಗ - 2ಬಿಶೇಕಡ 09
4ಪ್ರವರ್ಗ - 3ಎಶೇಕಡ 09
5ಪ್ರವರ್ಗ - 3ಬಿಶೇಕಡ 12
6ಪರಿಶಿಷ್ಟ ಜಾತಿಶೇಕಡ 21
7ಪರಿಶಿಷ್ಟ ಪಂಗಡಶೇಕಡ 04
ಒಟ್ಟುಶೇಕಡ 100

ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಸರ್ಕಾರಿ ಆದೇಶ ಸಂಖ್ಯೆ ಸಕಇ 221 ಬಿಎಂಎಸ್ 2009
ದಿನಾಂಕ:24.7.2009 ರಲ್ಲಿ ಕೆಳಕಂಡಂತೆ ತಾಲ್ಲೂಕು ಮಟ್ಟದ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ.
1ತಾಲ್ಲೂಕಿನ ಹೆಚ್ಚಿನ ಭಾಗ ಪ್ರತಿನಿಧಿಸುವ ವಿಧಾನಸಭಾ ಸದಸ್ಯರುಅಧ್ಯಕ್ಷರು
2ತಾಲ್ಲೂಕಿನ ಉಳಿದ ಭಾಗ ಪ್ರತಿನಿಧಿಸುವ ವಿಧಾನಸಭಾ ಸದಸ್ಯರುಸದಸ್ಯರು
3ಆಯಾ ಕ್ಷೇತ್ರದ ವಿಧಾನ ಪರಿಷತ್ತಿನ ಸದಸ್ಯರುಸದಸ್ಯರು
4ಸಂಬಂಧಪಟ್ಟ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳುಸದಸ್ಯರು
5ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿ.ಇ.ಓ)ಸದಸ್ಯರು
6ಆಯಾ ತಾಲ್ಲೂಕಿನ ತಹಶೀಲ್ದಾರರುಸದಸ್ಯರು
7ಆಯಾ ತಾಲ್ಲೂಕಿನ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳುಸದಸ್ಯರು
8ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯಾ ತಾಲ್ಲೂಕಿನ ವಿಸ್ತರಣಾಧಿಕಾರಿಗಳುಸದಸ್ಯ ಕಾರ್ಯದರ್ಶಿ

ರಾಜ್ಯದಲ್ಲಿರುವ ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳ ಜಿಲ್ಲಾವಾರು ಮಾಹಿತಿ
ಕ್ರ.ಸಂ.ಜಿಲ್ಲೆಯ ಹೆಸರುವಿದ್ಯಾರ್ಥಿನಿಲಯಗಳ ಸಂಖ್ಯೆವಿದ್ಯಾರ್ಥಿಗಳ ಮಂಜೂರಾತಿ ಸಂಖ್ಯೆ
ಬಾಲಕಬಾಲಕಿಒಟ್ಟುಬಾಲಕಬಾಲಕಿಒಟ್ಟು
1ಬಾಗಲಕೋಟೆ3674324203952815
2ಬೆಂಗಳೂರು (ಗ್ರಾ)17421760150910
3ಬೆಂಗಳೂರು (ನ)437196120316
4ಬೆಳಗಾಂ881210046406005240
5ಬಳ್ಳಾರಿ38135127058203525
6ಬೀದರ್4385123174152732
7ಚಾಮರಾಜನಗರ1121348595580
8ಚಿಕ್ಕಬಳ್ಳಾಪುರ2963515153001815
9ಚಿಕ್ಕಮಗಳೂರು421961188012503130
10ಚಿತ್ರದುರ್ಗ4385120455052550
11ದಕ್ಷಿಣ ಕನ್ನಡ1511266705951265
12ದಾವಣಗೆರೆ30104015005902090
13ಧಾರವಾಡ2272910802901370
14ಗದಗ್2983716234602083
15ಹಾಸನ61117229855753560
16ಹಾವೇರಿ3894719954452440
17ಕಲಬುರಗಿ62157733157604075
18ಕೊಡಗು15520560245805
19ಕೋಲಾರ2483212713551626
20ಕೊಪ್ಪಳ3484221354702605
21ಮಂಡ್ಯ49166524257403165
22ಮೈಸೂರು4164717502602010
23ರಾಯಚೂರು3263818203202140
24ರಾಮನಗರ226289582351193
25ಶಿವಮೊಗ್ಗ421860215010363186
26ತುಮಕೂರು48115921554952650
27ಉಡುಪಿ11617470280750
28ಉತ್ತರ ಕನ್ನಡ442064209611703266
29ವಿಜಯಪುರ51126329356253560
30ಯಾದಗಿರಿ34104418755152390
ಒಟ್ಟು10552851340547311511169842

ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳಿಗೆ ಪ್ರವೇಶ ನೀಡುವ ವೇಳಾಪಟ್ಟಿ
1ನವೀಕರಣ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ದಿನಾಂಕಜೂನ್ 1
2ಹೊಸ ವಿದ್ಯಾರ್ಥಿಗಳ ಪ್ರವೇಶಕ್ಕೆ ಪ್ರಕಟಣೆ ನೀಡುವ ದಿನಾಂಕಮೇ 25
3ಹೊಸ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಜೂನ್ 15
4ಹೊಸ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಕಡೆಯ ದಿನಾಂಕಜೂನ್ 20 ರಿಂದ 25
5ಪ್ರವೇಶಕ್ಕೆ ನಿಗದಿಪಡಿಸಿದ ಕೊನೆಯ ದಿನಾಂಕಜೂನ್ 30
">
ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ
(ಲೆಕ್ಕಶೀರ್ಷಿಕೆ ರಾಜ್ಯವಲಯ ಯೋಜನೆ 2225-03-283-0-03 (2019-20ನೇ ಸಾಲಿನ ಆಯವ್ಯಯ ರೂ.15000.00 ಲಕ್ಷಗಳು)
ವಿಶೇಷ ಸೂಚನೆ: ವಿದ್ಯಾರ್ಥಿಗಳು ಖಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆ ಗೆ ಆಧಾರ್ ಸಂಖ್ಯೆಯನ್ನು ಜೋಡಣೆ (link) ಮಾಡಿಸತಕ್ಕದ್ದು.

ಅರ್ಹತೆಗಳು:
1.ಅ) ಭಾರತದ ಪ್ರಜೆಯಾಗಿದ್ದು, ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
ಆ) ಭಾರತ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಧಿಸೂಚಿಸಿರುವ, ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿರಬೇಕು.
ಇ) ಕರ್ನಾಟಕದ ಶಾಸನಬದ್ದ ವಿಶ್ವವಿದ್ಯಾಲಯಗಳ ಅಧೀನಕ್ಕೆ ಒಳಪಡುವ, ಸರ್ಕಾರಿ / ಸ್ಥಳೀಯ ಸಂಸ್ಥೆ/ ಅನುದಾನಿತ
ಸಂಸ್ಥೆಗಳು / ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಸಂಸ್ಥೆಗಳಲ್ಲಿ - ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ
ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಾಗಿರಬೇಕು.
2.ಯಾವುದೇ ಇಲಾಖೆಯ ಸರ್ಕಾರಿ / ಸರ್ಕಾರಿ ಅನುದಾನಿತ ವಿದ್ಯಾರ್ಥಿನಿಲಯ / ವಸತಿ ಕಾಲೇಜುಗಳಲ್ಲಿ, ಪ್ರವೇಶ ದೊರೆಯದ
ಹಾಗೂ ಮೆಟ್ರಿಕ್-ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುವ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ, ವಿದ್ಯಾಸಿರಿ- ಊಟ
ಮತ್ತು ವಸತಿ ಕಾರ್ಯಕ್ರಮದಲ್ಲಿ ಮಂಜೂರಾತಿ ನೀಡಲಾಗುವುದು.
3.ಈ ಯೋಜನೆಯಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ, ಪ್ರತಿ ತಿಂಗಳಿಗೆ ರೂ.1500/-ರಂತೆ, ಶೈಕ್ಷಣಿಕ ಅವಧಿಯ 10 ತಿಂಗಳಿಗೆ ಒಟ್ಟು
ರೂ.15,000/- ಸಹಾಯಧನವನ್ನು, ಇತರೆ ನಿಬಂಧನೆಗಳಿಗೊಳಪಟ್ಟು, ವಿದ್ಯಾರ್ಥಿಗಳು ಯಾವುದಾದರೂ ಕೋರ್ ಬ್ಯಾಂಕಿಂಗ್ ವ್ಯವಸ್ಥೆ
ಇರುವ ಬ್ಯಾಂಕಿನಲ್ಲಿ ತೆರೆದಿರುವ ಬ್ಯಾಂಕ್ ಖಾತೆಗೆ, ಆನ್‍ಲೈನ್ ಮೂಲಕ ಜಮಾ ಮಾಡಲಾಗುವುದು.
4.ವಿದ್ಯಾರ್ಥಿಗಳು
(i)ವಿದ್ಯಾರ್ಥಿ ನಿಲಯದಲ್ಲಿ ಪ್ರವೇಶ,
(ii)ಊಟ ಮತ್ತು ವಸತಿ ಸಹಾಯ ಯೋಜನೆ ಮತ್ತು
(iii)ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ-ಇವುಗಳಲ್ಲಿ ಯಾವುದಾದರೂ ಒಂದು ಸೌಲಭ್ಯಕ್ಕೆ ಮಾತ್ರ ಅರ್ಹರಿರುತ್ತಾರೆ.
5.ಈ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರಾದವರು, ಆನ್‍ಲೈನ್ (ಔಟಿಟiಟಿe) ಮೂಲಕ ಅರ್ಜಿ ಸಲ್ಲಿಸಬೇಕು.
6.ಅ) ಈ ಮೇಲಿನ ಸೌಲಭ್ಯ ಪಡೆಯಲು ವಿದ್ಯಾರ್ಥಿಯ, ತಂದೆ-ತಾಯಿ/ಪೋಷಕರ ಕುಟುಂಬದ, ಒಟ್ಟು ವಾರ್ಷಿಕ
ವರಮಾನ (Gross Annual Income) ಈ ಕೆಳಗೆ ನಿಗದಿಪಡಿಸಿದ ಮಿತಿಯೊಳಗೆ ಇರಬೇಕು.
(i) ಪ್ರವರ್ಗ-1 ರ ವಿದ್ಯಾರ್ಥಿಗಳಿಗೆ ರೂ.2.50 ಲಕ್ಷ
(ii) ಪ್ರವರ್ಗ-2ಎ, 3ಎ ಮತ್ತು 3ಬಿ ವಿದ್ಯಾರ್ಥಿಗಳಿಗೆ ರೂ.1.00 ಲಕ್ಷ
ಆ) ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವಾಗಿರಬೇಕು ಹಾಗೂ ವ್ಯಾಸಂಗ ಮಾಡುವ ಕಾಲೇಜಿನಿಂದ ಕನಿಷ್ಟ 5 ಕಿ.ಮೀ. ದೂರದವರಾಗಿರಬೇಕು.
ಆದರೆ, ವಿದ್ಯಾರ್ಥಿಯ ಸ್ವಂತ ಸ್ಥಳ, ನಗರ/ಪಟ್ಟಣ ಆಗಿದ್ದು, ಅವರು ಬೇರೆ ನಗರ/ಪಟ್ಟಣದಲ್ಲಿ ಇರುವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಲ್ಲಿ,
ಅಂತಹವರು ಈ ಸೌಲಭ್ಯಕ್ಕೆ ಅರ್ಹರಿರುತ್ತಾರೆ. ಇ) ಹೊಸ ಮತ್ತು ನವೀಕರಣ ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯಲು ಈ ಹಿಂದಿನ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಈ ಕೆಳಗಿನಂತೆ ಕನಿಷ್ಠ ಅಂಕಗಳನ್ನು
ಪಡೆದು ಉತ್ತೀರ್ಣರಾಗಿರಬೇಕು.
ಕ್ರ. ಸಂ.ಪ್ರವರ್ಗಹೊಸನವೀಕರಣ
1ಪ್ರವರ್ಗ-140%50%
2ಪ್ರವರ್ಗ-2ಎ, 3ಎ ಮತ್ತು 3ಬಿ50%60%
(ಒಂದು ವೇಳೆ, ವೈದ್ಯಕೀಯ ಕಾರಣಗಳಿಂದಾಗಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿದ್ದಲ್ಲಿ, ಅಂತಹವರು, ವೈದ್ಯಕೀಯ
ಮಂಡಳಿಯಿಂದ ಪ್ರಮಾಣ ಪತ್ರ ಪಡೆದು ಸಲ್ಲಿಸಬೇಕು.)
7. ಅ) ಸಮಾನ ಕೋರ್ಸುಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ವ್ಯಾಸಂಗ ಮಾಡುತ್ತಿದ್ದಲ್ಲಿ ಅಂತಹವರು ಅರ್ಹರಿರುವುದಿಲ್ಲ.(ಉದಾ: ಬಿ.ಎ ನಂತರ ಬಿ.ಕಾಂ,
ಎಂ.ಎ (ಕನ್ನಡ) ನಂತರ ಎಂ.ಎ (ಇಂಗ್ಲೀಷ್), ಬಿ.ಎಡ್ ನಂತರ ಎಲ್.ಎಲ್.ಬಿ, ಇತ್ಯಾದಿಗಳಿಗೆ ಪ್ರವೇಶ ಪಡೆದಿದ್ದಲ್ಲಿ)
ಆ) ಸ್ನಾತಕೋತ್ತರ ವೈದ್ಯಕೀಯ ಕೋರ್ಸುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು, ಕೋರ್ಸಿನ ಅವಧಿಯಲ್ಲಿ ಮೆಡಿಕಲ್ ಪ್ರಾಕ್ಟೀಸ್ ಮಾಡುತ್ತಿದ್ದಲ್ಲಿ,
ಈ ಸೌಲಭ್ಯಕ್ಕೆ ಅರ್ಹರಿರುವುದಿಲ್ಲ.
ಇ) ಕಲೆ, ವಿಜ್ಞಾನ, ಹಾಗೂ ವಾಣಿಜ್ಯ ಕೋರ್ಸುಗಳ, ಪದವಿ ಅಥವಾ ಸ್ನಾತಕೋತ್ತರ ಪದವಿಗಳಲ್ಲಿ ಉತ್ತೀರ್ಣ / ಅನುತ್ತೀರ್ಣರಾದವರು ಅಂಗೀಕೃತ
ವೃತ್ತಿಪರ ಅಥವಾ ತಾಂತ್ರಿಕ ಸರ್ಟಿಫಿಕೇಟ್, ಡಿಪ್ಲೋಮ, ಪದವಿ ಕೋರ್ಸುಗಳಲ್ಲಿ ವ್ಯಾಸಂಗ ಮಾಡಿದ್ದಲ್ಲಿ, ಹಾಗೂ ಇತರೆ ರೀತಿ ಅರ್ಹರಿದ್ದಲ್ಲಿ ಅವರು
ಈ ಯೋಜನೆಯ ಅಡಿ ಸೌಲಭ್ಯಗಳಿಗೆ ಅರ್ಹರಿರುತ್ತಾರೆ. ಒಂದಕ್ಕಿಂತ ಹೆಚ್ಚು ಬಾರಿ ಕೋರ್ಸುಗಳ ಬದಲಾವಣೆ ಮಾಡಿಕೊಂಡವರು ಅರ್ಹರಿರುವುದಿಲ್ಲ.
ಈ) ಒಂದೇ ಕುಟುಂಬದ ಇಬ್ಬರು ಗಂಡು ಮಕ್ಕಳು ಮಾತ್ರ ಈ ಯೋಜನೆಗೆ ಅರ್ಹರು. ಆದರೆ, ಈ ನಿರ್ಬಂಧ ಹೆಣ್ಣು ಮಕ್ಕಳಿಗೆ ಅನ್ವಯಿಸುವುದಿಲ್ಲ.
8. ಪ್ರತಿ ಮಾಹೆ ವಿದ್ಯಾರ್ಥಿಯ ತರಗತಿ ಹಾಜರಾತಿ ಕನಿಷ್ಟ ಶೇ.75 ರಷ್ಟಿರಬೇಕು.
ಅನುದಾನ ಹಂಚಿಕೆ ವಿಧಾನ:
(ಅ) ಆಯಾ ಶೈಕ್ಷಣಿಕ ವರ್ಷದಲ್ಲಿ ಲಭ್ಯವಾಗುವ ಅನುದಾನವನ್ನು ಪ್ರವರ್ಗವಾರು ಈ ಕೆಳಗಿನ ಮೀಸಲಾತಿಯಂತೆ ಮರು ಹಂಚಿಕೆ ಮಾಡಲಾಗುವುದು.
ಪ್ರವರ್ಗವಾರು ಹಂಚಿಕೆ ಮಾಡಬೇಕಾಗಿರುವ ಮೊತ್ತದ ಶೇಕಡಾವಾರು
1ಪ್ರವರ್ಗ - 115%
2ಪ್ರವರ್ಗ – 2ಎ53%
3ಪ್ರವರ್ಗ - 3ಎ14%
4ಪ್ರವರ್ಗ - 3ಬಿ18%
ಒಟ್ಟು100%
(ಆ) ಆರ್ಥಿಕ ವರ್ಷಕ್ಕೆ ಲಭ್ಯವಾಗುವ ಅನುದಾನದ ಮಿತಿಗೆ ಒಳಪಟ್ಟು, ಅರ್ಹತೆ ಮತ್ತು ಆದಾಯಕ್ಕೆ (Merit cum Means)
ಅನುಗುಣವಾಗಿ ಮಂಜೂರು ಮಾಡಬೇಕು.
ಮಂಜೂರಾತಿ ವಿಧಾನ:
1.ಆನ್‍ಲೈನ್ ಮೂಲಕ ಇ-ಪಾಸ್ ತಂತ್ರಾಂಶದಲ್ಲಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗುವುದು.
2.ವಿದ್ಯಾರ್ಥಿಗಳು ನಿಗದಿತ ದಾಖಲೆಗಳು ಹಾಗೂ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಐ.ಎಫ್.ಸಿ.ಕೋಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ,
ಹಿಂದಿನ ತರಗತಿಯ ಅಂಕಪಟ್ಟಿಯ ಮಾಹಿತಿಯೊಂದಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹಾಗೂ ಹಾರ್ಡ್ ಕಾಫಿಯನ್ನು ಸಂಬಂಧಪಟ್ಟ
ಕಾಲೇಜುಗಳಿಗೆ ಸಲ್ಲಿಸುವುದು.
3.ಕಾಲೇಜು ಪ್ರಾಂಶುಪಾಲರು ಮತ್ತು ಪರಿಶೀಲನಾ ಅಧಿಕಾರಿಗಳು ಆಯಾ ಹಂತದಲ್ಲಿ ಅರ್ಜಿ ಹಾಗೂ ದಾಖಲೆಗಳನ್ನು ಪರಿಶೀಲಿಸಿ, ಆನ್‍ಲೈನ್‍ನಲ್ಲಿ
ದೃಢೀಕರಿಸಿ ಸದರಿ ದಾಖಲೆಗಳನ್ನು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಸಲ್ಲಿಸಬೇಕು.
4.ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಪರಿಶೀಲಿಸಿ, ಆನ್‍ಲೈನ್‍ನಲ್ಲಿ ದೃಢೀಕರಿಸುವುದು.
5.ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಸದರಿ ಮಾಹಿತಿಯ ಪರಿಶೀಲನೆಯನ್ನು ಮಾಡುವುದು.
6.ಈ ಯೋಜನೆಯಡಿ ಆಯ್ಕೆಯಾದ ವಿದ್ಯಾರ್ಥಿಯ ಹಾಜರಾತಿ ಪ್ರತಿ ಮಾಹೆ ಕನಿಷ್ಟ ಶೇ.75 ರಷ್ಟು ಇರುವುದನ್ನು ಕಾಲೇಜು ಪ್ರಾಂಶುಪಾಲರಿಂದ
ಪಡೆದು, ಆನ್‍ಲೈನ್‍ನಲ್ಲಿ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಅಪ್‍ಲೋಡ್ ಮಾಡುವುದು.
7.ಆಯಾ ವರ್ಷದ ಆಯವ್ಯಯಕ್ಕನುಗುಣವಾಗಿ ಅರ್ಹತೆ ಮತ್ತು ಅಂಕಗಳ ಆಧಾರದ ಮೇಲೆ ಅರ್ಹ ವಿದ್ಯಾರ್ಥಿಗಳಿಗೆ ತಾಲ್ಲೂಕು ಹಂತದಲ್ಲಿ ವಿದ್ಯಾಸಿರಿ
ಊಟ ಮತ್ತು ವಸತಿ ಸೌಲಭ್ಯವನ್ನು ಮಂಜೂರು ಮಾಡುವುದು.
8.ಮಂಜೂರಾದ ಮೊತ್ತವನ್ನು ಸಂಬಂಧಿತ ವಿದ್ಯಾರ್ಥಿಗಳಿಗೆ ಬ್ಯಾಂಕ್ ಖಾತೆಗೆ ನೇರವಾಗಿ ಖಜಾನೆ-2 ತಂತ್ರಾಂಶದ ಮೂಲಕ ಪಾವತಿಸುವುದು.
ಸಂಬಂಧಿಸಿದ ಸರ್ಕಾರಿ ಆದೇಶಗಳು

​​ಡಿ.​ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ  ನಿಗಮ ಎಂದು ಪುನರ್ ನೇಮಕ ಮಾಡುವ ಕುರಿತು​​
ಹೊಸ ಕೆನೆಪದರ ಮತ್ತು ಭಾರತದ ಸಂವಿಧಾನದ  ಅನುಚ್ಛೇಧ  15(4) ರಂತೆ   ವಿದ್ಯಾ ಸಂಸ್ಥೆ  ಗಳಲ್ಲಿ  ಪ್ರವೇಶ  ಮತ್ತು  ಅನುಚ್ಚೇದ  16(4) ರ ಮೇರೆಗೆ  ನೇಮಕಾತಿಗಳಲ್ಲಿ  ಮೀಸಲಾತಿಗಳು ಆದೇಶ ಕುರಿತು ​
​​​ ಅರಿವು ಶೆಕ್ಷಣಿಕ ಸಾಲ ಯೋಜನೆ​​/ಅಲೆಮಾರಿ ಅರೆ ಅಲೆಮಾರಿ   ಜನಾಂಗದವರಿಗೆ  ​​ ನೀಡುವ ಅರಿವು ಶೈಕ್ಷಣಿಕ ಸಾಲ​
ಚೈತನ್ಯ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ​
ಸಬ್ಸಿಡಿ ಮತ್ತು ಮಾರ್ಜಿನ ಹಣ ಸಾಲ​
ಅಲೆಮಾರಿ/ಅರೆ ಅಲೆಮಾರಿ ಜನಾಂಗದ ಭೂ ಖರೀದಿ ಯೋಜನೆ​
ಸಾಂಪ್ರದಾಯಕ/ಪುನಶ್ಚೇತನ ಯೋಜನೆ ​
​ ಕಿರುಸಾಲ ಯೋಜನೆ​​​​​​
​​​ ​ಗಂಗಾ ಕಲ್ಯಾಣ ಯೋಜನೆ​
 ​ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ್ತ ವ್ಯಾಸಂಗಕ್ಕೆ ಬಡ್ಡಿರಹಿತ ಸಾಲ ಯೋಜನೆ​
ಕುರಿ ಸಾಕಾಣಿಕೆ ,ಕಂಬಳಿ ನೇಕಾರರಿಗೆ ಸಾಲ ​
 ​ ಕುಂಬಾರಿಕೆಯ ಕಲಾತ್ಮಕ ಉತ್ಪನಗಳ ತಯಾರಿಕೆಗೆ ಹಾಗು ಕೌಶಲ್ಯತೆ​
 ​ ​​​ರಾಷ್ಟೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ(NBCFDC)​
 ​ಫಲಾನುಭವಿಗಳನ್ನು ಆಯ್ಕೆ ಮಾಡಲು ಸಮಿತಿ​
 ​ಧೋಭಿ ಸವಿತಾ ಸಮಾಜ ಮತ್ತು ತಿಗಳ,ಉಪ್ಪಾರ,ಮಡಿವಾಳ,ಕುಂಬಾರ,ಮೂರ್ತೇದಾರ ಇತ್ಯಾದಿ  ಸಮುದಾಯ​​
 ​ಹಿಂದುಳಿದ ವರ್ಗಗಳ ವಿದ್ಯಾವಂತ ನಿರುದ್ಯೋಗಿ ಯುವಕರ ಆರ್ಥಿಕ ಸಶಕ್ತಿಕರಣಕ್ಕಾಗಿ ಯುವಶಕ್ತಿ ಸ್ವಸಹಾಯ ಗುಂಪುಗಳಿಗೆ ಸೌಲಭ್ಯ​​
 ​ನಿಗಮದ ವ್ಯವಸ್ಥಾಪಕ ನಿರ್ದೇಶಕರ ನೇಮಕಾತಿ ಆದೇಶ​​​
 ​ಸಾಂಪ್ರದಾಯಕ ವೃತ್ತಿದಾರರ ಉತ್ಪನ್ನ ಗಳಿಗೆ ಮಾರುಕಟ್ಟೆ ಒದಗಿಸಲು ಹಾಗು ಮಾರುಕಟ್ಟೆ ಜಾಲ  ಕುರಿತು ​ ​
 ​ ಸಾರಾಯಿ ಮಾರಾಟದಲ್ಲಿ ತೊಡಗಿದ್ದು ಸಾರಾಯಿ ನಿಷೇದ ದಿಂದ ನಿರುದ್ಯೋಗಿಗಳಾದವರಿಗೆ ಪುನರ್ವಸತಿ ಕಲ್ಪಿಸಲು ಆರ್ಥಿಕ ಸೌಲಭ್ಯ​ ​ ​
 ​ ​ಹಿಂದುಳಿದ ವರ್ಗಗಳಿಗೆ ಸೇರಿದ ಜನರಿಗೆ ವರ್ಗವಾರು ಮೀಸಲಾತಿ ನೀಡುವ ಬಗ್ಗೆ ​​​​​ ​ ​
 ​ದಿನಾಂಕ13.05.2013ರವರೆಗೆ ಮಂಜೂರು ಮಾಡಿರುವ ಸಾಲದಲ್ಲಿ ವಸೂಲಾತಿಗೆ ಬಾಕಿ ಇರುವ ಅಸಲು ಮತ್ತು ಬಡ್ಡಿಯನ್ನು ಮನ್ನಾ ಮಾಡುವ ಬಗ್ಗೆ ​ ​​​​​ ​ ​
 ​ಡಿ. ದೇವರಾಜ ಅರಸು  ಹಿಂದುಳಿದ ವರ್ಗಗಳ  ಅಭಿವೃದ್ದಿ  ನಿಗಮದಿಂದ ಅನುಷ್ಟಾನ  ಗೊಳಿಸುತ್ತಿರುವ  ಯೋಜನೆಗಳಲ್ಲಿ  1​.೦೦ ಲಕ್ಷ  ರೂ ಗಳವರೆಗಿನ    ಸಾಲಕ್ಕೆ ಫಲಾನುಭವಿ/  ಜಾಮಿನುದಾರರಿಂದ  ಸ್ಥಿರಾಸ್ತಿ  ಆಧಾರ  ಮಾಡುವ  ಷರತ್ತಿನ  ಬಗ್ಗೆ​
 ​Certificate ​​of Incorporation UPPARA DEVELOPEMNT CORPORATION LIMITED
 ​Certificate ​​of Incorporation AMBIGARA CHOWDAIAH CORPORATION LIMITED
 ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರ ನಾಮನಿರ್ದೇಶನ ಕುರಿತು ​​
 ಉಪ್ಪಾರ ​ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರ ನಾಮನಿರ್ದೇಶನ ಕುರಿತು ​​
​​​​​​​​​​​​​​​​​​​​​​​​​​​​​                                      ​​​​​​​​​​​​​​​​​​​​​​​​​​​​​​​​​​​​​​​​​​​​​
​​
​​​ ​​​​​​​​​​​​​​​​​​​​​​​​​​​​​​​​​​​ಕ್ರ.ಸಂ 
ಸರ್ಕಾರಿ ಆದೇಶ ಸಂಖ್ಯೆ
ದಿನಾಂಕ

1
ಕರ್ನಾಟಕ ಅಭಿವೃದ್ದಿ ವರ್ಗಗಳ ಅಭಿವೃದ್ದಿ ನಿಗಮವನ್ನು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಎಂದು ಪುನರ್ ನೇಮಕ ಮಾಡುವ ಕುರಿತು .​
ಸಕಇ 349ಬಿಎಂಎಸ್​ 2005,ಬೆಂಗಳೂರು26-08-2005
2
ಮಾರ್ಜಿನ ಹಣ  2೦%  ರೂ1.೦೦ ಲಕ್ಷಗಳ  ವರೆಗೆ ಹೆಚ್ಚಿಸುವ  ಬಗ್ಗೆ ​
ಸಕಇ 82  ಬಿಸಿಎ 98,ಬೆಂಗಳೂರು​​​​​​29-12-98
3​
ಹಿಂವಕ 361 ಬಿಎಂಎಸ್ 2013 ಬೆಂಗಳೂರು31-08-2013
4
ಸಕಇ 198  ಬಿಎಂಎಸ್2011,ಬೆಂಗಳೂರು19-07-2011
5ಸಕಇ 378  ಬಿಎಂಎಸ್2014,ಬೆಂಗಳೂರು05-09-2014
6
7 ಹಿಂವಕ 507 ಬಿಎಂಎಸ್ 2013 ಬೆಂಗಳೂರು31-08-2013
8 8.2. ​ ​ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಅನುಷ್ಟಾನಗೊಳಿಸುವ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ್ತ ವ್ಯಾಸಂಗಕ್ಕೆ ಬಡ್ಡಿರಹಿತ ಸಾಲ ಯೋಜನೆಗಳಲ್ಲಿ ನಿಗದಿಪಡಿಸಿದ ಫಲಾನುಭವಿಗಳ ​ವಾರ್ಷಿಕ ಆದಾಯದ ಮಿತಿಯನ್ನು ಹೆಚ್ಚಿಸುವ ಕುರಿತು ​​

​ 127    ಬಿಎಂಎಸ್ 2010,
ಬೆಂಗಳೂರು


ಬಿಸಿಡಬ್ಲ್ಯೂ 814 ಬಿಎಂಎಸ್  2014,
ಬೆಂಗಳೂರು,
ದಿನಾಂಕ​:17.03.2015
11.08.2010




17.03.2015
​ 




​​
​​​
9 ಸಕಇ 125  ಬಿಎಂಎಸ್2010,ಬೆಂಗಳೂರು14/06/2010
10 ಹಿಂವಕ 497 ಬಿಎಂಎಸ್ 2013 ಬೆಂಗಳೂರು31.08.2013
11 ಹಿಂವಕ 648 ಬಿಎಂಎಸ್ 2014 ಬೆಂಗಳೂರು15/11/2014
12 ಹಿಂವಕ 31ಸಮನ್ವಯ 2013,ಬೆಂಗಳೂರು25/02/2013
13 ​​ಬಿಸಿಡಬ್ಲ್ಯೂ 525  ಬಿಎಂಎಸ್ 2012
ಬೆಂಗಳೂರು
25-05-2013
14 ಸಕಇ 573 ಬಿಸಿಎ95,ಬೆಂಗಳೂರು23-02-1996
15 ಸಕಇ 221 ಬಿಸಿಎ 2008 ,ಬೆಂಗಳೂರು02-01-2009
16 ಸಕಇ/36/ ಬಿಸಿಎ/ 2012 ,ಬೆಂಗಳೂರು12.04.2012
17 ಸಕಇ 82 ಎಸಎಸಿ95, ಬೆಂಗಳೂರು03-01-96
18 ಸಕಇ ಎಸಎಸಡಿ95, ಬೆಂಗಳೂರು15-5-96
19 ಸಕಇ 46 ಎಸಡಿಸಿ 99, ಬೆಂಗಳೂರು7-10-1999
20 ಸಕಇ:170 ಎಸಡಿಸಿ 0122-3-2002
21 ಸಕಇ 152 ಎಸಡಿಸಿ 02 ಬೆಂಗಳೂರು16-06-06
22 ಹಿಂವಕ 403 ಬಿಎಂಎಸ್ 2013 ಬೆಂಗಳೂರು31-08-2013
23 ಹಿಂವಕ 649 ಬಿಎಂಎಸ್ 2013 ಬೆಂಗಳೂರು17-12-2013
24 ಬಿಸಿಡಬ್ಲ್ಯೂ 253  ಬಿಎಂಎಸ್ 2014
ಬೆಂಗಳೂರು 
24-05-2014
25 ಸಕಇ 48 ಎಸಡಿಸಿ 2008 ಬೆಂಗಳೂರು12.11.2010
26 ಬಿಸಿಡಬ್ಲ್ಯೂ 374  ಬಿಎಂಎಸ್ 2013
15.05.2013
27 ಹಿಂವಕ   262   ಬಿಸಿಎ 2015
29.07.2015
28 ಹಿಂವಕ   858   ಬಿಎಂಎಸ್ 2014
11.03.2015
29 ಹಿಂವಕ   858   ಬಿಎಂಎಸ್ 2014
11.03.2015
30
ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಸಾಂಪ್ರದಾಯಕ ವೃತ್ತಿದಾರರ ಉತ್ಪನ್ನ ಗಳಿಗೆ ಮಾರುಕಟ್ಟೆ ಒದಗಿಸಲು ಹಾಗು ಮಾರುಕಟ್ಟೆ ಜಾಲ ಏರ್ಪಡಿಸಲು ಗ್ರಾಮ ಪಂಚಾಯತ್ ಹಾಗು ಪಟ್ಟಣ ಪಂಚಾಯತ್ ಪ್ರದೇಶಗಳಲ್ಲಿ ಅಂದಾಜು 1.5 ಲಕ್ಷ ರೂ ಗಳ ವೆಚ್ಚದಲ್ಲಿ ಮಳಿಗೆ ಸ್ಥಾಪನೆಗೆ ವಾರ್ಷಿಕ ಶೇ.2 ರ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡಿ ಸೌಲಭ್ಯ ಒದಗಿಸಲು ರೂಪಿಸಲಾದ ಕಾರ್ಯಕ್ರಮದ ನಿಯಮ ಮತ್ತು ಮಾರ್ಗ ಸೂಚಿಗಳು ​​
ಹಿಂವಕ   467   ಬಿಎಂಎಸ್ 201505-08-2015
31
ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಅನುಷ್ಟಾನ ಗೊಳಿಸುತ್ತಿರುವ ಹಿಂದುಳಿದ ವರ್ಗಗಳ ಜನರು ಸಾಂಪ್ರದಾಯಕ ವೃತಿ ಗಳಾದ ಧೋಭಿ ಸವಿತಾ ಸಮಾಜ ಮತ್ತು ತಿಗಳ ಸಮುದಾಯಗಳಿಗೆ ಸೇರಿದ ಜನರ ವೃತ್ತಿ ಕೌಶಲ್ಯ ಗಳನ್ನು ಉನ್ನತೀಕರಿಸಲು ಹಾಗು ಆಧುನಿಕ ಉಪಕರಣಗಳನ್ನು ಕೊಳ್ಳಲು ೨ ಲಕ್ಷ ರೂ ಗಳವರೆಗೆ ವಾರ್ಷಿಕ ಶೇ ೨ ರ ಬಡ್ಡಿ ದರದಲ್ಲಿ ಸಾಲ ಮತ್ತು ಸಹಾಯ ಧನ ನಿಡುವ ಕುರಿತು ​​
ಹಿಂವಕ   858   ಬಿಎಂಎಸ್ 201411-03-2015
32
ಹಿಂವಕ   470 ಬಿಎಂಎಸ್ 201431-08-2015
33
ಸಕ ಇ162  ಎಸ್ ಡಿ ಸಿ​2015
ಸಕ ಇ162  ಎಸ್ ಡಿ ಸಿ​2015(ಭಾ)  ಬೆಂಗಳೂರು  
ದಿನಾಂಕ​:04/07/2016
09-09-2015
34
ಹಿಂವಕ457  ಬಿಎಂಎಸ್​​201529-10-2015
35
ಬಿಸಿಡಬ್ಲ್ಯೂ 374  ಬಿಎಂಎಸ್ 20156-10-2015
36
ಎಸಡಿಸಿ20-10-2015 ​ 

37
15-05-2013 ​​ 
38
04-12-2015 ​​ 
39
03-12-2015 ​​ 
40
21-12-2015 ​​ 
41
ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಅನುಷ್ಟಾನ ಗೊಳಿಸುತ್ತಿರುವ ಹಿಂದುಳಿದ ವರ್ಗಗಳ ಕುಂಬಾರಿಕೆಯ ಕಲಾತ್ಮಕ ಉತ್ಪನಗಳ ತಯಾರಿಕೆಗೆ ಹಾಗು ಕೌಶಲ್ಯತೆ ಹೆಚ್ಚಿಸಲು ,ಕುಂಬಾರರು ಹಾಗು ಕುಂಬಾರಿಕೆ ಸಂಬಂಧದ ವೃತ್ತಿ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕ್ಲಸ್ಟರ್ ಗಳನ್ನು ಗುರುತಿಸಿ ಕುಂಬಾರ ವೃತ್ತಿ ಸಮಾಜದ ಫಲಾಕಾಂಕ್ಷಿ ಗಳಿಗೆ ಸೌಲಭ್ಯ ಒದಗಿಸುವ ಬಗ್ಗೆ ​
​559  ಬಿಎಂಎಸ್ 2015​ 21-12-2015 ​​                         Download​​ ​ 
42
​567  ಬಿಎಂಎಸ್ 2015​ 30-12-2015 ​​ 
43
​1274ಬಿಎಂಎಸ್ 2015​ 1​​​-12-2015 ​​ 
44
​ Revision Income Ceiling for NBCFDC

31-8-2015 ​​ 
45
​ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಅನುಷ್ಟಾನ ಗೊಳಿಸುತ್ತಿರುವ ಯೋಜನೆಗಳಲ್ಲಿ 1​.೦೦ ಲಕ್ಷ ರೂ ಗಳವರೆಗಿನ ಸಾಲಕ್ಕೆ ಫಲಾನುಭವಿ/ ಜಾಮಿನುದಾರರಿಂದ ಸ್ಥಿರಾಸ್ತಿ ಆಧಾರ ಮಾಡುವ ಷರತ್ತಿನ ಬಗ್ಗೆ
ಬಿಸಿಡಬ್ಲ್ಯೂ1246 ಬಿಎಂಎಸ್ 201510-3-2016 ​​ 
46

ಮಡಿವಾಳ ,ಸವಿತಾ ಸಮಾಜ , ತಿಗಳ, ಕುಂಬಾರ, ಹಾಗು ಉಪ್ಪಾರ , ಸಮುದಾಯಗಳ ಅಭಿವೃದ್ಧಿಗಾಗಿ
ತಲಾ ರೂ 1೦ ಕೋಟಿ ಗಳಂತೆ ರೂ 50ಕೋಟಿಗಳ ಅನುದಾನದಲ್ಲಿ ಯೋಜನೆಗಳನ್ನು ಅನುಷ್ಟಾನ ಗೊಳಿ ವ ಕುರಿತು 
 

ಬಿಸಿಡಬ್ಲ್ಯೂ365 ಬಿಎಂಎಸ್ ​ 2016​​
ಬೆಂಗಳೂರು 
3-9-2016 ​​ 
47

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ  ಅಧಿಕಾರೇತರ  ನಿರ್ದೇಶಕರುಗಳನ್ನು 
ವಿಧಾನ  ಸಭಾ ಕ್ಷೇತ್ರದ  ಫಲಾನುಭವಿಗಳ   ಆಯ್ಕೆ ಸಮಿತಿಗೆ  ವಿಶೇಷ  ಆಹ್ವಾನಿತ  ಸದಸ್ಯ ರನ್ನಾಗಿ ನೇಮಕ ಮಾಡುವ ಕುರಿತು ​​
ಹಿಂವಕ 151 ಬಿಸಿಎ ​​​2016
ಬೆಂಗಳೂರು  
18-10-2016 ​​ 
48

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ  ದಿಂದ  ಹಿಂದುಳಿದ  ವರ್ಗಗಳ  ಜನರ 
ಆರ್ಥಿಕಾಭಿವೃದ್ಧಿಗಾಗಾಗಿ ಅನುಷ್ಠಾನ ಗೊಳಿಸುತ್ತಿರುವ  ಕಾರ್ಯಕ್ರಮಗಳಲ್ಲಿ   ಫಲಾನುಭವಿಗಳ  ಆಯ್ಕೆ  ಮಾಡಲು  ರಚಿಸಿದ  ಆಯ್ಕೆ ಸಮಿತಿ ಸಭೆ  ನಡೆಸಲು ಹಾಜರಾತಿ   ಕೋರಂ  (Quorum)  ನಿಗದಿ ಪಡಿಸುವ  ಕುರಿತು ​
ಬಿಎಂಎಸ್ ​ 2016​​
ಬೆಂಗಳೂರು 
11-11-2016 ​​ 
49

ಅತಿ  ಹಿಂದುಳಿದ  ಮತ್ತು ಅತ್ಯಂತ  ಹಿಂದುಳಿದ ತಾಲೂಕುಗಳಲ್ಲಿ  ಹಿಂದುಳಿದ ವರ್ಗಗಳ  ವಿದ್ಯಾವಂತ  ನಿರುದ್ಯೋಗಿ 
ಯುವಕರ  ಆರ್ಥಿಕ  ಸಶಕ್ತಿಕರಣಕ್ಕಾಗಿ  ಯುವಶಕ್ತಿ  ಸ್ವಸಹಾಯ  ಗುಂಪುಗಳಿಗೆ  ಸೌಲಭ್ಯ  ಒದಗಿಸುವ ಕುರಿತು ​


ಬಿಎಂಎಸ್ ​ 2016​​
ಬೆಂಗಳೂರು 
01-02-2017 ​​ 
50

ಅತಿ  ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳನ್ನು ಕೊರೆಸಲು ಪಂಪ್ ಸೆಟ್ ಮತ್ತು ಪೂರಕ ಸಾಮಗ್ರಿಗಳ ಸರಬರಾಜು , ಅಳವಡಿಸಿಕೆ ,ವಿದ್ಯುದ್ದಿಕರಣ ಮತ್ತು 3 ನೇ ತಪಾಸಣಾ ಸಂಸ್ಥೆ ಗಳನ್ನು ಗುರುತಿಸಲು ಜಿಲ್ಲಾ ಮಟ್ಟದಲ್ಲಿ ಟೆಂಡರ್ ಕರೆಯುವ ಕುರಿತು ​​​ 


ಸಕಇ 398 ಎಸಡಿಸಿ 2016ಬೆಂಗಳೂರು
04.01.2017
​​ 
52

ಡಿ ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಅನುಷ್ಟಾನಗೊಳಿಸುತ್ತಿರುವ  ವಿದೇಶಿ  ವಿಶ್ವ 
ವಿದ್ಯಾಲಯದಲ್ಲಿ   ಉನ್ನತ  ವ್ಯಾಸಂಗಕ್ಕೆ  ಪ್ರವೇಶ  ಪಡೆಯುವ  ಹಿಂದುಳಿದ  ವರ್ಗಗಳ ಅಭ್ಯರ್ಥಿಗಳಿಗೆ  ಬಡ್ಡಿ ರಹಿತ  ಸಾಲ ಯೋಜನೆಯ  ಪರಿಷ್ಕೃತ  ಮಾರ್ಗ ಸೂಚಿಗೆ ಅನುಮೋದನೆ  ನೀಡುವ ಕುರಿತು ​



ಬಿಸಿಡಬ್ಲ್ಯೂ134ಬಿಎಂಎಸ್ ​ 2017
ಬೆಂಗಳೂರು 
12.05.2017
​​ 
 ಸ .​ವಿಷಯಆದೇಶ ಸಂಖ್ಯೆಆದೇಶಗಳು
​53​ 
ವಾಹನ ಚಾಲನ ಪರವಾನಗಿಯನ್ನು  ಹೊಂದಿರುವ  ಹಿಂದುಳಿದ ವರ್ಗಗಳ 
ನಿರುದ್ಯೋಗಿ  ಯುವಕರಿಗೆ  ಟೂರಿಸ್ಟ್  ಟ್ಯಾಕ್ಸಿಯನ್ನು  ಖರೀದಿಸಿಸಲು  ಸಹಾಯಧನ  ಮಂಜೂರಾತಿ ಬಗ್ಗೆ 
ಬಿಸಿಡಬ್ಲ್ಯೂ388ಬಿಎಂಎಸ್ ​ 2017
ಬೆಂಗಳೂರು 
10-05- 2017
53.1
ವಾಹನ ಚಾಲನ ಪರವಾನಗಿಯನ್ನು  ಹೊಂದಿರುವ  ಹಿಂದುಳಿದ ವರ್ಗಗಳ 
ನಿರುದ್ಯೋಗಿ  ಯುವಕರಿಗೆ  ಟೂರಿಸ್ಟ್  ಟ್ಯಾಕ್ಸಿಯನ್ನು  ಖರೀದಿಸಿಸಲು  ಸಹಾಯಧನ  ಮಂಜೂರಾತಿ ಬಗ್ಗೆ                     (ತಿದ್ದುಪಡಿ ​)
 ​26-08-2017
ಸ. ​ವಿಷಯಆದೇಶ ಸಂಖ್ಯೆಆದೇಶಗಳು
​54​ 
ಹಿಂದುಳಿದ   ವರ್ಗಗಳ  ವಿಧವೆಯರಿಗೆ  ಆರ್ಥಿಕ  ಚಟುವಟಿಕೆ  ಕೈಗೊಳ್ಳಲು  ಸಾಲ  ಮತ್ತು ಸಹಾಯಧನ  ಮಂಜೂರಾತಿ ಕುರಿತು 
ಬಿಸಿಡಬ್ಲ್ಯೂ387ಬಿಎಂಎಸ್ ​ 2017
ಬೆಂಗಳೂರು 
10-05- 2017
55 List of Nomadic and Semi nomadic Tribes in the state ​
​56​ 
ಸಾರಾಯಿ  ಮಾರಾಟ ನಿಷೇಧದಿಂದ  ಉದ್ಯೋಗ  ಕಳೆದುಕೊಂಡಿರುವ  ಸಾರಾಯಿ  ವೆಂಡರು , ಮೂರ್ತೆದಾರ , ಈಡಿಗ, ಇತ್ಯಾಧಿ ಸಮುದಾಯಗಳು   ಸ್ವಯಂ ಉದ್ಯೋಗ ಕೈಗೊಳ್ಳಲು  ಆರ್ಥಿಕ ನೆರವು ಒದಗಿಸುವ ಬಗ್ಗೆ  
ಬಿಸಿಡಬ್ಲ್ಯೂ457ಬಿಎಂಎಸ್ ​ 2017
ಬೆಂಗಳೂರು 
02-06- 2017
​57​ 
ಮಡಿವಾಳ , ಸವಿತಾ ಸಮಾಜ, ತಿಗಳ , ಕುಂಬಾರ  ಸಮುದಾಯಗಳ 
ಅಭಿವೃದ್ಧಿಗೆ  ರೂ.60.00 ಕೋಟಿಗಳ ಅನುದಾನದಲ್ಲಿ  ಕಾರ್ಯಕ್ರಮವನ್ನು  ಅನುಷ್ಠಾನಗೊಳಿಸುವ ಬಗ್ಗೆ ​
 
ಬಿಸಿಡಬ್ಲ್ಯೂ456ಬಿಎಂಎಸ್ ​ 2017
ಬೆಂಗಳೂರು 
02-06- 2017



08/12/2017
58 List of Nomadic and Semi nomadic Tribes in the state ​
59
ವಿಧಾನ ಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಫಲಾನುಭವಿಗಳ  ಆಯ್ಕೆಗೆ ರಚಿಸರುವ ಆಯ್ಕೆ ಸಮಿತಿಗೆ ಮಾನ್ಯ ವಿಧಾನ ಸಭಾ ಸದಸ್ಶರು ಇಲ್ಲದ ಕಾರಣ ಸಮಯದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳನ್ನು ಸಮಿತಿಯ  ಅಧ್ಯಕ್ಷರನ್ನಾಗಿ ನೇಮಕ ಮಾಡುವ ಬಗ್ಗೆ ​
60ಡಿ ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಅನುಷ್ಟಾನಗೊಳಿಸುತ್ತಿರುವ  ವಿವಿಧ ಯೋಜನೆಗಳಲ್ಲಿ 2018-19 ನೇ ಸಾಲಿಗೆ ಫಲಾನುಭವಿಗಳನ್ನು  ಆಯ್ಕೆ ಮಾಡುವ ಕುರಿತು ಬಿಸಿಡಬ್ಲ್ಯೂ890ಬಿಎಂಎಸ್ ​ 2018
ಬೆಂಗಳೂರು 
27-08- 2018  
61
ಹಿಂದುಳಿದ  ವರ್ಗಗಳ ನಿರುದ್ಯೋಗಿ  ಪದವೀಧರರ ಸ್ವಯಂಉದ್ಯೋಗಕ್ಕೆ  ರೂ 10 ಲಕ್ಷಗಳ  ವರೆಗೆ ಸಾಲ  ಸಾಲ ಸೌಲಭ್ಯ ವನ್ನು  ವಾರ್ಷಿಕ  ಶೇ 6  ರ ಬಡ್ಡಿ ದರದಲ್ಲಿ  ಒದಗಿಸುವ  ಯೋಜನೆ ಮಂಜೂರಾತಿ ಕುರಿತು 

 
ಬಿಸಿಡಬ್ಲ್ಯೂ700ಬಿಎಂಎಸ್ 
ಬೆಂಗಳೂರು 
22-09-2018  
59
ವಿಧಾನ ಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಫಲಾನುಭವಿಗಳ  ಆಯ್ಕೆಗೆ ರಚಿಸರುವ ಆಯ್ಕೆ ಸಮಿತಿಗೆ ಮಾನ್ಯ ವಿಧಾನ ಸಭಾ ಸದಸ್ಶರು ಇಲ್ಲದ ಕಾರಣ ಸಮಯದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳನ್ನು ಸಮಿತಿಯ  ಅಧ್ಯಕ್ಷರನ್ನಾಗಿ ನೇಮಕ ಮಾಡುವ ಬಗ್ಗೆ ​



​​

​​