Followers

Saturday, December 14, 2024

pm kisan mandhan yojana: ಈ ಸರ್ಕಾರಿ ಯೋಜನೆ ಮೂಲಕ ಪ್ರತಿ ತಿಂಗಳು 3000 ರೂ. ಪಿಂಚಣಿ ಪಡೆಯಿರಿ


pm kisan mandhan yojana: ಈ ಸರ್ಕಾರಿ ಯೋಜನೆ ಮೂಲಕ ಪ್ರತಿ ತಿಂಗಳು 3000 ರೂ. ಪಿಂಚಣಿ ಪಡೆಯಿರಿ


ಕೇಂದ್ರ ಸರ್ಕಾರವು ರೈತರು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಅನೇಕ ಯೋಜನೆಗಳನ್ನು ಪ್ರಾರಂಭಿಸುತ್ತದೆ. ಇನ್ನು ಕೇಂದ್ರ ಸರ್ಕಾರವು ಈಗಾಗಲೇ ರೈತರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳಲ್ಲಿ ಪಿಎಂ ಕಿಸಾನ್‌ ಮಾನ್-ಧನ್ ಯೋಜನೆ ಕೂಡ ಒಂದಾಗಿದೆ.


ಇದರ ಪ್ರಕಾರ ರೈತರು ಪ್ರತಿ ತಿಂಗಳು 55 ರೂ ಠೇವಣಿ ಮಾಡಬೇಕಿದ್ದು, ಬಳಿಕ ವ್ಯಕ್ತಿಗೆ 60 ವರ್ಷ ತುಂಬಿದ ಬಳಿಕ ಪ್ರತೀ ತಿಂಗಳು 3000 ಸಾವಿರ ರೂ. ಮಾಸಿಕ ಪಿಂಚಣಿ ವ್ಯವಸ್ಥೆ ಪಡೆಯಲು ಅರ್ಹರಾಗುತ್ತಾರೆ.


ಯಾವ ಆರಂಭವಾಗಿದ್ದ ಯೋಜನೆ


ಪ್ರಧಾನ ಮಂತ್ರಿ ಕಿಸಾನ್ ಮಾನ್-ಧನ್ ಯೋಜನೆ (PMKMY) ಅನ್ನು 12 ಸೆಪ್ಟೆಂಬರ್ 2019 ರಂದು ಪ್ರಾರಂಭಿಸಲಾಗಿತ್ತು. ಬಡ ರೈತರಿಗೆ ವೃದ್ಧಾಪ್ಯದಲ್ಲಿ ನೆರವಾಗುವುದು ಇದರ ಮುಖ್ಯ ಉದ್ದೇಶವಾಗಿದೆ. ಅವರ ಖಾತೆಗೆ ಪ್ರತಿ ತಿಂಗಳು ನಿಗದಿತ ಹಣ ಬರುತ್ತದೆ. ಯಾವುದೇ ಸಣ್ಣ ಮತ್ತು ಅತಿಸಣ್ಣ ರೈತರು ಇದರ ಪ್ರಯೋಜನ ಪಡೆಯಬಹುದಾಗಿದೆ. ಇನ್ನು ಈ ಯೋಜನೆಯ ಲಾಭ ಪಡೆಯಲು ರೈತರು ಪ್ರತೀ ತಿಂಗಳು 55 ರೂಪಾಯಿಗಳನ್ನು ಠೇವಣಿ ಮಾಡಬೇಕಾಗುತ್ತದೆ. ಅದೇ ಸಮಯದಲ್ಲಿ ಸರ್ಕಾರ ಕೂಡ ಅಷ್ಟೇ ಮೊತ್ತವನ್ನು ಜೊತೆಯಾಗಿ ಠೇವಣಿ ಮಾಡುತ್ತಾರೆ. ಹೀಗೆ ಒಟ್ಟಾಗಿ ಎರಡೂ ಕಡೆಗಳಿಂದ ಒಟ್ಟು 110 ರೂ. ಮೊತ್ತವು ಠೇವಣಿ ಮಾಡಿದಂತಾಗುತ್ತದೆ.


ಯಾರೆಲ್ಲಾ ಇದರ ಲಾಭ ಪಡೆಯಬಹುದು?


ಇನ್ನು ಈ ಯೋಜನೆಯ ಲಾಭವನ್ನು ಸರ್ಕಾರವು ಹಲವು ಇತರೆ ವಿಭಾಗಗಳಿಗೂ ವಿಸ್ತರಿಸಿಕೊಂಡಿದೆ. ಅಂದರೆ ಚಾಲಕ ರಿಕ್ಷಾ ಎಳೆಯುವವನು, ಚಮ್ಮಾರ, ಟೈಲರ್, ಕಾರ್ಮಿಕ, ಮನೆ ಕೆಲಸಗಾರರು ಕೂಡ ಇದರ ಲಾಭ ಪಡೆದುಕೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ.


ಒಂದು ವೇಳೆ ಮರಣ ಸಂಭವಿಸಿದರೆ?

ಒಂದು ವೇಳೆ ಮರಣ ಸಂಭವಿಸಿದರೆ?


ಇನ್ನು ಒಂದು ವೇಳೆ ಫಲಾನುಭವಿಯು ಒಂದು ವೇಳೆ ಹಣ ಕಟ್ಟುತ್ತಿರುವ ಮಧ್ಯದಲ್ಲೇ ಮರಣ ಸಂಭವಿಸಿದರೆ ಏನಾಗುತ್ತದೆ ಎಂಬುದು ಸಹಜವಾಗಿಯೇ ಎಲ್ಲರ ಪ್ರಶ್ನೆಯಾಗಿದೆ. ಆದರೆ ಇದಕ್ಕೆ ಸರ್ಕಾರ ತನ್ನದೇ ಆದ ಸರಳ ನಿಯಮವನ್ನು ರೂಪಿಸಿಕೊಂಡಿದೆ. ಒಂದು ವೇಳೆ ಯೋಜನೆಯ ನಡುವಿನಲ್ಲೇ ಫಲಾನುಭವಿ ಮರಣ ಹೊಂದಿದರೆ ಆತನ ಪತ್ನಿಯು ಯೋಜನೆಗೆ ಹಣ ಕಟ್ಟುವ ಮೂಲಕ ಯೋಜನೆಯನ್ನು ಮುಂದುವರೆಸಬಹುದು. ಆದರೆ ಒಂದು ವೇಳೆ ಪತ್ನಿಯು ಯೋಜನೆಯಲ್ಲಿ ಮುಂದುವರೆಯಲು ಇಚ್ಚಿಸದಿದ್ದರೆ ಈಗಾಗಲೇ ಕಟ್ಟಿದ ಹಣವನ್ನು ಬಡ್ಡಿ ಸಮೇತ ಮರಳಿಸಲಾಗುತ್ತದೆ.


ಎಷ್ಟು ಹಣವನ್ನು ಠೇವಣಿ ಇಡಬೇಕು?


ಒಂದು ವೇಳೆ ನೀವು ಫಲಾನುಭವಿ 18 ವರ್ಷ ವಯಸ್ಸಿವರಾಗಿದ್ದರೆ ಪ್ರತೀ ತಿಂಗಳು 55 ರೂ.ಗಳನ್ನು ಠೇವಣಿ ಇಡಬೇಕಾಗುತ್ತದೆ. ಅದೇ ರೀತಿ ಫಲಾನುಭವಿ 29 ವರ್ಷ ವಯಸ್ಸಿನವರಾಗಿದ್ದರೆ 100 ರೂ.ಗಳನ್ನು ಠೇವಣಿ ಇಡಬೇಕಾಗುತ್ತದೆ. ಇನ್ನು ಫಲಾನುಭವಿ 40 ವರ್ಷದವನಾಗಿದ್ದರೆ ವ್ಯಕ್ತಿಯು ಪ್ರತೀ ತಿಂಗಳು 200 ರೂ. ಠೇವಣಿ ಇಡಬೇಕು ಎಂದು ಸರ್ಕಾರವು ನಿಯಮ ರೂಪಿಸಿದೆ.


ಇನ್ನು ಇಲ್ಲಿ ಒಂದು ವಿಷಯವನ್ನು ಎಲ್ಲರೂ ತಿಳಿದುಕೊಳ್ಳಬೇಕಿದೆ. ನಾವು ಎಷ್ಟು ವರ್ಷ ವಯಸ್ಸಿನವರಾಗಿದ್ದು, ಒಂದು ನಿರ್ದಿಷ್ಟ ಮೊತ್ತವನ್ನು ಪಾವತಿಸುತ್ತಿದ್ದರೆ ಸರ್ಕಾರ ಕೂಡ ಅಷ್ಟೇ ಮೊತ್ತವನ್ನು ಠೇವಣಿ ಇಡುತ್ತದೆ. ಇನ್ನು ವ್ಯಕ್ತಿಯು 18ರಿಂದ 40ರ ಒಳಗಿನ ವಯಸ್ಸಿನರಾಗಬೇಕಿದ್ದು, ಆದಾಯ ತೆರಿಗೆ ಪಾವತಿದಾರನಾಗಿರಬಾರದು. ಮೊಬೈಲ್ ಫೋನ್, ಆಧಾರ್ ಸಂಖ್ಯೆ ಮತ್ತು ಉಳಿತಾಯ ಖಾತೆಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಅಲ್ಲದೆ ಅರ್ಜಿದಾರರ ಮಾಸಿಕ ಆದಾಯ ರೂ 15,000 ಮೀರಬಾರದು.


ಯಾವೆಲ್ಲಾ ದಾಖಲೆಗಳ ಅಗತ್ಯವಿದೆ?


ಸಾಮಾನ್ಯವಾಗಿ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಹಲವು ದಾಖಲೆಗಳನ್ನು ನೀಡಬೇಕಾಗಿರುವುದು ಸಾಮಾನ್ಯ ಸಂಗತಿ. ಅದೇ ರೀತಿ ಈ ಯೋಜನೆಗೂ ಇದು ಅನ್ವಯವಾಗುತ್ತದೆ. ಇನ್ನು ಯೋಜನೆಯ ಲಾಭ ಪಡೆಯಲು ಆಧಾರ್ ಕಾರ್ಡ್, ಗುರುತಿನ ಚೀಟಿ, ಬ್ಯಾಂಕ್ ಖಾತೆ ಪಾಸ್ಬುಕ್, ಮೇಲ್‌ ಐಡಿ, ಮೊಬೈಲ್ ಸಂಖ್ಯೆ, ಪಾಸ್ಪೋರ್ಟ್ ಗಾತ್ರದ ಫೋಟೋವನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ.


ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ?


ಈ ಯೋಜನೆಯ ಲಾಭ ಪಡೆಯಲು maandhan.in ವೆಬ್‌ಸೈಟ್‌ಗೆ ಲಾಗಿನ್‌ ಆಗಬೇಕು. ಅಲ್ಲಿ ಸ್ವಯಂ ನೋಂದಣಿ ಆಯ್ಕೆಯನ್ನು ಕ್ಲಿಕ್‌ ಮಾಡಿ, ಇದೇ ಸಮಯದಲ್ಲಿ ಮೊಬೈಲ್‌ ಬಂದ ಒಟಿಪಿ ನಮೂದಿಸಿ ನೊಂದಾಯಿಸಬಹುದು. ಬಳಿಕ ಆನ್‌ ಲೈನ್‌ ಫಾರ್ಮ್‌ ಅನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ, ಸಲ್ಲಿಸಬೇಕು.



ಕರ್ನಾಟಕದಲ್ಲಿರುವ ವಸತಿ ರಹಿತರಿಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಜಾರಿಗೆ ತಂದಿವೆ ವಿವಿಧ ಯೋಜನೆಗಳು: ಅರ್ಜಿ ಸಲ್ಲಿಸೋದು ಹೇಗೆ?


ಕರ್ನಾಟಕದಲ್ಲಿರುವ ವಸತಿ ರಹಿತರಿಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಜಾರಿಗೆ ತಂದಿವೆ ವಿವಿಧ ಯೋಜನೆಗಳು: ಅರ್ಜಿ ಸಲ್ಲಿಸೋದು ಹೇಗೆ?


ಪ್ರತಿಯೊಬ್ಬರಿಗೂ ಸ್ವಂತ ಸೂರು ಇರಬೇಕೆಂಬ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ವಸತಿ ಯೋಜನೆಗಳನ್ನು ಜಾರಿಗೆ ತಂದಿವೆ. ಈ ಯೋಜನೆಗಳ ಅಡಿಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಮನೆ ಇಲ್ಲದ ಅರ್ಹರಿಗೆ ಮನೆಗಳನ್ನು ಕಟ್ಟಿಕೊಳ್ಳಲು ಸರ್ಕಾರ ಅನುದಾನವನ್ನು ನೀಡುತ್ತದೆ.


ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಮಂದಿ ಬಡವರಿ ಈ ಯೋಜನೆಗಳು ಅನುಕೂಲವಾಗಿದ್ದು, ಸ್ವಂತ ಮನೆಯನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗಿದೆ.


ಪ್ರಧಾನ ಮಂತ್ರಿ ಆವಾಸ್ ಯೋಜನೆ, ಡಾ ಬಿ ಆರ್ ಅಂಬೇಡ್ಕರ್ ನಿವಾಸ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆ, ದೇವರಾಜ್ ಅರಸು ವಸತಿ ಯೋಜನೆ, ರಾಜೀವ್ ಗಾಂಧಿ ವಸತಿ ಯೋಜನೆ(ಬಸವ ವಸತಿ ಯೋಜನೆ), ದೇವರಾಜ್ ಅರಸು ವಸತಿ ಯೋಜನೆ ಹಾಗೂ ಡಾ ಬಿ ಆರ್ ಅಂಬೇಡ್ಕರ್ ನಿವಾಸ ಯೋಜನೆ ಹೀಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಪ್ರತಿಯೊಬ್ಬರಿಗೂ ವಸತಿ ಕಲ್ಪಿಸುವ ಹಲವು ಯೋಜನೆಗಳು ಚಾಲ್ತಿಯಲ್ಲಿವೆ.


ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮುಖ್ಯ ಉದ್ದೇಶವೆಂದರೆ ಗ್ರಾಮೀಣ ಭಾಗದ ಕುಟುಂಬಗಳಿಗೆ ಅವರ ಕನಸಿನ ಮನೆ ಕಟ್ಟಿಸಿಕೊಡುವುದಾಗಿದೆ. ಅಷ್ಟೇ ಅಲ್ಲದೆ, ಗ್ರಾಮೀಣ ಪ್ರದೇಶದಲ್ಲಿನ ಜನರಿಗೆ ಮನೆಯ ಜೊತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಮಾಡಲಾಗುತ್ತಿದೆ. ಪಾಳುಬಿದ್ದ ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಮೂಲಭೂತ ಸೌಕರ್ಯವೂ ಈ ಯೋಜನೆಯಲ್ಲಿ ಸೇರಿವೆ.


ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿ ವರ್ಷದ ಬಜೆಟ್ ಗಳಲ್ಲಿ ವಸತಿ ಯೋಜನೆಗಳಿಗಾಗಿಯೇ ಇಂತಿಷ್ಟು ಹಣವನ್ನು ಮೀಸಲಿಡುತ್ತವೆ. ಆಯಾ ವರ್ಷಗಳಲ್ಲಿ ಬಡವರಿಗೆ ಮನೆಗಳನ್ನು ಕಟ್ಟಿಕೊಡುವ ಅಥವಾ ಆರ್ಥಿಕ ನೆರವಿನ ಮೂಲಕ ಬಡವರ ಸ್ವಂತ ಮನೆಯ ಕನಸನ್ನು ನನಸು ಮಾಡುತ್ತಿವೆ.


ವಸತಿ ರಹಿತರು ಮನೆಗಾಗಿ ಅರ್ಜಿ ಸಲ್ಲಿಸುವುದು ಹೇಗೆ?


ರಾಜೀವ್ ಗಾಂಧಿ ವಸತಿ ಯೋಜನೆ


ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ-ಆರ್ ಜಿಆರ್ ಎಚ್ ಸಿಎಲ್ ಯಲ್ಲಿ ವಸತಿ ರಹಿತರು ಮನೆಗಾಗಿ ಅರ್ಜಿ ಸಲ್ಲಿಸಬಹುದು.

ಮೊದಲು ಆರ್ ಜಿಆರ್ ಎಚ್ ಸಿಎಲ್ ವೆಬ್ ಸೈಟ್ ಗೆ ಭೇಟಿ ನೀಡಿ

ನೋಂದಣಿ ಅಥವಾ ಆನ್ ಲೈನ್ ಅಪ್ಲಿಕೇಷನ್ ಮೇಲೆ ಕ್ಲಿಕ್ ಮಾಡಿ

ಹೆಸರು, ಲಿಂಗ, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ ಸೇರಿದಂತೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಮೂದಿಸಿ

ವಿಳಾಸ, ವಾರ್ಷಿಕ ಆದಾಯ ಹಾಗೂ ಆಧಾರ್ ಸಂಖ್ಯೆಯನ್ನು ತಪ್ಪಿದೆ ನಮೂದಿಸಬೇಕು

ಇದಾದ ಬಳಿಕ ನಿಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡಿ

ಸರ್ಕಾರ ವಸತಿ ಯೋಜನೆಯ ಅಡಿಯಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುತ್ತದೆ

ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ)


ಈ ಯೋಜನೆಯ ಅಡಿಯಲ್ಲಿ ಮನೆಯನ್ನು ಪಡೆಯಲು ನಿಮ್ಮ ಪಂಚಾಯಿತಿಗೆ ಭೇಟಿ ನೀಡಿ ಮನೆಗಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.

ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಪಿಎಂಎವೈ ಯೋಜನೆಯ ಅಡಿಯಲ್ಲಿ ಮನೆ ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡಲಾಗುತ್ತದೆ

ಕರ್ನಾಟಕ ಸರ್ಕಾರವು ಪಿಎಂಎವೈ ಅಡಿಯಲ್ಲಿ ನಿರ್ಮಿಸಲಾಗುವ ಪ್ರತಿ ಮನೆಗೆ 3.5 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುತ್ತದೆ

Raghavendra M Y

Thursday, December 8, 2022

ಸರ್ಕಾರಿ ನೌಕರರು/ Govrnment Employees

 

ಸರ್ಕಾರಿ ನೌಕರರು/ Govrnment Employees

ಕ್ರಮ ಸಂಖ್ಯೆ

Serial No 

ಹುದ್ಧೆ

Designation

ಗ್ರೂಪ್

Group

Payscale

5ನೇ ವೇತನ ಆಯೋಗ

6ನೇ ವೇತನ ಆಯೋಗ

7ನೇ ವೇತನ ಆಯೋಗ

1

ಆಯುಕ್ತರು

A

 

 

 

 

2

ಜಂಟಿ ನಿರ್ದೇಶಕರು

A

74400-109600

40050-56550

74400-109600

?

3

ಉಪ ನಿರ್ದೇಶಕರು

A

67550-104600

36300-53550

67550-104600

?

4

ಮುಖ್ಯ ಲೆಕ್ಕಾಧಿಕಾರಿಗಳು

A

67550-104600

36300-53550

67550-104600

?

5

ಲೆಕ್ಕಾಧಿಕಾರಿ

A

52650-97100

28100-50100

52650-97100

?

6

ಸಹಾಯಕ  ನಿರ್ದೇಶಕರು/

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು

A

52650-97100

28100-50100

52650-97100

?

7

ಪ್ರಾಶುಪಾಲರು(PETC)

A

52650-97100

28100-50100

52650-97100

?

8

ಸೀನಿಯರ್ ಪ್ರೊಗ್ರಾಮರ್

A

52650-97100

28100-50100

52650-97100

?

 

 

 

 

 

 

 

9

ಪತ್ರಾಂಕಿತ ವ್ಯವಸ್ಥಾಪಕರು/ ತಾಲ್ಲೂಕಾ ಹಿಂದಿಳಿದ ವರ್ಗಗಳ ಕಲ್ಯಾಣಾಧಿಕಾರಿಗಳು

B

43100-83900

22800-43200

43100-83900

?

10

ಸಹಾಯಕ  ನಿರ್ದೇಶಕರು ( ಯೋ.ಸಾಂ)

B

43100-83900

22800-43200

43100-83900

?

11

ಜೂನಿಯರ್ ಪ್ರೊಗ್ರಾಮರ್

B

43100-83900

22800-43200

43100-83900

?

12

ಲೆಕ್ಕ ಅಧೀಕ್ಷಕರು

B

43100-83900

21600-40050

43100-83900

?

 

 

 

 

 

 

 

13

ಕಛೇರಿ ಮೇಲ್ವಿಚಾರಕರು/ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು

C

37900-70850

20000-36300

37900-70850

?

14

ನಿಲಯ ಪಾಲಕರು

C

37900-70850

20000-36300

37900-70850

?

15

ನಿಲಯ  ಮೇಲ್ವಿಚಾರಕರು

C

27650-52650

14550-26700

 

44425-83700

16

ಕಿರಿಯ ಇಂಜಿನಿಯರ್ ( ಸಿವಿಲ್)

C

33450-62600

17650-32000

33450-62600

?

17

ಮಹಿಳಾ  ಕಲ್ಯಾಣ ಕೇಂದ್ರ ಸಂಚಾಲಕರು

C

21400-42000

11600-21000

21400-42000

?

18

ಶೀಘ್ರಾಲಿಪಿಗಾರರು

C

27650-52650

14550-26700

27650-52650

?

19

ಸಾಂಖ್ಯಿಕ ನಿರೀಕ್ಷಕರು

C

27650-52650

14550-26700

27650-52650

?

20

ಪ್ರಥಮ ದರ್ಜೆ ಸಹಾಯಕರು

( ಲೆಕ್ಕಪತ್ರ)

C

27650-52650

14550-26700

27650-52650

?

21

ಆಶ್ರಮ ಶಾಲಾ ಶಿಕ್ಷಕರು

C

23500-47650

12500-24000

23500-47650

?

22

ಹೊಲಿಗೆ ತರಬೇತಿ ಶಿಕ್ಷಕರು  

C

23500-47650

12500-24000

23500-47650

?

23

ದ್ವಿತಿಯ  ದರ್ಜೆ ಸಹಾಯಕರು

( ಲೆಕ್ಕಪತ್ರ)

C

21400-42000

11600-21000

21400-42000

?

24

ಕಿರಿಯ ನಿಲಯ ಮೇಲ್ವಿಚಾರಕರು

C

21400-42000

11600-21000

21400-42000

34100-67600

25

ಬೆರಳಚ್ಚುಗಾರರು

C

21400-42000

11600-21000

21400-42000

?

26

ಡೇಟಾ ಎಂಟ್ರಿ ಆಪರೇಟರ್

C

21400-42000

11600-21000

21400-42000

?

27

ವಾಹನ ಚಾಲಕರು

C

21400-42000

11600-21000

21400-42000

?

 

 

 

 

 

 

 

28

ಅಡುಗೆಯವರು

D

18600-32600

10400-16400

18600-32600

34100-67600

29

ಅಡುಗೆ ಸಹಾಯಕರು

D

17000-28950

9600-14550

17000-28950

27000-46675

30

ರಾತ್ರಿ ಕಾವಲುಗಾರರು

D

17000-28950

9600-14550

17000-28950

27000-46675

31

ಜವಾನರು

D

17000-28950

9600-14550

17000-28950

27000-46675

ಸಾರ್ವಜನಿಕರೇ ಗಮನಿಸಿ : ಡಿ.31 ರೊಳಗೆ ತಪ್ಪದೇ ಈ 4 ಪ್ರಮುಖ ಕೆಲಸಗಳನ್ನ ಮುಗಿಸಿಕೊಳ್ಳಿ.

ಡಿಸೆಂಬರ್ 31 ರ ನಂತರ ಈ ಕೆಲಸಗಳನ್ನು ಮಾಡಲು ನಿಮಗೆ ಇನ್ನೊಂದು ಅವಕಾಶ ಸಿಗುವುದಿಲ್ಲ. ಇಲ್ಲದಿದ್ದರೆ, ನೀವು ಭಾರಿ ದಂಡವನ್ನು ಪಾವತಿಸಬೇಕಾಗಬಹುದು ಅಥವಾ ನಿ...