Followers
Tuesday, January 7, 2025
jila panchayat taluka panchayat chunav ane
ಮಾಹಿತಿಗಾಗಿ
Money: ತೆರಿಗೆ ಇಲ್ಲದೇ 85000 ರೂಪಾಯಿ ಆದಾಯ ಹೀಗೆ ಪಡೆಯಿರಿ!
ಪಿಪಿಎಫ್‌ನಲ್ಲಿ ನಿಮಗೆ 7.1 ಬಡ್ಡಿ ದರ ಸಿಗುತ್ತದೆ. ಇದನ್ನು ತೆರೆಯವುದು ಕೂಡ ಸುಲಭ. ಯಾರಾದರೂ ಕೇವಲ 500 ರೂಪಾಯಿಯೊಂದಿಗೆ ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್‌ನಲ್ಲಿ ಈ ಖಾತೆಯನ್ನು ತೆರೆಯಬಹುದು.
ಈ ಯೋಜನೆಯಲ್ಲಿ ನೀವು ತಿಂಗಳಿಗೆ 85 ಸಾವಿರ ರೂಪಾಯಿ ಬಡ್ಡಿ ಕೂಡ ಗಳಿಸಬಹುದು. ಹೇಗೆ ಅಂತಾ ನೋಡೋ ಮುನ್ನ ಈ ಯೋಜನೆ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.
ಪಿಪಿಎಫ್ ಯೋಜನೆ
ಸಾರ್ವಜನಿಕ ಭವಿಷ್ಯ ನಿಧಿಯು ನಿವೃತ್ತಿ-ಕೇಂದ್ರಿತ ಯೋಜನೆಯಾಗಿದ್ದು, ಹೂಡಿಕೆದಾರರು ತಮ್ಮ ಪೋರ್ಟ್‌ಫೋಲಿಯೊ ವೈವಿಧ್ಯೀಕರಣಕ್ಕಾಗಿ ಬಳಸುತ್ತಾರೆ. ಒಬ್ಬರು ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಬಹುದು. ಇದು ವ್ಯಕ್ತಿಗಳಿಗೆ ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80C ಅಡಿಯಲ್ಲಿ ಖಾತರಿಪಡಿಸಿದ ರಿಟರ್ನ್ಸ್ ಮತ್ತು ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ.
ಸಣ್ಣ ಉಳಿತಾಯ ಯೋಜನೆಯು ವೇತನದಾರರು ಮತ್ತು ಸ್ವಯಂ ಉದ್ಯೋಗಿ ಸೇರಿದಂತೆ ಎಲ್ಲಾ ವ್ಯಕ್ತಿಗಳಿಗೆ ಮುಕ್ತವಾಗಿದೆ. ಅಪ್ರಾಪ್ತ ವಯಸ್ಕರರ ಪೋಷಕರು ಕೂಡ ಮಕ್ಕಳ ಹೆಸರಲ್ಲಿ ಈ ಖಾತೆಯನ್ನು ತೆರೆಯಬಹುದು.
ಪಿಪಿಎಫ್ ಖಾತೆಯ ಮೆಚ್ಯುರಿಟಿ ಅವಧಿ
ಮೆಚುರಿಟಿ ಅವಧಿಯು 15 ವರ್ಷಗಳಾಗಿದ್ದು, 15 ವರ್ಷಗಳ ನಂತರ, ಖಾತೆದಾರರು ತಲಾ 5 ವರ್ಷಗಳ ಅನಿಯಮಿತ ಬ್ಲಾಕ್‌ಗಳಿಗೆ ಖಾತೆಯನ್ನು ವಿಸ್ತರಿಸಬಹುದು.
ಕನಿಷ್ಠ-ಗರಿಷ್ಠ ಹೂಡಿಕೆ
ಈ ಖಾತೆಯನ್ನು ತೆರೆಯುವಾಗ ನೀವು ಕೇವಲ 500 ರೂಪಾಯಿಯಿಂದ ಆರಂಭಿಸಿ, ಗರಿಷ್ಠ 1.5 ಲಕ್ಷ ರೂವರೆಗೆ ಹೂಡಿಕೆ ಮಾಡಬಹುದು.
ತೆರಿಗೆ ಪ್ರಯೋಜನಗಳು
ಪಿಪಿಎಫ್‌ನಲ್ಲಿ ರೂ 1.5 ಲಕ್ಷದವರೆಗಿನ ಕೊಡುಗೆಗಳಿಗೆ ಸೆಕ್ಷನ್ 80 ಸಿ ಅಡಿಯಲ್ಲಿ ಯಾವುದೇ ತೆರಿಗೆ ಬರುವುದಿಲ್ಲ. ಇಲ್ಲಿ ಗಳಿಸಿದ ಬಡ್ಡಿ ಮತ್ತು ಕಾರ್ಪಸ್ ಸಹ ತೆರಿಗೆ ಮುಕ್ತವಾಗಿರುತ್ತದೆ.
ಮೆಚುರಿಟಿ ಅವಧಿಯ ಮೊದಲು ಪಿಪಿಎಫ್ ಮೊತ್ತವನ್ನು ಹಿಂಪಡೆಯಬಹುದೇ?
ಪಿಪಿಎಫ್ ಖಾತೆದಾರರಿಗೆ 5 ವರ್ಷಗಳ ನಂತರ ಹಣಕಾಸು ವರ್ಷದಲ್ಲಿ ಒಂದು ಬಾರಿ ಹಿಂಪಡೆಯಲು ಅನುಮತಿ ಇರುತ್ತದೆ.
15 ವರ್ಷಗಳ ನಂತರ ಏನಾಗುತ್ತದೆ ನಿಮ್ಮ ಪಿಪಿಎಫ್ ಖಾತೆ?
ಮುಕ್ತಾಯದ ಅವಧಿಯ 15 ವರ್ಷಗಳ ನಂತರ, ಹೂಡಿಕೆದಾರರು ಠೇವಣಿಗಳೊಂದಿಗೆ ಅಥವಾ ಇಲ್ಲದೆ ತಮ್ಮ ಖಾತೆಗಳನ್ನು ಮುಂದುವರಿಸಬಹುದು.
ಪಿಪಿಎಫ್ ಯೋಜನೆಯಲ್ಲಿ ತಿಂಗಳಿಗೆ 85,000 ರೂಪಾಯಿ ಆದಾಯ ಪಡೆಯುವುದು ಹೇಗೆ?
ಪಿಪಿಎಫ್ ಹೂಡಿಕೆ ಯೋಜನೆಯಲ್ಲಿ ನೀವು ತಿಂಗಳಿಗೆ 85,000 ರೂಪಾಯಿ ಗಳಿಸಬೇಕು ಅಂದರೆ, ಪ್ರತಿ ಹಣಕಾಸು ವರ್ಷದಲ್ಲಿ ರೂ 1.50 ಲಕ್ಷ ಹೂಡಿಕೆಯೊಂದಿಗೆ ಪ್ರಾರಂಭಿಸಬೇಕು ಮತ್ತು 15 ವರ್ಷಗಳ ಮೆಚುರಿಟಿ ಅವಧಿಯವರೆಗೆ ಅದನ್ನು ಮುಂದುವರಿಸಬೇಕು. ಬಡ್ಡಿಯ ಗರಿಷ್ಠ ಲಾಭವನ್ನು ಪಡೆಯಲು, ಪ್ರತಿ ಹಣಕಾಸು ವರ್ಷದಲ್ಲಿ ಏಪ್ರಿಲ್ 1-5 ರ ನಡುವೆ ಹೂಡಿಕೆ ಮಾಡಬೇಕು.
15 ವರ್ಷಗಳ ನಂತರ ಪಿಪಿಎಫ್ ಕಾರ್ಪಸ್
15 ವರ್ಷಗಳಲ್ಲಿ ನಿಮ್ಮ ಹೂಡಿಕೆಯ ಮೊತ್ತವು ರೂ 22,50,000 ಆಗಿರುತ್ತದೆ, ಇದರಲ್ಲಿ ಅಂದಾಜು ಬಡ್ಡಿ ರೂ 18,18,209 ಆಗಿರುತ್ತದೆ ಮತ್ತು ಅಂದಾಜು ಮೆಚ್ಯೂರಿಟಿ ರೂಪಾಯಿ 40,68,209 ಆಗಿರುತ್ತದೆ.
15 ವರ್ಷಗಳ ನಂತರ ಹೂಡಿಕೆದಾರರು ಮತ್ತೆ 5 ವರ್ಷಗಳ ವಿಸ್ತರಣೆಯನ್ನು ತೆಗೆದುಕೊಳ್ಳಬಹುದು ಮತ್ತು ಮೊದಲಿನ ರೀತಿಯಲ್ಲಿಯೇ ವರ್ಷಕ್ಕೆ 1.50 ಲಕ್ಷ ರೂ. ಹೂಡಿಕೆ ಮಾಡಿ ಆರಂಭಿಸಬಹುದು.
20 ವರ್ಷಗಳ ನಂತರ ಪಿಪಿಎಫ್ ಕಾರ್ಪಸ್
20 ವರ್ಷಗಳಲ್ಲಿ, ಒಟ್ಟು ಹೂಡಿಕೆಯು 30,00,000 ರೂ ಆಗಿರುತ್ತದೆ, ಅಂದಾಜು ಬಡ್ಡಿಯು ರೂ 36,58,288 ಆಗಿರುತ್ತದೆ ಮತ್ತು ಅಂದಾಜು ಕಾರ್ಪಸ್ ರೂ 66,58,288 ಆಗಿರುತ್ತದೆ. ಈ ಹಂತದಲ್ಲೂ, ಹೂಡಿಕೆದಾರರು ಖಾತೆ ವಿಸ್ತರಣೆಯನ್ನು ತೆಗೆದುಕೊಳ್ಳಬಹುದು
25 ವರ್ಷಗಳ ನಂತರ ಪಿಪಿಎಫ್ ಕಾರ್ಪಸ್
25 ವರ್ಷಗಳಲ್ಲಿ, ಒಟ್ಟು ಹೂಡಿಕೆಯು 37,50,000 ರೂ ಆಗಿರುತ್ತದೆ, ಅಂದಾಜು ಬಡ್ಡಿಯು ರೂ 99,26,621 ಆಗಿರುತ್ತದೆ ಮತ್ತು ಅಂದಾಜು ಕಾರ್ಪಸ್ ರೂ 1,03,08,015 ಆಗಿರುತ್ತದೆ.
29 ವರ್ಷಗಳ ನಂತರ ಪಿಪಿಎಫ್ ಕಾರ್ಪಸ್
29 ವರ್ಷಗಳಲ್ಲಿ, ಒಟ್ಟು ಹೂಡಿಕೆಯು 43,50,000 ರೂ ಆಗಿರುತ್ತದೆ, ಅಂದಾಜು ಬಡ್ಡಿಯು ರೂ 99,26,621 ಆಗಿರುತ್ತದೆ ಮತ್ತು ಅಂದಾಜು ಕಾರ್ಪಸ್ ರೂ 1,42,76,621 ಆಗಿರುತ್ತದೆ.
29 ವರ್ಷಗಳ ಹೂಡಿಕೆಯ ನಂತರ ಮುಂದೇನು?
ಇಲ್ಲಿಂದ ಮುಂದೆ, ಹೂಡಿಕೆದಾರರು ಸಂಪೂರ್ಣ ಕಾರ್ಪಸ್ ಮೇಲಿನ ಬಡ್ಡಿಯನ್ನು ಹಿಂಪಡೆಯಲು ಪ್ರಾರಂಭಿಸಬಹುದು. ವಿಸ್ತರಣೆಗಳ ಸಮಯದಲ್ಲಿ, ಖಾತೆದಾರರಿಗೆ ವರ್ಷಕ್ಕೊಮ್ಮೆ ಬಡ್ಡಿ ಮೊತ್ತವನ್ನು ಹಿಂಪಡೆಯಲು ಅನುಮತಿಸಲಾಗಿದೆ.
ನಿಮ್ಮ ಬಡ್ಡಿ ಮೊತ್ತ ಎಷ್ಟು?
7.1 ರಷ್ಟು ಬಡ್ಡಿ ದರದಲ್ಲಿ, ಒಂದು ವರ್ಷದಲ್ಲಿ ಬಡ್ಡಿಯು 10,13,640 ರೂ ಆಗಿರುತ್ತದೆ, ಅಂದರೆ ತಿಂಗಳಿಗೆ ಇಲ್ಲಿ ನಿಮಗೆ 85,000 ರೂಪಾಯಿ ಸಿಗುತ್ತದೆ.
jila panchayat taluka panchayat chunav ane
'ಚುನಾವಣೆ ವಿಚಾರ ನ್ಯಾಯಾಲಯಗಳ ಮುಂದಿರುವುದರಿಂದ ಅಲ್ಲಿಯೇ ಇತ್ಯರ್ಥವಾಗಬೇಕು. ಚುನಾವಣೆ ನಡೆಸಲು ನಾವಂತೂ ತಯಾರಾಗಿದ್ದೇವೆ' ಎಂದು ಸಿಎಂ ಸಿದ್ದರಾಮ...
-
ಸೋಮಲಿಂಗ್ ಉಪ್ಪಾರ್ ಅವರು ಎಲ್ಲಾ ಮೀಡಿಯಾಗಳಲ್ಲಿ ಸಕ್ರಿಯರಾಗಿ ಕಾರ್ಯನಿರ್ವಹಿಸಿದ್ದಾರೆ ಅವರೆಲ್ಲ ಲಿಂಕ್ ಗಳಿಗಾಗಿ ಕೆಳಗಿನವುಗಳನ್ನು ಸಂಪರ್ಕಿಸಬಹುದು 1 https://t.me...
-
ಸರ್ಕಾರಿ ನೌಕರರು / Govrnment Employees ಕ್ರಮ ಸಂಖ್ಯೆ Serial No ಹುದ್ಧೆ Designation ಗ್ರೂಪ್ Group ...
-
ಕರ್ನಾಟಕದಲ್ಲಿರುವ ವಸತಿ ರಹಿತರಿಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಜಾರಿಗೆ ತಂದಿವೆ ವಿವಿಧ ಯೋಜನೆಗಳು: ಅರ್ಜಿ ಸಲ್ಲಿಸೋದು ಹೇಗೆ? ಪ್ರತಿಯೊಬ್ಬರಿಗೂ ಸ್ವಂತ...